India vs New Zealand Match: ಭಾರತ vs ನ್ಯೂಜಿಲೆಂಡ್ ಹೆಡ್-ಟು-ಹೆಡ್ ದಾಖಲೆ; 2019ರ ಸೋಲಿಗೆ ಸೇಡು?
ಭಾನುವಾರ, ಅಕ್ಟೋಬರ್ 22ರಂದು ಧರ್ಮಶಾಲಾದ (ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್) ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 21ನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ.
ಸದ್ಯ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಾತ್ರ ಅಜೇಯವಾಗಿರುವ ಎರಡು ತಂಡಗಳು. ತಾವು ಆಡಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿವೆ. ಭಾನುವಾರದ ಪಂದ್ಯದ ಫಲಿತಾಂಶದ ನಂತರ ಅದು ಸಹಜವಾಗಿ ಬದಲಾಗುತ್ತದೆ.

ಟೀಮ್ ಇಂಡಿಯಾ ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಏಕಪಕ್ಷೀಯ ಗೆಲುವು ದಾಖಲಿಸಿದೆ.
ವಿಶ್ವಕಪ್ ಪಂದ್ಯಾವಳಿಯ ಪ್ರಬಲ ತಂಡಗಳಲ್ಲಿ ಭಾರತ ಒಂದಾಗಿದ್ದು, ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗ ಮುನ್ನಡೆಸಿದರೆ, ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಮತ್ತೊಂದೆಡೆ, ನ್ಯೂಜಿಲೆಂಡ್ ತಂಡವು ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಇಂಗ್ಲೆಂಡ್, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕಿಂತ ಕಿವೀಸ್ ದೊಡ್ಡ ಆತ್ಮವಿಶ್ವಾಸ ಹೊಂದಿದೆ.

ನ್ಯೂಜಿಲೆಂಡ್ 2003ರಿಂದ ಯಾವುದೇ ಐಸಿಸಿ ಟೂರ್ನಿಯಲ್ಲಿ ಭಾರತ ವಿರುದ್ಧ ಸೋತಿಲ್ಲ. ಆತಿಥೇಯರು ಧರ್ಮಶಾಲಾದಲ್ಲಿ ಈ ಸೋಲಿನ ಸರಣಿಯನ್ನು ಮುರಿಯಬಹುದೇ ಎಂಬ ಕುತೂಹಲ ಹೆಚ್ಚಾಗಿದೆ.
ಏಕದಿನ ಪಂದ್ಯಗಳಲ್ಲಿ ಭಾರತ vs ನ್ಯೂಜಿಲೆಂಡ್ ಮುಖಾಮುಖಿ ದಾಖಲೆ
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಏಕದಿನ ಮಾದರಿಯಲ್ಲಿ 116 ಬಾರಿ ಮುಖಾಮುಖಿಯಾಗಿವೆ. ಟೀಮ್ ಇಂಡಿಯಾ 58-50 ಅಂತರದಿಂದ ನ್ಯೂಜಿಲೆಂಡ್ ವಿರುದ್ಧ ಮುನ್ನಡೆ ಸಾಧಿಸಿದೆ.
ಉಭಯ ತಂಡಗಳ ನಡುವಿನ ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಏಳು ಪಂದ್ಯಗಳು ಹವಾಮಾನ ವೈಪರಿತ್ಯದಿಂದ ಯಾವುದೇ ಫಲಿತಾಂಶ ಕಾಣದೆ ರದ್ದಾಗಿವೆ.

ಏಕದಿನ ವಿಶ್ವಕಪ್‌ನಲ್ಲಿ ಭಾರತ vs ನ್ಯೂಜಿಲೆಂಡ್ ಮುಖಾಮುಖಿ ದಾಖಲೆ
ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಎಂಟು ಬಾರಿ ಮುಖಾಮುಖಿಯಾಗಿದ್ದು, ಈ ಹೋರಾಟದಲ್ಲಿ ಕಿವೀಸ್ ಪಡೆ 5-3 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಮ್ಯಾಂಚೆಸ್ಟರ್‌ನಲ್ಲಿ ನಡೆದ 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾದವು. ಇದರಲ್ಲಿ ಭಾರತ ತಂಡ 18 ರನ್‌ಗಳ ಹೃದಯವಿದ್ರಾವಕ ಸೋಲು ಅನುಭವಿಸಿತು.
ಭಾರತ vs ನ್ಯೂಜಿಲೆಂಡ್ ನಡುವಿನ ಕೊನೆಯ 5 ಏಕದಿನ ಪಂದ್ಯಗಳು
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿದ್ದು, ಆತಿಥೇಯ ತಂಡ ಪ್ರವಾಸಿ ತಂಡದ ವಿರುದ್ಧ 3-0 ಅಂತರದಲ್ಲಿ ಗೆದ್ದಿದೆ.
ಭಾರತ vs ನ್ಯೂಜಿಲೆಂಡ್ ನಡುವಿನ ಕೊನೆಯ ಐದು ಏಕದಿನ ಪಂದ್ಯಗಳ ಸಂಕ್ಷಿಪ್ತ ಫಲಿತಾಂಶ
ಭಾರತ (385/9) ನ್ಯೂಜಿಲೆಂಡ್ (295) ತಂಡವನ್ನು 90 ರನ್‌ಗಳಿಂದ ಸೋಲಿಸಿತು, ಜನವರಿ 24, 2023
ಭಾರತ (111/2) ನ್ಯೂಜಿಲೆಂಡ್ (108) ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು, ಜನವರಿ 21, 2023
ಭಾರತ (349/8) ನ್ಯೂಜಿಲೆಂಡ್ (337) ತಂಡವನ್ನು 12 ರನ್‌ಗಳಿಂದ ಸೋಲಿಸಿತು, ಜನವರಿ 18, 2023
ಭಾರತ (219) vs ನ್ಯೂಜಿಲೆಂಡ್ (104/1) ಫಲಿತಾಂಶವಿಲ್ಲ, ನವೆಂಬರ್ 30, 2022
ಭಾರತ (89/1) vs ನ್ಯೂಜಿಲೆಂಡ್ (--) ಫಲಿತಾಂಶವಿಲ್ಲ, ನವೆಂಬರ್ 27, 2022
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications