IND vs NZ: ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ; ಪ್ರೇಕ್ಷಕರಿಂದ ಭಾರೀ ಆಕ್ರೋಶ!
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಪುಣೆಯಲ್ಲಿ ನಡೆಯುತ್ತಿದೆ. ಆದರೆ ಪಂದ್ಯದ ವೇಳೆ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನೀರಿನ ಕೊರತೆ ಉಂಟಾಗಿತ್ತು. ಕುಡಿವ ನೀರಿನ ವ್ಯವಸ್ಥೆ ಇಲ್ಲ ಎಂದು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಶುರುವಾದ ಪುಣೆ ಟೆಸ್ಟ್ ಪಂದ್ಯದ ಮೊದಲ ದಿನದಾಟದಂದೇ ಎಂಸಿಎ ಸ್ಟೇಡಿಯಂನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ತಲೆಧೋರಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ವಿರುದ್ಧ ಪ್ರೇಕ್ಷಕರು ಘೋಷಣೆ ಕೂಗಿ ಅಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನೋಡಲು ಗುರುವಾರ ಸುಮಾರು 18 ಸಾವಿರ ಪ್ರೇಕ್ಷಕರು ಪುಣೆ ಸ್ಟೇಡಿಯಂಗೆ ಬಂದಿದ್ದರು. ಕ್ರೀಡಾಂಗಣದ ಬಹುತೇಕ ಸ್ಟ್ಯಾಂಡ್‌ಗಳಲ್ಲಿ ಚಾವಣಿ ಇಲ್ಲದ ಕಾರಣ ಪ್ರೇಕ್ಷಕರು ಬಿಸಿಲಿನಿಂದ ತೊಂದರೆ ಅನುಭವಿಸಿದ್ದರು. ಮೊದಲ ಸೆಷನ್ ನಂತರ ಪ್ರೇಕ್ಷಕರು ಸ್ಟೇಡಿಯಂನಲ್ಲಿ ನಿರ್ಮಿಸಲಾದ ಕುಡಿಯುವ ನೀರಿನ ಕೇಂದ್ರಕ್ಕೆ ತೆರಳಿದ್ದರು. ಅಲ್ಲಿ ನೀರಿಲ್ಲದ ಕಾರಣ ಪ್ರೇಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಎಂಸಿಎ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದರು.
ಗಗನಕ್ಕೇರಿದ ನೀರಿನ ಬೆಲೆ
ಸ್ಡೇಡಿಯಂನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಪ್ರೇಕ್ಷಕರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಬಿಸಿಲು ಹೆಚ್ಚಿರುತ್ತದೆ. ಆದರೆ, ಸ್ಟೇಡಿಯಂನಲ್ಲಿ ನೀರು ಸಿಗುತ್ತಿಲ್ಲ. ಅಭಿಮಾನಿಗಳಿಗೆ ಕನಿಷ್ಠ ಸೌಲಭ್ಯಗಳನ್ನು ನೀಡಲಾಗದಿರುವಾಗ ಸ್ಟೇಡಿಯಂ ಬಗ್ಗೆಅಭಿಮಾನ ಏಕೆ? ಎಂದು ಪ್ರೇಕ್ಷಕರು ಪ್ರಶ್ನಿಸಿದ್ದಾರೆ.
ಪುಣೆಯ ಸ್ಟೇಡಿಯಂನಲ್ಲಿ ನೀರಿನ ಸಮಸ್ಯೆ ಇರುವುದರಿಂದ ಇದನ್ನೇ ಅಲ್ಲಿನ ಸ್ಥಳೀಯ ಅಂಗಡಿಯವರು ಬಂಡವಾಳ ಮಾಡಿಕೊಂಡಿದ್ದಾರೆ. 100 ಎಂಎಲ್ ನೀರನ್ನು 80 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಅಂದರೆ ಯಾರಾದರೂ ಒಂದು ಲೀಟರ್ ನೀರು ಖರೀದಿಸಬೇಕಾದರೆ 800 ರೂ. ಕೊಡಬೇಕು. ಕೆಲವು ಪ್ರೇಕ್ಷಕರು 100 ಎಂಎಲ್ ನೀರಿಗೆ 80 ರೂ. ಕೊಟ್ಟು ಖರೀದಿ ಮಾಡಿದ್ದಾರೆ.
ಕ್ಷಮೆಯಾಚಿಸಿದ ಎಂಸಿಎ
ಸ್ಟೇಡಿಯಂನಲ್ಲಿ ಪ್ರೇಕ್ಷಕರಿಗೆ ಉಂಟಾದ ಸಮಸ್ಯೆಗಳಿಗಾಗಿ ಎಂಸಿಎ ಕ್ಷಮೆಯಾಚಿಸಿದೆ. ಸ್ಟೇಡಿಯಂನಲ್ಲಿ ನೀರಿನ ಸಮಸ್ಯೆ ಬಗೆಹರಿಸಿದ್ದೇವೆ. ಈ ಬಾರಿ ಪ್ರೇಕ್ಷಕರಿಗೆ ತಂಪು ಕುಡಿಯುವ ನೀರು ನೀಡಲು ನಿರ್ಧರಿಸಿದ್ದೇವೆ. ಆದರೆ, ಹೆಚ್ಚಿನ ಜನಸಂದಣಿಯಿಂದಾಗಿ ಊಟದ ವಿರಾಮದ ವೇಳೆಗೆ ಕೆಲವು ಮಳಿಗೆಗಳು ನೀರಿಲ್ಲದವು.ನೀರಿನ ಘಟಕಗಳನ್ನು ಪುನಃ ತುಂಬಿಸಲು ನಮಗೆ 15-20 ನಿಮಿಷಗಳನ್ನು ತೆಗೆದುಕೊಂಡಿತ್ತು. ಮತ್ತಷ್ಟು ವಿಳಂಬವಾಗುವ ಕಾರಣ ಅವರಿಗೆ ಉಚಿತ ನೀರಿನ ಬಾಟಲಿಗಳನ್ನು ನೀಡಲಾಗಿದೆ ಎಂದು ಎಂಸಿಎ ಕಾರ್ಯದರ್ಶಿ ಕಮಲೇಶ್ ಪಿಸಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications