IND vs NZ: ವಿರಾಟ್ ಕೊಹ್ಲಿ ಅಬ್ಬರದ ನಡುವೆ ಸದ್ದಿಲ್ಲದೆ ದಾಖಲೆ ನಿರ್ಮಿಸಿದ ಶ್ರೇಯಸ್ ಆಯ್ಯರ್!
ಬುಧವಾರ, ನವೆಂಬರ್ 16ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 397 ರನ್‌ಗಳ ದಾಖಲೆಯ ಮೊತ್ತವನ್ನು ಕಲೆಹಾಕಿತು.
ಇದೇ ವೇಳೆ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಭಾರತೀಯ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಮುರಿಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಇನ್ನು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಸದ್ದಿಲ್ಲದೆ ಏಕದಿನ ವಿಶ್ವಕಪ್‌ನಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ ಮೂರನೇ ಭಾರತೀಯ ಎನಿಸಿಕೊಂಡರು.
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಎರಡನೇ ಏಕದಿನ ವಿಶ್ವಕಪ್ ಶತಕವನ್ನು ಸಿಡಿಸಿದರು.
ಶ್ರೇಯಸ್ ಅಯ್ಯರ್ ಅವರು ಹಾಲಿ ನಾಯಕ ರೋಹಿತ್ ಶರ್ಮಾ (2019ರ ವಿಶ್ವಕಪ್) ಮತ್ತು ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (1999ರ ವಿಶ್ವಕಪ್) ಅವರ ಎಲೈಟ್ ಪಟ್ಟಿಯನ್ನು ಸೇರಿಕೊಂಡಡರು. ಏಕದಿನ ವಿಶ್ವಕಪ್‌ನಲ್ಲಿ ಸತತ ಶತಕಗಳನ್ನು ಬಾರಿಸಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿದರು.

ನವೆಂಬರ್ 12ರಂದು ಬೆಂಗಳೂರಿನಲ್ಲಿ ನಡೆದ ಭಾರತ ತಂಡದ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಶ್ರೇಯಸ್ ಅಯ್ಯರ್ ಅಜೇಯ ಶತಕ ಗಳಿಸಿದ್ದರು.
23ನೇ ಓವರ್‌ನಲ್ಲಿ ಸ್ನಾಯು ಸೆಳೆತವನ್ನು ಅನುಭವಿಸಿ, ಭಾರತದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ನಿವೃತ್ತಿಯಾದ ನಂತರ, ಶ್ರೇಯಸ್ ಅಯ್ಯರ್ ಬ್ಯಾಟಿಂಗ್‌ಗೆ ಬಂದರು.
ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಚಾಲಕನ ಸೀಟಿನಲ್ಲಿ ಇರಿಸಲು ಶ್ರೇಯಸ್ ಅಯ್ಯರ್ ಅವರು ವಿರಾಟ್ ಕೊಹ್ಲಿಯೊಂದಿಗೆ 163 ರನ್‌ಗಳ ಬೃಹತ್ ಜೊತೆಯಾಟವನ್ನು ನಿರ್ಮಿಸಿದರು.
ಇವರಿಬ್ಬರ ಜೊತೆಯಾಟದಲ್ಲಿ ಶ್ರೇಯಸ್ ಅಯ್ಯರ್ ಅವರ ಅರ್ಧಶತಕ ಕಂಡಿತು ಮತ್ತು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಬಾರಿಸಿದ ಮೊದಲ ಬ್ಯಾಟರ್ ಆದರು. ಈ ಮೂಲಕ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ದೀರ್ಘಕಾಲದ ವಿಶ್ವದಾಖಲೆಯನ್ನು ಮುರಿದರು.
48ನೇ ಓವರ್‌ನಲ್ಲಿ ಐದನೇ ಏಕದಿನ ಶತಕವನ್ನು ಗಳಿಸಲು ಶ್ರೇಯಸ್ ಅಯ್ಯರ್ ಅವರು ಟಿಮ್ ಸೌಥಿ ಅವರ ಬೌಲಿಂಗ್‌ನಲ್ಲಿ ಸುಲಭವಾಗಿ ಬೃಹತ್ ಸಿಕ್ಸರ್ ಹೊಡೆದರು. ಅಂತಿಮವಾಗಿ, ಶ್ರೇಯಸ್ ಅಯ್ಯರ್ 70 ಎಸೆತಗಳಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್‌ಗಳ ನೆರವಿನಿಂದ 105 ರನ್ ಗಳಿಸಿ ಔಟಾದರು.
ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಭಾರತೀಯ
8 - ಶ್ರೇಯಸ್ ಅಯ್ಯರ್ vs ನ್ಯೂಜಿಲೆಂಡ್, ಮುಂಬೈ, 2023
7 - ಸೌರವ್ ಗಂಗೂಲಿ vs ಶ್ರೀಲಂಕಾ, ಟೌಂಟನ್, 1999
7 - ಯುವರಾಜ್ ಸಿಂಗ್ vs ಬರ್ಮುಡಾ, ಪೋರ್ಟ್ ಆಫ್ ಸ್ಪೇನ್, 2007
6 - ಕಪಿಲ್ ದೇವ್ vs ಜಿಂಬಾಬ್ವೆ, ಟನ್‌ಬ್ರಿಡ್ಜ್ ವೆಲ್ಸ್, 1983
6 - ರೋಹಿತ್ ಶರ್ಮಾ vs ಪಾಕಿಸ್ತಾನ, ಅಹಮದಾಬಾದ್, 2023
6 - ಶ್ರೇಯಸ್ ಅಯ್ಯರ್ vs ಶ್ರೀಲಂಕಾ, ಮುಂಬೈ, 2023
ಭಾರತ ಪರ ಅತ್ಯಂತ ವೇಗದ ವಿಶ್ವಕಪ್ ಶತಕಗಳು (ಎಸೆತಗಳಿಂದ)
62 - ಕೆಎಲ್ ರಾಹುಲ್ vs ನೆದರ್ಲ್ಯಾಂಡ್ಸ್, ಬೆಂಗಳೂರು, 2023
63 - ರೋಹಿತ್ ಶರ್ಮಾ vs ಅಫ್ಘಾನಿಸ್ತಾನ, ದೆಹಲಿ, 2023
67 - ಶ್ರೇಯಸ್ ಅಯ್ಯರ್ vs ನ್ಯೂಜಿಲೆಂಡ್, ಮುಂಬೈ WS, 2023
81 - ವೀರೇಂದ್ರ ಸೆಹ್ವಾಗ್ vs ಬರ್ಮುಡಾ, ಪೋರ್ಟ್ ಆಫ್ ಸ್ಪೇನ್, 2007
83 - ವಿರಾಟ್ ಕೊಹ್ಲಿ vs ಬಾಂಗ್ಲಾದೇಶ, ಮೀರ್ಪುರ್, 2011
ಈ ಪ್ರದರ್ಶನದೊಂದಿಗೆ ಶ್ರೇಯಸ್ ಅಯ್ಯರ್ ತಮ್ಮ ಮೊದಲ ಏಕದಿನ ವಿಶ್ವಕಪ್ ಅಭಿಯಾನದಲ್ಲಿ 500 ರನ್‌ಗಳ ಗಡಿ ದಾಟಿದರು ಮತ್ತು ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ-ಐದು ಬ್ಯಾಟರ್‌ಗಳಲ್ಲಿ ಸ್ಥಾನ ಪಡೆದರು.
ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್ 2023ರ ವಿಶ್ವಕಪ್ ಸೆಮಿಫೈನಲ್‌ಗೆ ಇನ್‌ಫಾರ್ಮ್ ಮತ್ತು ಆತ್ಮವಿಶ್ವಾಸದೊಂದಿಗೆ ಬಂದರು. ಪಂದ್ಯಾವಳಿಯಲ್ಲಿ ಸತತ ನಾಲ್ಕು 50-ಪ್ಲಸ್ ಸ್ಕೋರ್‌ಗಳನ್ನು ದಾಖಲಿಸಿದ್ದಾರೆ.
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಒಂದೆರಡು ಕಡಿಮೆ-ಸಮಾಧಾನ ಪ್ರದರ್ಶನಗಳ ನಂತರ, ಶ್ರೇಯಸ್ ಅಯ್ಯರ್ ಮತ್ತೆ ಫಾರ್ಮ್‌ಗೆ ಮರಳಿದರು. ಶ್ರೀಲಂಕಾ ವಿರುದ್ಧ 56 ಎಸೆತಗಳಲ್ಲಿ 82 ರನ್ ಗಳಿಸಿದಾಗ ಭಾರತ ತಂಡವು 302 ರನ್‌ಗಳಿಂದ ಗೆಲುವು ಸಾಧಿಸಿತು.
ನಂತರ ಶ್ರೇಯಸ್ ಅಯ್ಯರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ 87 ಎಸೆತಗಳಲ್ಲಿ 77 ರನ್ ಗಳಿಸಿದಾಗ, ಭಾರತ ತಂಡ 243 ರನ್‌ಗಳಿಂದ ವಿಜಯಶಾಲಿಯಾಗಿ ಹೊರಹೊಮ್ಮಿತು.
ಅಯ್ಯರ್ ನೆದರ್ಲ್ಯಾಂಡ್ಸ್ ವಿರುದ್ಧ 94 ಎಸೆತಗಳಲ್ಲಿ ಅಜೇಯ 128 ರನ್ ಗಳಿಸುವ ಮೂಲಕ ಅಗ್ರ ಫಾರ್ಮ್‌ಗೆ ಬಂದರು ಮತ್ತು ಭಾರತ ತಂಡವು ಲೀಗ್ ಹಂತವನ್ನು ಒಂಬತ್ತರಲ್ಲಿ ಒಂಬತ್ತು ಗೆಲುವುಗಳೊಂದಿಗೆ ಮುಗಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications