Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇದು ವಾಶಿಂಗ್ಟನ್ vs ನ್ಯೂಜಿಲೆಂಡ್ ಪಂದ್ಯ ಎಂಬಂತಿತ್ತು: ಸುಂದರ್ ಆಟಕ್ಕೆ ಹಾರ್ದಿಕ್ ಮೆಚ್ಚುಗೆ

Ind vs NZ 1st T20I, Hardik Pandya praises all rounder Washington Sundar

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದರೂ ಭಾರತದ ಆಲ್‌ರೌಂಡರ್ ವಾಶೀಂಗ್ಟನ್ ಸುಂದರ್ ಪ್ರದರ್ಶರ್ನ ಎಲ್ಲರ ಗಮನಸೆಳೆದಿದೆ. ಮೊದಲಿಗೆ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವಾಶಿಂಗ್ಟನ್ ಸುಂದರ್ ಬಳಿಕ ಬ್ಯಾಟಿಂಗ್‌ನಲ್ಲಿಯೂ ಮೋಹಕ ಪ್ರದರ್ಶನ ನೀಡಿ ಟೀಮ್ ಇಂಡಿಯಾ ಪರವಾಗಿ ಹೋರಾಟದ ಪ್ರದರ್ಶನ ನೀಡಿದ್ದಾರೆ.

ಟೀಮ್ ಇಂಡಿಯಾದ ಯುವ ಆಲ್‌ರೌಂಡರ್ ಆಟಗಾರನ ಪ್ರದರ್ಶನಕ್ಕೆ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಪಂದ್ಯ ಬಹುತೇಕ ನ್ಯೂಜಿಲೆಂಡ್ vs ವಾಶಿಂಗ್ಟನ್ ಸುಂದರ್ ಎಂಬಂತಿತ್ತು ಎಂದಿದ್ದಾರೆ ಹಾರ್ದಿಕ್ ಪಾಂಡ್ಯ. ಸುಂದರ್ ಅದ್ಭುತ ಪ್ರದರ್ಶನದ ಹೊರತಾಗಿಯೂ ಭಾರತ 21 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

"ವಾಶಿಂಗ್ಟನ್ ಬೌಲಿಂಗ್, ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ನಡೆಸಿದ ರೀತಿ ನೋಡಿದಾಗ ಇದು ನ್ಯೂಜಿಲೆಂಡ್ vs ಭಾರತ ಎನ್ನುವುದಕ್ಕಿಂತ ಹೆಚ್ಚಾಗಿ ನ್ಯೂಜಿಲೆಂಡ್ vs ವಾಶಿಂಗ್ಟನ್ ಸುಂದರ್ ನಡುವಿನ ಪಂದ್ಯ ಎಂಬಂತೆ ಭಾಸವಾಗುತ್ತದೆ. ಈತ ಹಾಗೂ ಅಕ್ಷರ್ ಪಟೇಲ್ ಆಡುತ್ತಿರುವರೀತಿಯನ್ನು ಮುಂದುವರಿಸಿದರೆ ಭಾರತ ಕ್ರಿಕೆಟ್‌ ತಂಡದ ಬೆಳವಣಿಗೆಗೆ ಬಹಳ ಸಹಕಾರಿಯಾಗಲಿದೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡದ ಪರವಾಗಿ ಡೆವೋನ್ ಕಾನ್ವೆ ಹಾಗೂ ಡೆರೆಲ್ ಮಿಚೆಲ್ ಭರ್ಜರಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ನ್ಯೂಜಿಲೆಂಡ್ ತಂಡ 6 ವಿಕೆಟ ಕಳೆದುಕೊಂಡು 176 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಬಳಿಕ ಬೌಲಿಂಗ್‌ನಲ್ಲಿ ಕಿವೀಸ್ ತಂಡದ ಪರವಾಗಿ ಮಿಚೆಲ್ ಸ್ಯಾಂಟ್ನರ್, ಮಿಚೆಲ್ ಬ್ರೇಸ್‌ವೆಲ್ ಮತ್ತು ಲೂಕಿ ಫರ್ಗ್ಯೂಸನ್ ತಲಾ 2 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ. ಈ ಮೂಲಕ ಏಕದಿನ ಸರಣಿಯಲ್ಲಿ ಅನುಭವಿಸಿದ 3-0 ಅಂತರದ ಸೋಲಿನ ಬಳಿಕ ಚುಟುಕು ಮಾದರಿಯಲ್ಲಿ ಕಿವಿಸ್ ಪಡೆ ಭರ್ಜರಿಯಾಗಿ ತಿರುಗಿ ಬೀಳುವಲ್ಲಿ ಯಶಸ್ವಿಯಾಗಿದೆ.

ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ಸದ್ಯ 1-0 ಅಂತರದಿಂದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದ್ದು ಲಕ್ನೋದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ.

ನ್ಯೂಜಿಲೆಂಡ್ ಆಡುವ ಬಳಗ: ಫಿನ್ ಅಲೆನ್, ಡೆವೊನ್ ಕಾನ್ವೇ(ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್

ಭಾರತ ಆಡುವ ಬಳಗ: ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್

Story first published: Saturday, January 28, 2023, 2:35 [IST]
Other articles published on Jan 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+