IND vs NZ: ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 235, ಜಡೇಜಾ 5, ವಾಷಿಂಗ್ಟನ್ ಸುಂದರ್ 4
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದಲ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಬೌಲರ್ಸ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಕಿವೀಸ್ ತಂಡದ ವಿಲ್ ಯಂಗ್ ಹಾಗೂ ಡೇರಿಲ್ ಮಿಚೆಲ್ ಅವರ ಅರ್ಧಶತಕದ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 235 ರನ್‌ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 65.4 ಓವರ್‌ಗಳಲ್ಲಿ 235 ರನ್ ಸೇರಿಸಿ ಆಲೌಟ್ ಆಯಿತು. ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ಆರಂಭಿಸಿದ್ದು, ದಿನದಾಟದಂತ್ಯಕ್ಕೆ 4 ವಿಕೆಟ್‌ಗೆ 86 ರನ್ ಕಲೆ ಹಾಕಿದೆ. ಭರವಸೆಯ ಬ್ಯಾಟರ್ ಶುಭಮನ್ ಗಿಲ್ (ಅಜೇಯ 31) ಹಾಗೂ ರಿಷಭ್ ಪಂತ್ (ಅಜೇಯ 1) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ನ್ಯೂಜಿಲೆಂಡ್ ಪರ ಇನಿಂಗ್ಸ್ ಆರಂಭಿಸಿದ ಡ್ವೇನ್ ಕಾನ್ವೆ ಹಾಗೂ ಮಧ್ಯಮ ಕ್ರಮಾಂಕದ ರಚಿನ್ ರವೀಂದ್ರ ಸಿಂಗಲ್ ಡಿಜಿಟ್‌ನಲ್ಲಿ ಆಟಮುಗಿಸಿದರು. ಆರಂಭಿಕ ಟಾಮ್ ಲಾಥಮ್ 28 ರನ್ ಸಿಡಿಸಿ ಔಟ್ ಆದರು.
ಮೂರನೇ ವಿಕೆಟ್‌ಗೆ 81 ರನ್ ಜೊತೆಯಾಟ
ಡೇರಿಲ್ ಮಿಚೆಲ್ ಹಾಗೂ ವಿಲ್ ಯಂಗ್ ಅಮೋಘ ಜೊತೆಯಾಟ ನೀಡಿದರು. ಈ ಜೋಡಿ 151 ಎಸೆತಗಳಲ್ಲಿ 87 ರನ್ ಸೇರಿಸಿತು. ವಿಲ್ ಯಂಗ್ 138 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 71 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಡೇರಿಲ್ ಮಿಚೆಲ್ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು ಭಾರತದ ಬೌಲರ್‌ಗಳನ್ನು ಕಾಡಿದರು. ಇವರು 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 82 ರನ್ ಸಿಡಿಸಿ ಔಟ್ ಆದರು.
76 ರನ್‌ಗಳಿಗೆ 7 ವಿಕೆಟ್
ಒಂದು ಹಂತದಲ್ಲಿ ನ್ಯೂಜಿಲೆಂಡ್ 159 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆಗ ವಿಲ್ ಯಂಗ್ ಅವರಿಗೆ ರವೀಂದ್ರ ಜಡೇಜಾ ಖೆಡ್ಡಾ ತೋಡಿದರು. ಇಲ್ಲಿಂದ ಬಂದ ಬ್ಯಾಟರ್‌ಗಳು ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇಲ್ಲಿಂದ ದೊಡ್ಡ ಜೊತೆಯಾಟಗಳು ಬಾರದೆ ಕಿವೀಸ್ ಹಿನ್ನಡೆ ಅನುಭವಿಸಿತು. 76 ರನ್ ಸೇರಿಸುವಷ್ಟರಲ್ಲಿ ನ್ಯೂಜಿಲೆಡ್ 7 ವಿಕೆಟ್ ಕಳೆದುಕೊಂಡಿತು.
ಜಡ್ಡು ಪಂಚ್
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ರವೀಂದ್ರ ಜಡೇಜಾ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಇವರು 22 ಓವರ್‌ಗಳಲ್ಲಿ 65 ರನ್ ನೀಡಿ ಐದು ವಿಕೆಟ್ ಪಡೆದರು. ಇವರಿಗೆ ವಾಷಿಂಗ್ಟನ್ ಸುಂದರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು 81 ರನ್ ನೀಡಿ 4 ವಿಕೆಟ್ ಕಿತ್ತರು. ವೇಗಿ ಆಕಾಶ್ ದೀಪ್ ಒಂದು ವಿಕೆಟ್ ತಮ್ಮ ಖಾತೆಗೆ ಹಾಕಿಕೊಂಡರು.
ಕಳಪೆ ಆರಂಭ
ಮೊದಲ ಇನಿಂಗ್ಸ್ ಆರಂಭಿಸಿದ ಭಾರತದ ಆರಂಭ ಕಳಪೆಯಾಗಿತ್ತು. ಜೀವದಾನದ ಲಾಭ ಪಡೆಯಲು ರೋಹಿತ್ ಶರ್ಮಾ ವಿಫಲರಾಗಿ 18 ರನ್‌ಗಳಿಗೆ ಆಟ ಮುಗಿಸಿದರು. ಯಶಸ್ವಿ ಜೈಸ್ವಾಲ್ ಸೆಟ್ ಆಗಿ ಒಳ್ಳೆಯ ಫಾರ್ಮ್‌ನಲ್ಲಿ ಕಾಣಿಸಿಕೊಂಡರೂ ಸಹ 30 ರನ್ ಮಾಡಿ ಪೆವಿಲಿಯನ್‌ಗೆ ನಡೆದರು. ನೈಟ್ ವಾಚಮನ್ ಆಗಿ ಬಂದ ಸಿರಾಜ್, ತಾವು ಎದುರಿಸಿದ ಮೊದಲ ಎಸೆತದಲ್ಲಿ ಔಟ್ ಆದರು. ವಿರಾಟ್ ಕೊಹ್ಲಿ ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications