ಟಿ20 ವಿಶ್ವಕಪ್‌ಗೆ ಪೂರ್ವ ಸಿದ್ಧತೆ: ಭಾರತ, ನ್ಯೂಜಿಲೆಂಡ್ ಹೋರಾಟ; ಅಭಿಷೇಕ್, ವರುಣ್ ಆಕರ್ಷಣೆ
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಏಕದಿನ ಸರಣಿ ಮುಕ್ತಾಯವಾಗಿದೆ. ಈ ಸರಣಿಯಲ್ಲಿ ನ್ಯೂಜಿಲೆಂಡ್ ಗೆಲುವು ದಾಖಲಿಸಿದೆ. ಭಾರತ ತವರಿನಲ್ಲಿ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿದೆ. ಈಗ ಎರಡೂ ತಂಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ. ನ್ಯೂಜಿಲೆಂಡ್ ಏಕದಿನ ಸರಣಿ ಗೆಲುವಿನ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯುವ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಟೀಮ್ ಇಂಡಿಯಾ ಸೋಲಿನ ಕಹಿಯನ್ನು ಮರೆತು ದೊಡ್ಡ ಅಗ್ನಿ ಪರೀಕ್ಷೆಗೆ ತಯಾರಾಗಲು ಸಿದ್ಧತೆ ನಡೆಸಿದೆ.
ಭಾರತ, ಕಿವೀಸ್ ನಡುವಣ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ಬುಧವಾರ (ಜ.21) ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಎರಡೂ ತಂಡಗಳದ್ದಾಗಿದೆ. ಭಾರತ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೇ. ತಮ್ಮ ಸ್ಥಿರ ಪ್ರದರ್ಶನದಿಂದ ಸೂರ್ಯ ಪಡೆ ತವರಿನಲ್ಲಿ ಮತ್ತೊಂದು ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ.

ಫೆಬ್ರವರಿ 7 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಮಹತ್ವ ಪಡೆದಿದೆ. ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ ಪಕ್ಕಾ ಮಾಡಲು ಈ ಸರಣಿ ನೆರವಾಗಲಿದೆ. ಉಭಯ ತಂಡಗಳ ನಡುವಣ ಒಟ್ಟು 25 ಟಿ20 ಪಂದ್ಯಗಳು ನಡೆದಿದ್ದು, ಭಾರತ 14ರಲ್ಲಿ, ನ್ಯೂಜಿಲೆಂಡ್ 10ರಲ್ಲಿ ಜಯ ಸಾಧಿಸಿದೆ.
ಅಭಿಷೇಕ್ ಶರ್ಮಾ ಆಕರ್ಷಣೆ
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಟಿ20 ಸ್ವರೂಪದಲ್ಲಿ ನಂಬರ್ 1 ಸ್ಥಾನವನ್ನು ಪಡೆದಿದ್ದು, ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಇವರೊಂದಿಗೆ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಕಳೆದ ಕೆಲವು ಪಂದ್ಯಗಳಲ್ಲಿ ಸಂಜು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಆದರೆ ಈಗ ಮತ್ತೆ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ತಿಲಕ್ ವರ್ಮಾ ಗಾಯದಿಂದ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ಇವರ ಅನುಪಸ್ಥಿತಿಯಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಎಲ್ಲರೂ ಕಾತುರರಾಗಿದ್ದಾರೆ.

ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ಚಿತೆ ಹೆಚ್ಚಿಸಿದೆ. ಆಲ್‌ರೌಂಡರ್ ರೂಪದಲ್ಲಿ ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಇದ್ದು ಯಾರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಜಸ್ಪ್ರೀತ್ ಬುಮ್ರಾ ಬಲ
ವೇಗದ ಬೌಲಿಂಗ್ ನೊಗವನ್ನು ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹೊತ್ತುಕೊಳ್ಳಲಿದ್ದಾರೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ನುರಿತ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ತಂಡದಲ್ಲಿ ಸ್ಥಾನ ಪಡೆಯುವುದು ಪಕ್ಕಾ ಕಾಣುತ್ತಿದೆ. ಸಂಘಟಿತ ದಾಳಿಯನ್ನು ಪ್ರದರ್ಶಿಸಿದಲ್ಲಿ ಗೆಲುವಿನ ನಗೆ ಬೀರಬಹುದು.
ಡ್ಯಾರಿಲ್ ಮಿಚೆಲ್ ಬಲ
ನ್ಯೂಜಿಲೆಂಡ್ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಟೀಮ್ ಇಂಡಿಯಾಕ್ಕೆ ಕಾಟ ನೀಡಿರುವ ಡ್ಯಾರಿಲ್ ಮಿಚೆಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಟಿ20 ಕ್ರಿಕೆಟ್‌ನ ಹೆಸರಾಂತ ಬ್ಯಾಟರ್‌ಗಳು ಇದ್ದಾರೆ. ಡೆವೊನ್ ಕಾನ್ವೇ, ಬೆವನ್ ಜೇಕಬ್ಸ್, ಟಿಮ್ ರಾಬಿನ್ಸನ್, ಮೈಕೆಲ್ ಬ್ರೇಸ್‌ವೆಲ್ ಇವರು ತಂಡಕ್ಕೆ ಆಧಾರವಾಗಬಲ್ಲ ಆಟಗಾರರು. ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೆರವಾಗಬಲ್ಲರು. ಇನ್ನು ವೇಗದ ಬೌಲಿಂಗ್ ನೊಗವನ್ನು ಜಾಕೋಬ್ ಡಫಿ, ಕೈಲ್ ಜೇಮಿಸನ್ ಮುನ್ನಡೆಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications