IND vs NED: ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು. ಭಾರತದ ಮಾಜಿ ನಾಯಕ ಈ ವಿಶ್ವಕಪ್ ಪಂದ್ಯಾವಳಿಯ 9 ಇನ್ನಿಂಗ್ಸ್‌ಗಳಲ್ಲಿ ತಮ್ಮ 7ನೇ ಐವತ್ತು ಪ್ಲಸ್ ಸ್ಕೋರ್ ಬಾರಿಸಿದರು.
ಭಾನುವಾರ, ನವೆಂಬರ್ 12ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 71ನೇ ಏಕದಿನ ಅರ್ಧಶತಕ ಪೂರ್ಣಗೊಳಿಸಿದರು.

ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರು ನೆದರ್ಲ್ಯಾಂಡ್ಸ್ ತಂಡದ ಹೊಸ ಚೆಂಡಿನ ದಾಳಿಯನ್ನು ಎದುರಿಸಿ ಕೇವಲ 11.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನಿರ್ಮಿಸಿದಾಗ ಅದು ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದಂದು ದೊಡ್ಡ ಪಟಾಕಿಗಳ ಪ್ರದರ್ಶನವಾಗಿತ್ತು.
ಆದಾಗ್ಯೂ, ಮೊದಲ ಪವರ್‌ಪ್ಲೇನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಹಿಂದಕ್ಕೆ ಎಳೆದ ಭಾರತ ತಂಡ ಶುಭ್ಮನ್ ಗಿಲ್ (51) ಮತ್ತು ರೋಹಿತ್ ಶರ್ಮಾ (61) ಅವರ ವಿಕೆಟ್ ಅನ್ನು ಸ್ವಲ್ಪ ಅಂತರದಲ್ಲಿ ಕಳೆದುಕೊಂಡಿತು.
ಶ್ರೇಯಸ್ ಅಯ್ಯರ್ 3ನೇ ವಿಕೆಟ್‌ಗೆ ವಿರಾಟ್ ಕೊಹ್ಲಿಯೊಂದಿಗೆ ಕೈಜೋಡಿಸಿದಾಗ, ಇಬ್ಬರು ಅನುಭವಿ ಬ್ಯಾಟರ್‌ಗಳು ತಂಡವನ್ನು ಮತ್ತೆ ಸ್ಥಿರಗೊಳಿಸಿದರು.

ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಅರ್ಧಶತಕ ಗಳಿಸಿದರು. ಈ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ 600 ರನ್‌ಗಳ ಗಡಿಯನ್ನು ತಲುಪಲು ಕೇವಲ 4 ರನ್‌ಗಳ ಅಂತರದಲ್ಲಿ ವಟಾದರು ಮತ್ತು ವಿಶ್ವಕಪ್ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಆದಾಗ್ಯೂ, ಬುಧವಾರ ಮುಂಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಆಡುವ ಕಾರಣ ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಲು ಇನ್ನೂ ಕನಿಷ್ಠ ಒಂದು ಪಂದ್ಯವನ್ನು ಹೊಂದಿದ್ದಾರೆ.
ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳು
ಸಚಿನ್ ತೆಂಡೂಲ್ಕರ್ - 11 ಪಂದ್ಯಗಳಲ್ಲಿ 673 ರನ್ - 2003
ಮ್ಯಾಥ್ಯೂ ಹೇಡನ್ - 11 ಪಂದ್ಯಗಳಲ್ಲಿ 659 ರನ್ - 2007
ರೋಹಿತ್ ಶರ್ಮಾ - 9 ಪಂದ್ಯಗಳಲ್ಲಿ 648 ರನ್ - 2019
ಡೇವಿಡ್ ವಾರ್ನರ್ - 10 ಪಂದ್ಯಗಳಲ್ಲಿ 647 ರನ್ - 2019
ಶಕೀಬ್ ಅಲ್ ಹಸನ್ - 8 ಪಂದ್ಯಗಳಲ್ಲಿ 606 ರನ್ - 2019
ವಿರಾಟ್ ಕೊಹ್ಲಿ - 9 ಪಂದ್ಯಗಳಲ್ಲಿ 596 - 2023
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದು ವಿರಾಟ್ ಕೊಹ್ಲಿಯ ಎರಡನೇ ಐವತ್ತು ಪ್ಲಸ್ ಸ್ಕೋರ್ ಆಗಿದೆ. ಅಲ್ಲಿ ಅವರು 33ಕ್ಕಿಂತ ಅಧಿಕ ಸರಾಸರಿ ಹೊಂದಿದ್ದಾರೆ. ಅವರು 2020ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 91 ಎಸೆತಗಳಲ್ಲಿ 89 ರನ್ ಬಾರಿಸುವ ಮೂಲಕಜ ತಮ್ಮ ಮೊದಲ ಐವತ್ತು ಪ್ಲಸ್ ಸ್ಕೋರ್ ಅನ್ನು ಗಳಿಸಿದರು.
ವಿರಾಟ್ ಕೊಹ್ಲಿ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 7 ಐವತ್ತು ಪ್ಲಸ್ ಸ್ಕೋರ್‌ಗಳನ್ನು ಬಾರಿಸಿದ ವಿಶ್ವಕಪ್ ಕ್ರಿಕೆಟ್‌ನಲ್ಲಿ ಮೂರನೇ ಬ್ಯಾಟರ್ ಎನಿಸಿದರು. 2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 9 ಇನ್ನಿಂಗ್ಸ್‌ಗಳಲ್ಲಿ 5 ಅರ್ಧಶತಕ ಮತ್ತು 2 ಶತಕಗಳನ್ನು ಬಾರಿಸಿದ್ದಾರೆ.
ಒಂದೇ ವಿಶ್ವಕಪ್‌ನಲ್ಲಿ ಹೆಚ್ಚಿನ ಐವತ್ತು-ಪ್ಲಸ್ ಸ್ಕೋರ್‌ಗಳು
ಸಚಿನ್ ತೆಂಡೂಲ್ಕರ್ - 2003ರಲ್ಲಿ 7
ಶಕೀಬ್ ಅಲ್ ಹಸನ್ - 2019ರಲ್ಲಿ 7
ವಿರಾಟ್ ಕೊಹ್ಲಿ - 2023ರಲ್ಲಿ 7
ಆದಾಗ್ಯೂ, ವಿರಾಟ್ ಕೊಹ್ಲಿ ಅವರು 29ನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ರೋಲೋಫ್ ವ್ಯಾನ್ ಡೆರ್ ಮೆರ್ವೆ ಅವರಿಗೆ ವಿಕೆಟ್ ನೀಡುವ ಮೂಲಕ ತಮ್ಮ ಐವತ್ತನ್ನು ತಮ್ಮ 50ನೇ ಏಕದಿನ ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.
ದೀಪಾವಳಿ ದಿನದಂದು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಏಕದಿನ ಶತಕಗಳ ದಾಖಲೆಯನ್ನು ಮುರಿಯುವ ಅವಕಾಶವನ್ನು ವಿರಾಟ್ ಕೊಹ್ಲಿ ಕಳೆದುಕೊಂಡಿದ್ದರಿಂದ, ಅವರ ಅಭಿಮಾನಿಗಳ ಮುಖದಲ್ಲಿ ನಿರಾಶೆ ಎದ್ದುಕಾಣುತ್ತಿತ್ತು ಹಾಗೂ ಬೆಂಗಳೂರು ಪ್ರೇಕ್ಷಕರು ಮೌನವಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications