ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯು ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದೆ. ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿಯು ಭಾರೀ ಕುತೂಹಲ ಮೂಡಿಸಿದೆ. ಸರಣಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್‌ಗೆ ಮುನ್ನಡೆಯು ಉಭಯ ತಂಡಗಳು ತಯಾರುತ್ತಿವೆ.
ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನ್ಯೂಜಿಲೆಂಡ್ ತಂಡ ತನ್ನ ಬೌಲಿಂಗ್ ಕೋಚ್ ಅನ್ನು ದಿಢೀರ್ ಬದಲಾಯಿಸಿದೆ. ಭಾರತದಲ್ಲಿ ನಡೆಯಲಿರುವ ಮೂರು ಟೆಸ್ಟ್‌ಗಳ ಸರಣಿಗೆ ನ್ಯೂಜಿಲೆಂಡ್ ತನ್ನ ಬೌಲಿಂಗ್ ಕೋಚ್ ಆಗಿ ಮಾಜಿ ವೇಗದ ಬೌಲರ್ ಜೇಕಬ್ ಓರಮ್ ಅವರನ್ನು ನೇಮಿಸಿದೆ. ನ್ಯೂಜಿಲೆಂಡ್ ಪರ ಮೂರು ಏಕದಿನ ಹಾಗೂ ನಾಲ್ಕು ಟಿ20 ವಿಶ್ವಕಪ್ ಆಡಿರುವ 46ರ ಹರೆಯದ ಜೇಕಬ್ ಓರಮ್ ಅಕ್ಟೋಬರ್ 7ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬೆಂಗಳೂರಿಲ್ಲಿ ಅಕ್ಟೋಬರ್ 16 ರಿಂದ 20 ರವರೆಗೆ ನ್ಯೂಜಿಲೆಂಡ್ ತಂಡವು ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 24 ರಿಂದ ಅಕ್ಟೋಬರ್ 28 ರವರೆಗೆ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ನವೆಂಬರ್ 1 ರಿಂದ ನವೆಂಬರ್ 5 ರವರೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಇತ್ತೀಚೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ
ಓರಮ್ ನ್ಯೂಜಿಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಆದರೆ ನ್ಯೂಜಿಲೆಂಡ್ ಗುಂಪು ಹಂತದಲ್ಲೇ ಸೋತು ಹೊರಗುಳಿದಿತ್ತು. ಇದಲ್ಲದೆ, ತವರಿನಲ್ಲಿ ನಡೆದ 2022ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡಕ್ಕೂ ಜಾಕೋಬ್ ಓರಮ್ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
"ಕಳೆದ ವರ್ಷದ ಬಾಂಗ್ಲಾದೇಶದ ಟೆಸ್ಟ್ ಪ್ರವಾಸದ ವೇಳೆ ನ್ಯೂಜಿಲೆಂಡ್ ತಂಡಕ್ಕೆ ಹಂಗಾಮಿ ಬೌಲಿಂಗ್ ಕೋಚ್ ಆಗಿದ್ದರು. ನಂತರ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ತವರಿನ ಟಿ20 ಸರಣಿಯಲ್ಲೂ ತಂಡದಲ್ಲಿದ್ದರು. ಇದೀಗ ನ್ಯೂಜಿಲೆಂಡದ ತಂಡಕ್ಕೆ ಅಧಿಕೃತ ಬೌಲಿಂಗ್ ಕೋಚ್ ಆಗಿ ನೇಮಕಗೊಳ್ಳುತ್ತಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.