IND vs NED: ಏಕದಿನ ಕ್ರಿಕೆಟ್‌ನಲ್ಲಿ ಎಬಿ ಡಿವಿಲಿಯರ್ಸ್ ಸಾರ್ವಕಾಲಿಕ ದಾಖಲೆ ಮುರಿದ ರೋಹಿತ್ ಶರ್ಮಾ
ಭಾನುವಾರ, ನವೆಂಬರ್ 12ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ 45ನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಮತ್ತು ಭಾರತ ತಂಡಗಳು ಮುಖಾಮುಖಿಯಾದವು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಪಡೆದರು. ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನಿರ್ಮಿಸಿದರು.

ರೋಹಿತ್ ಶರ್ಮಾ ಅವರಂತೂ ದಾಖಲೆ ಮುರಿಯುವ ಉತ್ಸಾಹದಲ್ಲಿದ್ದಂತೆ ತೋರುತ್ತಿತ್ತು. ಬೆಂಗಳೂರಿನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಾವಳಿಯ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡಕ್ಕೆ ವೇಗದ ಆರಂಭವನ್ನು ನೀಡಿ ವಿಶ್ವಕಪ್‌ನಲ್ಲಿ ಅಗ್ರಸ್ಥಾನದಲ್ಲಿ ತಮ್ಮ ಓಟವನ್ನು ಮುಂದುವರೆಸಿದರು.
ದೀಪಾವಳಿ ಹಬ್ಬದ ದಿನದಂದು ಬೆಂಗಳೂರಿನಲ್ಲಿ ಸಿಕ್ಸರ್, ಬೌಂಡರಿಗಳ ಸದ್ದು ಕೇಳಿಬಂತು. ಈ ಬಾರಿ ಇಬ್ಬರು ಭಾರತೀಯ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ನೆದರ್ಲ್ಯಾಂಡ್ಸ್ ಬೌಲರ್‌ಗಳನ್ನು ದಂಡಿಸಿದರು.
ಭಾರತ ತಂಡ ಕೇವಲ 11.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿತ್ತು. ಇದೀಗ 26 ಓವರ್‌ಗಳಲ್ಲಿ 2 ವಿಕೆಟ್‌ಗೆ 184 ರನ್ ಕಲೆಹಾಕಿದ್ದು, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇದೇ ವೇಳೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಆಟಗಾರನೊಬ್ಬ ಬಾರಿಸಿದ ಅತಿ ಹೆಚ್ಚು ಸಿಕ್ಸರ್‌ಗಳ ವಿಷಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ಬಳಿಕ, ರೋಹಿತ್ ಶರ್ಮಾ ಅವರು ಎಬಿ ಡಿವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಿದ್ದರು.
ನೆದರ್ಲ್ಯಾಂಡ್ಸ್ ವಿರುದ್ಧದ 7ನೇ ಓವರ್‌ನಲ್ಲಿ ಆಫ್-ಸ್ಪಿನ್ನರ್ ಕಾಲಿನ್ ಅಕರ್‌ಮನ್ ಅವರ ಬೌಲಿಂಗ್‌ನಲ್ಲಿ ಲಾಂಗ್-ಆನ್ ಸ್ಟ್ಯಾಂಡ್‌ಗೆ ಸಿಡಿಸಿದ ಸಿಕ್ಸರ್ ರೋಹಿತ್ ಶರ್ಮಾ ಅವರು ದಾಖಲೆಯನ್ನು ಮುರಿದರು.
ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚಿನ ಸಿಕ್ಸರ್‌ಗಳು
ರೋಹಿತ್ ಶರ್ಮಾ - 24 ಇನ್ನಿಂಗ್ಸ್‌ಗಳಲ್ಲಿ 59 ಸಿಕ್ಸರ್ - 2023
ಎಬಿ ಡಿವಿಲಿಯರ್ಸ್ - 18 ಇನ್ನಿಂಗ್ಸ್‌ಗಳಲ್ಲಿ 58 ಸಿಕ್ಸರ್ - 2015
ಕ್ರಿಸ್ ಗೇಲ್ - 15 ಇನ್ನಿಂಗ್ಸ್‌ಗಳಲ್ಲಿ 56 ಸಿಕ್ಸರ್ - 2019
ಶಾಹಿದ್ ಅಫ್ರಿದಿ - 36 ಇನ್ನಿಂಗ್ಸ್‌ಗಳಲ್ಲಿ 48 ಸಿಕ್ಸರ್ - 2002
ರೋಹಿತ್ ಶರ್ಮಾ ಅವರು ಪಂದ್ಯದ ಮೊದಲ ಓವರ್‌ನಲ್ಲಿಯೇ ಆಫ್ ಸ್ಪಿನ್ನರ್ ಆರ್ಯನ್ ದತ್ ಅವರ ಬೌಲಿಂಗ್‌ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿ ಆಕ್ರಮಣಕಾರಿ ಆಟದ ಸೂಚನೆ ನೀಡಿದರು. ಮತ್ತೊಬ್ಬ ಆರಂಭಿಕ ಶುಭ್ಮನ್ ಗಿಲ್ ಕೂಡ ನೆದರ್ಲ್ಯಾಂಡ್ಸ್ ಬೌಲರ್‌ಗಳನ್ನು ನಾಶಮಾಡುವ ಉತ್ಸಾಹ ತೋರಿದರು.
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೀಪಾವಳಿ ಹಬ್ಬದ ದಿನದಂದು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು ಮತ್ತು ಇಬ್ಬರು ಭಾರತೀಯ ಆರಂಭಿಕರ ಕೆಲವು ನಿರ್ದಯ ಹಿಟ್ಟಿಂಗ್‌ಗೆ ಶಿಳ್ಳೆ, ಚಪ್ಪಾಳೆಗಳ ಸೌಂಡು ಜೋರಾಗಿತ್ತು.
ಶುಭ್ಮನ್ ಗಿಲ್ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 51 ರನ್ ಗಳಿಸಿ ಔಟಾದರೆ, ನಾಯಕ ರೋಹಿತ್ ಶರ್ಮಾ 54 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 61 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಭಾರತ ತಂಡದ ಸೆಮಿಫೈನಲ್ ಸ್ಥಾನ ಖಚಿತವಾಗಿದೆ ಮತ್ತು ಬುಧವಾರ, ನವೆಂಬರ್ 15ರಂದು ಮುಂಬೈನಲ್ಲಿ 2019ರ ಸೆಮಿಫೈನಲ್‌ನ ಪುನರಾವರ್ತನೆಯಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications