Ind vs NZ 4Th T20: ಭಾರತಕ್ಕೆ 216 ರನ್ ಗುರಿ ನೀಡಿದ ನ್ಯೂಜಿಲೆಂಡ್
ವಿಶಾಖಪಟ್ಟಣಂ: ಆರಂಭಿಕ ಆಟಗಾರರಾದ ಡೆವೊನ್ ಕಾನ್ವೇ (44) ಹಾಗೂ ಟಿಮ್ ಸೀಫರ್ಟ್ (62) ಅವರುಗಳ ಭರ್ಜರಿ ಜೊತೆಯಾಟದ ನೆರವಿನಿಂದ ನ್ಯೂಜಿಲೆಂಡ್ ಬುಧವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಡೆವೊನ್ ಕಾನ್ವೇ ಹಾಗೂ ಟಿಮ್ ಸೀಫರ್ಟ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಪವರ್ ಪ್ಲೇನಲ್ಲಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯ ಆಟಕ್ಕೆ ಆರಂಭದಲ್ಲಿ ಬ್ರೇಕ್ ಹಾಕುವಲ್ಲಿ ವಿಫಲರಾದರು. ಈ ಜೋಡಿ ಮೊದಲ ಆರು ಓವರ್‌ಗಳಲ್ಲಿ 71 ರನ್ ಸೇರಿಸಿತು. ಮೊದಲ ವಿಕೆಟ್‌ಗೆ ಈ ಜೋಡಿ 8.2 ಓವರ್‌ಗಳಲ್ಲಿ 100 ರನ್‌ಗಳ ಜೊತೆಯಾಟವನ್ನು ನೀಡಿತು.

ಡೆವೊನ್ ಕಾನ್ವೇ 23 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ 44 ರನ್ ಸಿಡಿಸಿದರು. ಇನ್ನು ಇನ್ನೋಬ್ಬ ಆರಂಭಿಕ ಆಟಗಾರ ಟಿಮ್ ಸೀಫರ್ಟ್ ಅಬ್ಬರಿಸಿದರು. ಇವರ ಆಟಕ್ಕೆ ಆರಂಭದಲ್ಲಿ ಬ್ರೇಕ್ ಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ವಿಫಲರಾದರು. ಟಿಮ್ ಸೀಫರ್ಟ್ 36 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 62 ರನ್ ಸಿಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ರಚಿನ್ ರವೀಂದ್ರ 2 ರನ್ ಬಾರಿಸಿ ಜಸ್ಪ್ರಿತ್ ಬುಮ್ರಾ ಅವರು ತೋಡಿದ ಖೆಡ್ಡಾಗೆ ಬಲಿಯಾದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗ್ಲೆನ್ ಫಿಲಿಪ್ಸ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 24 ರನ್ ಸಿಡಿಸಿದರು. ಮಾರ್ಕ್ ಚಾಂಪ್ಮನ್ 9 ರನ್ ಬಾರಿಸಿ ಔಟ್ ಆದರು. ನಾಯಕ ಮಿಚಲ್ ಸ್ಯಾಂಟ್ನರ್ 6 ಎಸೆತಗಳಲ್ಲಿ 11 ರನ್ ಬಾರಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು.
ಮಿಚೆಲ್ ಆರ್ಭಟ
ಕಳೆದ ಮೂರು ಟಿ20 ಪಂದ್ಯಗಳಲ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದ ಡ್ಯಾರಿಲ್ ಮಿಚೆಲ್ ಜೋಡಿ ವಿಶಾಖಪಟ್ಟಣಂನಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. ಇವರು 18 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 39 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ನ್ಯೂಜಿಲೆಂಡ್ ಡೆತ್ ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡಿದ್ದು 52 ರನ್ ಕಲೆ ಹಾಕಿದೆ.
ಟೀಮ್ ಇಂಡಿಯಾ ಪರ ಕುಲ್‌ದೀಪ್ ಯಾದವ್ 39 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬದಲಾವಣೆಯೊಂದಿಗೆ ಕಣಕ್ಕೆ ಇಳಿದಿದ್ದು, ಮಧ್ಯಮ ಕ್ರಮಾಂಕದ ಆಟಗಾರ ಇಶಾನ್ ಕಿಶನ್ ಅವರನ್ನು ಹೊರಗಿಟ್ಟಿದ್ದು, ಅರ್ಷದೀಪ್ ಸಿಂಗ್ ಅವರಿಗೆ ಅವಕಾಶ ನೀಡಲಾಗಿದೆ. ಟೀಮ್ ಇಂಡಿಯಾ ನಾಲ್ಕನೇ ಟಿ20 ಪಂದ್ಯದಲ್ಲಿ ಆರು ಬ್ಯಾಟರ್‌ಗಳೊಂದಿಗೆ ಕಣಕ್ಕೆ ಇಳಿದಿದೆ. ಬುಧವಾರ ಏಳನೇ ಕ್ರಮಾಂಕದಲ್ಲಿ ಹರ್ಷಿತ್ ರಾಣಾ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications