ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs NZ 2nd T20: ಭಾರತ ತಂಡದಲ್ಲಿ ಹಲವು ಬದಲಾವಣೆ: ಪೃಥ್ವಿ ಶಾ, ಮುಖೇಶ್ ಕುಮಾರ್ ಕಣಕ್ಕೆ?

Ind vs NZ 2nd T20: Hardik Pandya Looking For Some Changes In Must Win Game

ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿ ಟಿ20 ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿ ಮೊದಲನೇ ಪಂದ್ಯದಲ್ಲಿ ಕಣಕ್ಕಿಳಿದ ಭಾರತ ತಂಡಕ್ಕೆ ನ್ಯೂಜಿಲೆಂಡ್ ಆಘಾತ ನೀಡಿದೆ. ರಾಂಚಿಯನಲ್ಲಿ ನಡೆದ ಮೊದಲನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 21 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಸರಣಿಯ ಎರಡನೇ ನಿರ್ಣಾಯಕ ಟಿ20 ಪಂದ್ಯ ಜನವರಿ 29 ರಂದು ಲಕ್ನೋದ ಅಟಲ್ ಬಿಹಾರ್ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ

ಎರಡನೇ ತಂಡದಲ್ಲಿ ಹಲವು ಬದಲಾವಣೆ ಮಾಡಲು ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಚಿಂತನೆ ನಡೆಸಿದ್ದಾರೆ. ಅರ್ಷದೀಪ್ ಸಿಂಗ್‌ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾದ ಕಾರಣ ಅವರನ್ನು ಎರಡನೇ ಟಿ20 ಪಂದ್ಯದಲ್ಲಿ ಹೊರಗಿಡುವ ಸಾಧ್ಯತೆ ಇದೆ.

ಬ್ಯಾಟಿಂಗ್‌ನಲ್ಲಿ ಕೂಡ ಪ್ರಮುಖ ಬದಲಾವಣೆ ಮಾಡುವ ಬಗ್ಗೆ ಪಾಂಡ್ಯ ಮತ್ತು ದ್ರಾವಿಡ್ ಯೋಜಿಸಿದ್ದಾರೆ. ಮೊದಲನೇ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಶತಾಯ ಗತಾಯ ಎರಡನೇ ಪಂದ್ಯವನ್ನು ಗೆಲ್ಲಲೇಬೇಕೆನ್ನುವ ಯೋಜನೆಯಲ್ಲಿದೆ.

SA Vs Eng 1st ODI: ಚೇಸಿಂಗ್‌ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್‌ಗಳ ಜಯSA Vs Eng 1st ODI: ಚೇಸಿಂಗ್‌ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್‌ಗಳ ಜಯ

ಪೃಥ್ವಿ ಶಾಗೆ ಸ್ಥಾನ ಖಚಿತ?

ಪೃಥ್ವಿ ಶಾಗೆ ಸ್ಥಾನ ಖಚಿತ?

ಶುಭಮನ್ ಗಿಲ್ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಪರಿಣಾಮ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು. ಆದರೆ ಮೊದಲನೇ ಟಿ20 ಪಂದ್ಯದಲ್ಲಿ ರನ್ ಗಳಿಸುವಲ್ಲಿ ಅವರು ವಿಫಲವಾದರು. 6 ಎಸೆತಗಳಲ್ಲಿ 7 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಪವರ್ ಪ್ಲೇನಲ್ಲಿ ಸ್ಫೋಟಕ ಆಟವಾಡುವ ಪೃಥ್ವಿ ಶಾಗೆ ಅವಕಾಶ ನೀಡದಿರುವ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಎರಡನೇ ಪಂದ್ಯದಲ್ಲಿ ಗಿಲ್ ಬದಲಿಗೆ ಪೃಥ್ವಿ ಶಾ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಗಿಲ್‌ ತಂಡದಲ್ಲಿ ಉಳಿದುಕೊಂಡರೂ, ರಾಹುಲ್ ತ್ರಿಪಾಠಿ ಬದಲಿಗೆ ಪೃಥ್ವಿ ಶಾ ಆಯ್ಕೆಯಾಗುವ ಸಾಧ್ಯತೆ ಇದೆ.

 ಮುಖೇಶ್ ಕುಮಾರ್ ಆಡುವ ಸಾಧ್ಯತೆ

ಮುಖೇಶ್ ಕುಮಾರ್ ಆಡುವ ಸಾಧ್ಯತೆ

ಇನ್ನು ಮೊದಲನೇ ಟಿ20 ಪಂದ್ಯದ ಕೊನೆಯ ಓವರ್ ನಲ್ಲಿ ಕೆಟ್ಟ ಬೌಲಿಂಗ್ ಪ್ರದರ್ಶನ ನೀಡಿದ ಅರ್ಷದೀಪ್ ಸಿಂಗ್ ಕೂಡ ಎರಡನೇ ಟಿ20 ಪಂದ್ಯದಲ್ಲಿ ಸ್ಥಾನ ಕಳೆದುಕೊಳ್ಳುವ ಅವಕಾಶ ಇದೆ.

4 ಓವರ್ ಗಳಲ್ಲಿ 51 ರನ್ ಬಿಟ್ಟುಕೊಟ್ಟು ಕೇವಲ 1 ವಿಕೆಟ್ ಪಡೆದು ಸಾಕಷ್ಟು ದುಬಾರಿಯಾಗಿದ್ದರು. ಕೊನೆಯ ಓವರ್ ನಲ್ಲಿ ನೋಬಾಲ್ ಎಸೆದ ಅರ್ಷದೀಪ್ ಸಿಂಗ್ 27 ರನ್ ಬಿಟ್ಟುಕೊಟ್ಟಿದ್ದರು. ಅರ್ಷದೀಪ್ ಬದಲಿಗೆ ಪ್ರತಿಭಾವಂತ ವೇಗದ ಬೌಲರ್ ಮುಖೇಶ್ ಕುಮಾರ್ ಎರಡನೇ ಟಿ20 ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಮುಖೇಶ್ ಕುಮಾರ್ ಭಾರತಕ್ಕಾಗಿ ಆಡಲು ಕಾಯುತ್ತಿದ್ದಾರೆ.

 ಉಭಯ ತಂಡಗಳ ಸಂಭಾವ್ಯ ಆಡುವ ಬಳಗ

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ

ಭಾರತ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್/ ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್ (ಉಪನಾಯಕ), ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್/ ಅರ್ಷದೀಪ್ ಸಿಂಗ್.

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್

Story first published: Saturday, January 28, 2023, 15:37 [IST]
Other articles published on Jan 28, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X