Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs NZ 5th T20: ಟಿ20 ವಿಶ್ವಕಪ್‌ಗೆ ನಾವ್‌ ರೆಡಿ: ಭಾರತಕ್ಕೆ 46 ರನ್ ಭರ್ಜರಿ ಜಯ

ತಿರುವನಂತಪುರಂ: ಭರವಸೆಯ ಬ್ಯಾಟರ್ ಇಶಾನ್‌ ಕಿಶನ್‌ ಬಾರಿಸಿದ ಶತಕ ಹಾಗೂ ಅರ್ಷದೀಪ್‌ ಸಿಂಗ್ ಪಡೆದ ಐದು ವಿಕೆಟ್‌ಗಳ ಸಹಾಯದಿಂದ ಟೀಮ್ ಇಂಡಿಯಾ ಐದನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 46 ರನ್‌ಗಳಿಂದ ಮಣಿಸಿದೆ. ಈ ಮೂಲಕ ಭಾರತ 5 ಪಂದ್ಯಗಳ ಟಿ20 ಸರಣಿಯನ್ನು 4-1 ರಿಂದ ಗೆದ್ದು ಬೀಗಿದೆ.

ಟಾಸ್‌ ಗೆದ್ದು ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯಿತು. ಇನ್ನು ಸಂಜು ಸ್ಯಾಮ್ಸನ್‌ (6), ಅಭಿಷೇಕ್‌ ಶರ್ಮಾ (30) ಬಿಗ್ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಒತ್ತಡದಲ್ಲಿದ್ದ ತಂಡಕ್ಕೆ ಇಶಾನ್‌ ಕಿಶನ್‌ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ನ್ಯೂಜಿಲೆಂಡ್ ಬೌಲರ್‌ಗಳು ಎಡವಿದರು.

IND vs NZ 5th T20

ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್‌ ಕಿಶನ್ ಜೋಡಿ 58 ಎಸೆತಗಳಲ್ಲಿ 137 ರನ್‌ ಕಾಣಿಕೆ ನೀಡಿತು. ಈ ವೇಳೆ ಸೂರ್ಯಕುಮಾರ್ ಯಾದವ್ 4 ಬೌಂಡರಿ, 6 ಸಿಕ್ಸರ್ ನೆರವಿನಿಂದ 63 ರನ್‌ ಸಿಡಿಸಿ ಅಬ್ಬರಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಇಶಾನ್‌ ಕಿಶನ್‌ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿ ಅಬ್ಬರಿಸಿದರು. ಇವರು 43 ಎಸೆತಗಳಲ್ಲಿ 6 ಬೌಂಡರಿ, 10 ಸಿಕ್ಸರ್ ಸಹಾಯದಿಂದ 103 ರನ್‌ ಬಾರಿಸಿ ಮಿಂಚಿದರು. ಇನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 1 ಬೌಂಡರಿ, 4 ಸಿಕ್ಸರ್ ನೆರವಿನಿಂದ 42 ರನ್ ಕಲೆ ಹಾಕಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 271 ರನ್‌ ಕಲೆ ಹಾಕಿತು.

ಫಿನ್‌ ಅಲೇನ್‌ ಅಬ್ಬರ

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಟೀಮ್ ಸಿಫರ್ಟ್‌ (5) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಫಿನ್ ಅಲೇನ್‌ ಹಾಗೂ ರಚಿನ್ ರವೀಂದ್ರ ಜೋಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಪವರ್‌ ಪ್ಲೇನಲ್ಲಿ ವಿಕೆಟ್‌ ಬೀಳದಂತೆ ಕಾಯ್ದುಕೊಂಡು ರನ್‌ ವೇಗಕ್ಕೆ ಚುರುಕು ಮುಟ್ಟಿಸಿತು. ಈ ಜೋಡಿ 48 ಎಸೆತಗಳಲ್ಲಿ 100 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾಯಿತು. ಈ ಹಂತದಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಾಯದಿಂದ 80 ರನ್ ಬಾರಿಸಿದ್ದಾಗ ಅಕ್ಷರ್ ಪಟೇಲ್ ತೋಡಿದ ಖೆಡ್ಡಾಗೆ ಬಲಿಯಾದರು.

IND vs NZ 5th T20

ಕಿವೀಸ್ ಪರ ರಚಿನ್ ರವೀಂದ್ರ (30), ಡ್ಯಾರಲ್ ಮಿಚಲ್‌ (26), ಇಶ್ ಸೋದಿ (33) ರನ್ ಟೀಮ್ ಇಂಡಿಯಾ ಬೌಲರ್‌ಗಳನ್ನು ಕೊಂಚ ಕಾಡಿದರು. ಉಳಿದ ಬ್ಯಾಟರ್‌ಗಳು ರನ್‌ ಬರವನ್ನು ಅನುಭವಿಸಿದರು.

ಅರ್ಷದೀಪ್‌ ಸಿಂಗ್‌ಗೆ 5 ವಿಕೆಟ್‌

ಟೀಮ್ ಇಂಡಿಯಾದ ಪರ ಅನುಭವಿ ವೇಗದ ಬೌಲರ್ ಅರ್ಷದೀಪ್ ಸಿಂಗ್ ಐದು ವಿಕೆಟ್‌ ಪಡೆದರು. ಇವರು 4 ಓವರ್‌ ಬೌಲಿಂಗ್ ಮಾಡಿ 51 ರನ್ ನೀಡಿ 5 ಪ್ರಮುಖ ವಿಕೆಟ್‌ ಉರುಳಿಸಿದರು. ಅಕ್ಷರ್ ಪಟೇಲ್‌ ವಿಕೆಟ್‌ ಕಬಳಿಸಿದರು.

Story first published: Saturday, January 31, 2026, 22:54 [IST]
Other articles published on Jan 31, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+