For Quick Alerts
ALLOW NOTIFICATIONS  
For Daily Alerts
 

IND vs NZ Test: ಭಾರತಕ್ಕೆ 359 ರನ್‌ಗಳ ಗುರಿಯನ್ನು ನೀಡಿದ ನ್ಯೂಜಿಲೆಂಡ್‌

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಎರಡನೇ ಟೆಸ್ಟ್‌ ಪುಣೆಯಲ್ಲಿ ನಡೆಯುತ್ತಿದೆ. ಈ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಎರಡನೇ ಇನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟ್ ಮಾಡಿದೆ. ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಲು 359 ರನ್‌ಗಳ ಅವಶ್ಯಕತೆ ಇದೆ.

ಶನಿವಾರ ಮೂರನೇ ದಿನದಾಟವನ್ನು ನ್ಯೂಜಿಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 198 ರನ್‌ಗಳನ್ನು ಮುಂದುವರೆಸಿ, 255 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 103 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಟೆಸ್ಟ್‌ ಪಂದ್ಯವನ್ನು ಗೆಲ್ಲಲು ಟೀಮ್ ಇಂಡಿಯಾಕ್ಕೆ 359 ರನ್‌ಗಳ ಕಠಿಣ ಗುರಿಯನ್ನು ಕಿವೀಸ್‌ ನೀಡಿದೆ.

IND vs NZ 2nd Test India Chasing 359 Runs to Win Against New Zealand in Pune

ಐದು ವಿಕೆಟ್‌ ಪಡೆಯಲು ಟೀಮ್ ಇಂಡಿಯಾ 16.4 ಓವರ್‌ ತೆಗೆದುಕೊಂಡಿತು. ಟೀಮ್ ಇಂಡಿಯಾ ಪರ ಸ್ಪಿನ್‌ ಬೌಲರ್‌ಗಳೇ ಶನಿವಾರ ಬೌಲಿಂಗ್ ಆರಂಭಿಸಿದರು. ರವೀಂದ್ರ ಜಡೇಜಾ ಮೊದಲ ಓವರ್‌ ಬೌಲ್‌ ಮಾಡಿದರು. ಆರನೇ ವಿಕೆಟ್‌ಗೆ ಟಾಮ್ ಬ್ಲಂಡೆಲ್‌ ಹಾಗೂ ಗ್ಲೇನ್‌ ಫಿಲಿಪ್ಸ್ ಜೋಡಿ ಉತ್ತಮವಾಗಿ ಆಡುವ ಸೂಚನೆ ನೀಡಿತು. ಈ ಜೋಡಿ 89 ಎಸೆತಗಳನ್ನು ಎದುರಿಸಿ 48 ರನ್‌ ಸೇರಿಸಿ ಮುನ್ನಡೆಯುತ್ತಿದ್ದಾಗ ಬ್ಲಂಡೆಲ್‌, ರವೀಂದ್ರ ಜಡೇಜಾ ಎಸೆತದಲ್ಲಿ ಔಟ್ ಆದರು.

ಆಲ್‌ರೌಂಡರ್‌ ಗ್ಲೇನ್‌ ಫಿಲಿಪ್ಸ್‌ ತಮ್ಮ ಅನುಭವದ ಲಾಭ ಪಡೆದು ಬ್ಯಾಟ್ ಮಾಡಿದರು. ಇವರು 82 ಎಸೆತಗಳಲ್ಲಿ ಅಜೇಯ 48 ರನ್‌ ಸಿಡಿಸಿದರು. ಇದರಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳು ಸೇರಿವೆ. ಉಳಿದ ಬ್ಯಾಟರ್‌ಗಳು ಡಬಲ್‌ ಡಿಜಿಟ್‌ ಮುಟ್ಟುವಲ್ಲಿ ವಿಫಲರಾದರು.

ಜಡೇಜಾಗೆ ಮೂರು ವಿಕೆಟ್

ಟೀಮ್ ಇಂಡಿಯಾದ ಪರ ರವೀಂದ್ರ ಜಡೇಜಾ ಅವರು ಅಮೋಘ ದಾಳಿಯನ್ನು ನಡೆಸಿದ್ದಾರೆ. ಇವರು 72 ರನ್‌ ನೀಡಿ ಪ್ರಮುಖ ಮೂರು ವಿಕೆಟ್‌ ಕಬಳಿಸಿದ್ದಾರೆ. ಶುಕ್ರವಾರ ವಾಶಿಂಗ್ಟನ್‌ ಸುಂದರ್‌ ನ್ಯೂಜಿಲೆಂಡ್‌ನ 4 ಬ್ಯಾಟರ್‌ಗಳಿಗೆ ಖೆಡ್ಡಾ ತೊಡಿದ್ದರು. ಆಪ್‌ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್‌ 2 ವಿಕೆಟ್‌ ಪಡೆದಿದ್ದಾರೆ.

ರನ್‌ ಔಟ್ ವೈರಲ್‌

ಎರಡನೇ ಇನಿಂಗ್ಸ್‌ನ 70ನೇ ಓವರ್‌ ರವೀಂದ್ರ ಜಡೇಜಾ ಬೌಲಿಂಗ್ ಮಾಡಿದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಔಟ್ ಸೈಡ್‌ ಆಫ್‌ ಸ್ಟಂಪ್‌ ಎಸೆದ ಚೆಂಡನ್ನು ಗ್ಲೇನ್ ಫಿಲಿಪ್ಸ್‌ ಡೀಪ್‌ ಕವರ್‌ನತ್ತ ತಳ್ಳಿ ಎರಡು ರನ್‌ ಪಡೆಯಲು ಮುಂದಾದರು. ಈ ವೇಳೆ ಅಲ್ಲಿ ಫೀಲ್ಡ್‌ ಮಾಡುತ್ತಿದ್ದ ವಾಶಿಂಗ್ಟನ್ ಸುಂದರ್‌ ಚೆಂಡನ್ನು ಹಿಡಿದು ಎಸೆದರು. ಈ ವೇಳೆ ಕೊಂಚ ನಿಧಾನವಾಗಿ ಅವರು ಫೀಲ್ಡ್‌ ಮಾಡಿದ್ದರಿಂದ ಜಡ್ಡು ಕೊಂಚ ಗರಂ ಆದರು. ಆದರೆ ವಾಷಿಂಗ್ಟನ್‌ ಸುಂದರ್‌ ಎಸೆದ ಚೆಂಡನ್ನು ಒಂದೇ ಕೈಯಲ್ಲಿ ಹಿಡಿದು ಸ್ಟಂಪ್‌ಗೆ ಹಚ್ಚಿದರು. ಸೆಂಟಿ ಮೀಟರ್‌ ಅಂತರದಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ ಕ್ರೀಸ್‌ನಿಂದ ದೂರ ಉಳಿದಿದ್ದರು. ಹೀಗಾಗಿ ಔಟ್ ಆದರು. ಈ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Story first published: Saturday, October 26, 2024, 10:42 [IST]
Other articles published on Oct 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+