ಭಾರತ vs ನ್ಯೂಜಿಲೆಂಡ್ 1st ODI: ನಾಯಕ ರೋಹಿತ್ ಶರ್ಮಾ ನಿದ್ದೆಗೆಡಿಸಿದೆ ಈ ಮೂರು ಗೊಂದಲಗಳು!

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಏಕದಿನ ಸರಣಿ ಬುಧವಾರದಿಂದ ಆರಂಭವಾಗಲಿದೆ. ಮೊದಲ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು ಇದಕ್ಕಾಗಿ ಎರಡು ತಂಡಗಳು ಕೂಡ ಸಂಪೂರ್ಣವಾಗಿ ಸಜ್ಜಾಗಿದೆ. ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ಆಟಗಾರು ಈಗಾಗಲೇ ಹೈದರಾಬಾದ್‌ಗೆ ತಲುಪಿದ್ದು ಮೊದಲ ಪಂದ್ಯಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ತಂಡದ ಮ್ಯಾನೇಜ್‌ಮೆಂಟ್‌ಗೆ ಕಠಿಣ ಸವಾಲಿದೆ ಎಂಬುದರಲ್ಲಿ ಸ್ಪಷ್ಟ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ 11ರ ಬಳಗವನ್ನು ಆಯ್ಕೆ ಮಾಡುವುದು ರೋಹಿತ್‌ಗೆ ಸಾಕಷ್ಟು ಗೊಂದಲ ಮೂಡಿಸುವುದರಲ್ಲಿ ಅನುಮಾನವಿಲ್ಲ. ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದ್ದರೂ ತಂಡದಿಂದ ಯಾರನ್ನು ಹೊರಗಿಡುವುದು ಸೂಕ್ತ ಎಂಬುದು ರೋಹಿತ್ ಶರ್ಮಾಗೆ ಬಹುವಾಗಿ ಕಾಡುತ್ತಿದೆ. ಅದರಲ್ಲೂ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾಗೆ ಈ ಮೂರು ಗೊಂದಲಗಳು ಅಕ್ಷರಶಃ ನಿದ್ದೆಗೆಡಿಸಿದೆ. ಇದರಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನಾಯಕನಿಗೆ ಸಾಧ್ಯವಾದರೆ ತಂಡ ಮೊದಲ ಪಂದ್ಯ ಗೆದ್ದು ಮುನ್ನಡೆ ಸಾಧಿಸುವುದು ಖಚಿತ.
ಹಾಗಾದರೆ ಮೊದಲ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕಾಡುತ್ತಿರುವ ಮೂರು ಗೊಂದಲಗಳು ಯಾವುದು? ಮುಂದೆ ಓದಿ..

ಕುಲ್‌ದೀಪ್ ಯಾದವ್ vs ಯುಜುವೇಂದ್ರ ಚಾಹಲ್
ಟಿ20 ವಿಶ್ವಕಪ್‌ಗೂ ಮುನ್ನ ಸಾಕಷ್ಟು ಸ್ಪಿನ್ನರ್‌ಗಳನ್ನು ಪ್ರಯೋಗಕ್ಕಿಳಿಸಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿತ್ತು. ಈಗ ಪ್ರಮುಖವಾಗಿ ಯುಜುವೇಂದ್ರ ಚಾಹಲ್ ಹಾಗೂ ಕುಲ್‌ದೀಪ್ ಯಾದವ್ ಮೇಲೆಯೇ ಹೆಚ್ಚಿನ ಭರವಸೆಯಿಟ್ಟುಕೊಂಡಿರುವುದು ಸ್ಪಷ್ಟವಾಗಿದೆ. ಈ ಇಬ್ಬರ ಪೈಕಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕುಲ್‌ದೀಪ್ ಯಾದವ್ ನೀಡಿರುವ ಪ್ರದರ್ಶನ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಭಾರತದ ನೆಲದಲ್ಲಿ ಚಾಹಲ್ ಕೂಡ ಅತ್ಯಂತ ಪರಿಣಾಮಕಾರಿ ಸ್ಪಿನ್ನರ್ ಎಂಬುದರಲ್ಲಿ ಅನುಮಾನವಿಲ್ಲ. ಹೈದರಾಬಾದ್ ಸ್ಟೇಡಿಯಂ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವನ್ನು ನೀಡುವ ಕಾರಣ ಈ ಇಬ್ಬರ ಪೈಕಿ ಒಬ್ಬರನ್ನು ಆಯ್ಕೆ ಮಾಡುವುದು ರೋಹಿತ್ ಶರ್ಮಾಗೆ ಅತ್ಯಂತ ಕಠಿಣ ಸವಾಲಾಗಿರಲಿದೆ.

