Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Harshit Rana: ಟೀಮ್ ಇಂಡಿಯಾಕ್ಕೆ ಎಂಟ್ರಿ ನೀಡಿದ ಮತ್ತೊಬ್ಬ ಘಾತಕ ವೇಗಿ

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಈ ಟೆಸ್ಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಗೆಲ್ಲುವುದು ಅನಿವಾರ್ಯ. ರೋಹಿತ್ ಪಡೆ ಕ್ಲೀನ್ ಸ್ವೀಪ್‌ ಸೋಲಿನ ಭೀತಿಯಿಂದ ಪಾರಾಗಲು ಇದು ಲಾಸ್ಟ್‌ ಚಾನ್ಸ್‌. ಟೀಮ್ ಇಂಡಿಯಾ ಈ ಟೆಸ್ಟ್‌ ಪಂದ್ಯಕ್ಕೆ ಘಾತಕ ವೇಗಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಈ ಪ್ಲೇಯರ್‌ ಈಗಾಗಲೇ ನೆಟ್‌ ಬೌಲರ್ ಆಗಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಅಲ್ಲದೆ ಬೆಂಗಳೂರಿನಲ್ಲಿ ಅಭ್ಯಾಸವನ್ನು ನಡೆಸಿ, ಬಳಿಕ ದೇಶೀಯ ತಂಡದ ಪರ ಆಡಲು ಅನುಮತಿ ನೀಡಲಾಯಿತು. ರಣಜಿ ಡಿ ಗುಂಪಿನ ಪಂದ್ಯದಲ್ಲಿ ಮನಮೋಹಕ ಪ್ರದರ್ಶನ ನೀಡಿದ ಈ ಪ್ಲೇಯರ್‌ಗೆ ಈಗ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ. ಇವರೇ ಡೆಲ್ಲಿ ತಂಡದ ಹರ್ಷಿತ್ ರಾಣಾ.

IND vs NZ Harshit Rana Joins India Squad for Mumbai Test

ಆಸ್ಸಾಂ ವಿರುದ್ಧ ರಣಜಿ ಟೂರ್ನಿಯ ಪಂದ್ಯದಲ್ಲಿ ಹರ್ಷಿತ್ ರಾಣಾ ಮನಮೋಹಕ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ರಾಣಾ 80 ರನ್‌ ನೀಡಿ ಐದು ವಿಕೆಟ್‌ ಕಬಳಿಸಿ ಆರ್ಭಟಿಸಿದ್ದಾರೆ. ಅಲ್ಲದೆ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ್ದರು. ಹರ್ಷಿತ್ ರಾಣಾ ಮೊದಲ ಇನಿಂಗ್ಸ್‌ನಲ್ಲಿ 78 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 59 ರನ್‌ ಬಾರಿಸಿ ಔಟ್ ಆದರು. ಇನ್ನು ಎರಡನೇ ಇನಿಂಗ್ಸ್‌ನಲ್ಲೂ ಹರ್ಷಿತ್ ರಾಣಾ ಸಹ 61 ರನ್‌ ನೀಡಿ 2 ವಿಕೆಟ್‌ ಕಬಳಿಸಿದ್ದರು. ಇವರ ಈ ಪ್ರದರ್ಶನದ ಫಲವಾಗಿ ಇವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ.

ಮಹತ್ವದ ಪಂದ್ಯ

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮುಂಬೈ ಟೆಸ್ಟ್‌ ಪಂದ್ಯಕ್ಕೆ ಹರ್ಷಿತ್ ರಾಣಾ ತಂಡ ಸೇರುವ ಸಾಧ್ಯತೆ ಇದೆ. ಇವರ ತಮ್ಮ ಅಬ್ಬರದ ಪ್ರದರ್ಶನವನ್ನು ದೇಶೀಯ ಟೂರ್ನಿಯಲ್ಲಿ ನೀಡಿದ್ದರು. ಇವರು ಸ್ಟಾರ್ ವೇಗದ ಬೌಲರ್‌ ಜಸ್ಪ್ರಿತ್ ಬುಮ್ರಾ ಅವರ ಬದಲಿಗೆ ತಂಡ ಸೇರುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಮೂರನೇ ಪಂದ್ಯಕ್ಕೆ ರೋಹಿತ್ ಪಡೆ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.

IND vs NZ Harshit Rana Joins India Squad for Mumbai Test

ರಾಣಾ ಅವರು ಆಸ್ಟ್ರೇಲಿಯಾಕ್ಕೆ ಹೋಗುವ ಮೊದಲು ಮುಂಬೈ ಟೆಸ್ಟ್ ಆಡಿದರೆ ಅವರಿಗೆ ಒಳ್ಳೆಯದು ಎಂದು ಮಾಜಿ ರಾಷ್ಟ್ರೀಯ ಆಯ್ಕೆಗಾರ ಮತ್ತು ಹಾಲಿ ದೆಹಲಿ ಕೋಚ್ ಸರನ್‌ದೀಪ್ ಸಿಂಗ್ ತಿಳಿಸಿದ್ದಾರೆ. ಹರ್ಷಿತ್ ರಾಣಾ ಪಂದ್ಯದಲ್ಲಿ ನಾನು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಎಂದು ರಾಣಾ ಕೋಚ್‌ ಉಳಿಸಿದ್ರು.

ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಹರ್ಷಿತ್ ರಾಣಾ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳವು ಮುನ್ನ ಹರ್ಷಿತ್ ರಾಣಾ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡುತ್ತಾರಾ ಕಾದು ನೋಡಬೇಕಿದೆ. ಎರಡನೇ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾ ಇಂತಹದ್ದೇ ಒಂದು ಬದಲಾವಣೆ ಮಾಡಿ ಸೈ ಎನಿಸಿಕೊಂಡಿತ್ತು.

Story first published: Tuesday, October 29, 2024, 14:53 [IST]
Other articles published on Oct 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+