Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs NZ Champions Trophy: 25 ವರ್ಷ ಹಳೆ ಲೆಕ್ಕ ಚುಕ್ತಾ ಮಾಡೋಕೆ ಬೆಸ್ಟ್‌ ಚಾನ್ಸ್‌

ಟೀಮ್ ಇಂಡಿಯಾ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು "ಎ" ಗುಂಪಿನಿಂದ ಸೆಮಿಫೈನಲ್‌ ಪ್ರವೇಶಿಸಿದೆ. ಟೀಮ್ ಇಂಡಿಯಾ ಮತ್ತೊಂದು ಐಸಿಸಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಈ ಟೂರ್ನಿಯಲ್ಲಿ ಇಷ್ಟು ದಿನ ಆಗಿದ್ದು ಒಂದು, ಇನ್ನು ಮುಂದೆ ಆಗುವುದು ಇನ್ನೊಂದು. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಭಾನುವಾರ ನ್ಯೂಜಿಲೆಂಡ್‌ ವಿರುದ್ಧ ಕಾದಾಟ ನಡೆಸಲಿದೆ. ಈ ಮೂಲಕ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮೊದಲ ಬಾರಿಗೆ ಅವರು ಬಲಿಷ್ಠ ತಂಡವನ್ನು ಎದುರಿಸಲಿದ್ದಾರೆ.

"ಎ" ಗುಂಪಿನ ಬಲಿಷ್ಠ ತಂಡಗಳು ಮಾರ್ಚ್‌ 2 ರಂದು ದುಬೈನಲ್ಲಿ ಕಾದಾಟ ನಡೆಸಲಿವೆ. ಈಗಲೂ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು ಹೈವೋಲ್ಟೇಜ್‌ ಪಂದ್ಯ ಎಂದು ಹೇಳಲಾಗುತ್ತದೆ. ಆದರೆ ಭಾರತದ ಪ್ರದರ್ಶನವನ್ನು ನೋಡಿದರೆ, ಪಾಕ್‌ ಈ ತಂಡದ ಮುಂದೆ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂಬುದು ತಿಳಿಯುತ್ತಿದೆ. ಮಾರ್ಡನ್‌ ಡೇನಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳ ಕಾದಾಟ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಅಂತೆಯೇ ಭಾರತ, ನ್ಯೂಜಿಲೆಂಡ್‌ ತಂಡಗಳ ನಡುವಿನ ಕಾದಾಟವೂ ಜನರ ಚಿತ್ತ ಕದ್ದಿದೆ. ಈ ಇಬ್ಬರು ಮದಗಜಗಳ ಕಾಳಗ ಭಾನುವಾರ ನಡೆಯಲಿದೆ.

IND vs NZ Team India Eyes Redemption for 25-Year-Old Champions Trophy Defeat

25 ವರ್ಷಗಳ ಹಿಂದೆ ಏನಾಗಿತ್ತು?

ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯವಾಗಿರಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆದು, ಅಗ್ರ ಸ್ಥಾನೀಯವಾಗಿ ಸೆಮಿಫೈನಲ್‌ ಪ್ರವೇಶಿಸುವ ಕನಸು ಎರಡೂ ತಂಡಗಳದ್ದಾಗಿದೆ. ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರದರ್ಶನ ಅಷ್ಟಾಗಿಲ್ಲ. ಆದರೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡುತ್ತಿದೆ. ಉಭಯ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಕೇವಲ ಒಂದು ಬಾರಿ ಕಾದಾಟ ನಡೆಸಿವೆ. ಅದರಲ್ಲಿ ಭಾರತ ಸೋಲು ಕಂಡಿತ್ತು.

2000 ರಲ್ಲಿ ಎರಡೂ ತಂಡಗಳು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್‌ ವಿರುದ್ಧ 4 ವಿಕೆಟ್‌ಗಳ ಸೋಲು ಕಂಡಿತ್ತು. ಅಂದಿನಿಂದ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಯಾವುದೇ ಪಂದ್ಯ ನಡೆದಿಲ್ಲ. ಈಗ ಭಾರತಕ್ಕೆ 25 ವರ್ಷಗಳ ಸೋಲಿನ ಲೆಕ್ಕಾ ಚುಕ್ತಾ ಮಾಡುವ ಸುವರ್ಣ ಅವಕಾಶ ಸಿಕ್ಕಿದೆ.

ಟೀಮ್ ಇಂಡಿಯಾ "ಎ" ಗುಂಪಿನ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಎಲ್ಲ ಸ್ಟಾರ್ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ತನ್ನ ಅಜೇಯ ಓಟವನ್ನು ಮುಂದುವರೆಸಿ, ಅಜೇಯವಾಗಿ ಸೆಮಿಫೈನಲ್ ಹಂತವನ್ನು ಪ್ರವೇಶಿಸುವ ಕನಸನ್ನು ಟೀಮ್ ಇಂಡಿಯಾ ಕಾಣುತ್ತಿದೆ. ಚಾಂಪಿಯನ್ಸ್‌ ಟ್ರೋಫಿ ಎಂದ ಮೇಲೆ ಇಲ್ಲಿ ಎಲ್ಲ ಪಂದ್ಯಗಳೂ ಸಹ ಜಿದ್ದಾಜಿದ್ದಿನಿಂದ ಕೂಡಿರುತ್ತವೆ. ನ್ಯೂಜಿಲೆಂಡ್ ವಿರುದ್ಧದ ಗೆಲುವು ಅಥವಾ ಸೋಲು ಭಾರತೀಯ ತಂಡದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ಗೆಲುವು ಸಾಧಿಸಿದ ಪಾಸಿಟಿವ್‌ ಇಂಟೇಟ್‌ನಿಂದ ಮುಂದಿನ ಹಂತಕ್ಕೆ ಪ್ರವೇಶಿಸುವ ಕನಸನ್ನು ಭಾರತ ತಂಡ ಮಾಡಿಕೊಂಡಿದೆ. ಇದಕ್ಕೆ ಉತ್ತರ ಭಾನುವಾರ ಸಿಗಲಿದೆ.

Story first published: Wednesday, February 26, 2025, 14:31 [IST]
Other articles published on Feb 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+