For Quick Alerts
ALLOW NOTIFICATIONS  
For Daily Alerts
 

IND vs NZ: ಬೆಂಗಳೂರು ಟೆಸ್ಟ್‌ಗೆ ಕೇನ್ ವಿಲಿಯಮ್ಸನ್ ಅಲಭ್ಯ; ನಾಯಕ ಲ್ಯಾಥಮ್ ಸ್ಪಷ್ಟನೆ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಅಕ್ಟೋಬರ್ 16 ಬುಧವಾರದಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಆರಂಭಕ್ಕೆ ಮುನ್ನ ನ್ಯೂಜಿಲೆಂಡ್ ಎರಡು ಆಘತಾಗಳನ್ನು ಎದುರಿಸಿದೆ. ಭಾರತ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ನ್ಯೂಜಿಲೆಂಡ್ ವೇಗದ ಬೌಲರ್ ಬೆನ್ ಸಿಯರ್ಸ್ ಹೊರಗುಳಿದ್ದಾರೆ.

ಮತ್ತೊಂದೆಡೆ ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೊದಲ ಟೆಸ್ಟ್‌ನಿಂದ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಹೊರಗುಳಿದಿದ್ದಾರೆ. ಈ ಬಗ್ಗೆ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಖಚಿತಪಡಿಸಿದ್ದಾರೆ. ಕೇನ್ ವಿಲಿಯಮ್ಸನ್ ಮೊದಲ ಟೆಸ್ಟ್ ಆಡದಿರುವುದು ತಂಡಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಿದ್ದಾರೆ.

IND vs NZ Kane Williamson unavailable for the first Test match against India

ಲ್ಯಾಥಮ್ ಹೇಳಿದ್ದೇನು?

ಕೇನ್ ತಂಡದಲ್ಲಿರುವುದು ಬೇಸರ ತಂದಿದೆ. ಅವರ ಬದಲಿಗೆ ವಿಲ್ ಯಂಗ್ ಆಡಲಿದ್ದಾರೆ. ವಿಲ್ ಯಂಗ್ ದೀರ್ಘಕಾಲದಿಂದ ತಂಡದ ಭಾಗವಾಗಿದ್ದಾರೆ. ಅವರು ಆರಂಭಿಕರಿಂದ 3-4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಅವರು ತಂಡದಲ್ಲಿ ಸ್ಥಾನವನ್ನು ಪಡೆಯಲು ಒಂದು ಅವಕಾಶವಾಗಿದೆ. ಅವರು ಈ ಹಿಂದೆ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಲ್ಯಾಥಮ್ ಮಾಹಿತಿ ನೀಡಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿ ಸೋಲಿನ ನಂತರ ಟಿಮ್ ಸೌಥಿ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕನಾಗಿ ಟಾಮ್ ಲ್ಯಾಥಮ್ ಅವರನ್ನು ನೇಮಕ ಮಾಡಿಲಾಗಿತ್ತು. ಈ ಬಗ್ಗೆ ಮಾತನಾಡಿರುವ ಲ್ಯಾಥಮ್, 'ಈ ಸ್ಥಾನದಲ್ಲಿರುವುದು ನನಗೆ ಒಂದು ದೊಡ್ಡ ಜವಾಬ್ದಾರಿ. ನಾನು ನಾಯಕನಾಗಿದ್ದರೂ ಅಥವಾ ನಾಯಕನಲ್ಲದಿದ್ದರೂ ಯಾವಾಗಲೂ ತಂಡಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ಈಗ ಅದು ಖಂಡಿತವಾಗಿಯೂ ನಾಯಕನಾಗಿ ನನಗೆ ಬೇರೆ ರೀತಿಯಿಲ್ಲ ಅನಿಸುತ್ತಿಲ್ಲ ಎಂದು ಲ್ಯಾಥಮ್ ಹೇಳಿದ್ದಾರೆ.

ಕೇನ್ಸ್ ವಿಲಿಯಮ್ಸನ್ ತಂಡದಿಂದ ಹೊರಗುಳಿದಿರುವ ಟೀಮ್ ಇಂಡಿಯಾ ಬೌಲರ್‌ಗಳಿಗೆ ಕೊಂಚ ನೆಮ್ಮದಿ ತಂದಿದೆ. ಕೇನ್ಸ್ ಹಲವು ಬಾರಿ ಟೀಮ್ ಇಂಡಿಯಾವನ್ನು ಕಾಡಿದ್ದಾರೆ. ಈಗ ತವರಿನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳನ್ನು ನ್ಯೂಜಿಲೆಂಡ್ ಬ್ಯಾಟರ್‌ಗಳು ಯಾವ ರೀತಿ ಎದುರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕೇನ್ಸ್‌ ಬದಲಿಗೆ ವಿಲ್ ಯಂಗ್ ಕಿವೀಸ್ ಪಡೆಯಲ್ಲಿ ಸ್ಥಾನ ಪಡೆದಿರಬಹುದು. ಆದರೆ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳನ್ನು ಎದುರಿಸುವುದು ಅವರಿಗೆ ಸುಲಭದ ಮಾತಲ್ಲ.

ಇತ್ತೀಚೆಗೆ ಕಾನ್ಪುರದ ಗ್ರೀನ್ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಡೀಮ್ ಇಂಡಿಯಾ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದರು. ಕೇವಲ ಎರಡು ದಿನಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುವ ಮೂಲಕ ಸರಣಿ ಗೆಲುವಿಗೆ ಶ್ರಮ ವಹಿಸಿದ್ದರು.

Story first published: Tuesday, October 15, 2024, 20:20 [IST]
Other articles published on Oct 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+