ವಾಶಿಂಗ್ಟನ್ ಸುಂದರ್ vs ಉಮ್ರಾನ್ ಮಲಿಕ್
ವಾಶಿಂಗ್ಟನ್ ಸುಂದರ್ ಹಾಗೂ ಉಮ್ರಾನ್ ಮಲಿಕ್ ಇಬ್ಬರು ಕೂಡ ಸಂಪೂರ್ಣ ಭಿನ್ನವಾಗಿರುವ ಆಟಗಾರರು ನಿಜ. ಆದರೆ ತಂಡದ ಸಂಯೋಜನೆಯ ದೃಷ್ಟಿಯಿಂದ ಈ ಇಬ್ಬರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ತಂಡದಲ್ಲಿ ಆಡುವ ಬಳಗವನ್ನು ಗಮನಸಲ್ಲಿಟ್ಟುಕೊಂಡಾಗ ಈ ಇಬ್ಬರನ್ನು ಕೂಡ ಒಂದೇ ಬಾರಿಗೆ ಕಣಕ್ಕಿಳಿಸುವುದು ಅಸಾಧ್ಯ. ಹೀಗಾಗಿ ಈ ಇಬ್ಬರಲ್ಲಿ ಯಾರನ್ನು ಆಡಿಸುವುದು ಉತ್ತಮ ಎಂಬುದು ಕೂಡ ರೋಹಿತ್ ಶರ್ಮಾಗೆ ಸಾಕಷ್ಟು ಕಾಡುವ ಪ್ರಶ್ಬೆಯಾಗಲಿದೆ.

ಶುಬ್ಮನ್ ಗಿಲ್ vs ಇಶಾನ್ ಕಿಶನ್
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿಯೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂದಿದ್ದ ದೊಡ್ಡ ಪ್ರಶ್ನೆಯೆಂದರೆ ಇಶಾನ್ ಕಿಶನ್ ಹಾಗೂ ಶುಬ್ಮನ್ ಗಿಲ್ ಮಧ್ಯೆ ಯಾರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವುದು ಎಂಬುದಾಗಿತ್ತು. ಆರಂಬಿಕರಾಗಿ ಇಬ್ಬರು ಕೂಡ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬಿತುಪಡಿಸಿದ್ದಾರೆ. ಇನ್ನು ಲಂಕಾ ವಿರುದ್ಧದ ಸರಣಿಯಲ್ಲಿ ಗಿಲ್ ಸಿಕ್ಕ ಅವಕಾಶವನ್ನು ಮತ್ತಷ್ಟು ಅದ್ಭುತವಾಗಿ ಬಳಸಿಕೊಂಡಿರುವುದು ಕೂಡ ಗಮನಿಸಬೇಕಿದೆ. ಹೀಗಾಗಿ ನಾಯಕ ರೋಹಿತ್ ಶರ್ಮಾ ಮುಂದೆ ಮತ್ತೆ ಇದೇ ಪ್ರಶ್ನೆ ಕಾಡಲು ಆರಂಭವಾಗಿದೆ.

ಟೀಮ್ ಇಂಡಿಯಾ ಸ್ಕ್ವಾಡ್ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications