Bengaluru Test: ಅಶ್ವಿನ್-ಜಡೇಜಾ ಸ್ಪಿನ್ ಜಾದೂ ವಿಫಲ; ರಚಿನ್ ಅದ್ಭುತ ಶತಕದಿಂದ ಕಿವೀಸ್‌ಗೆ 356 ರನ್ ಮುನ್ನಡೆ
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕವಾಗಿದೆ. ಬೆಂಗಳೂರು ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ ಅದ್ಭುತ ಸ್ಥಿರ ಪ್ರದರ್ಶನ ನೀಡಿದೆ.
ಶುಕ್ರವಾರ ಆರಂಭವಾದ ಮೂರನೇ ದಿನದಾಟದಲ್ಲಿ ಕಿವೀಸ್ 3 ವಿಕೆಟ್‌ಗೆ 180 ರನ್‌ಗಳಿಂದ ಆಟ ಮುಂದುವರೆಸಿ, 402 ರನ್‌ಗಳಿಗೆ ಆಲೌಟ್ ಆಯಿತು. ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಭರ್ಜರಿ 356 ರನ್‌ಗಳ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಮತ್ತು ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದರು.

ಮೂರನೇ ದಿನದಾಟದ ಆರಂಭದಲ್ಲಿ ಭಾರತ ಪ್ರಮುಖ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡವನ್ನು 300ರ ಗಡಿ ಒಳಗೆ ಆಲೌಟ್ ಮಾಡುವ ಉತ್ಸಹದಲ್ಲಿತ್ತು. ಆದರೆ ಯುವ ಸ್ಪೋಟಕ ಬ್ಯಾಟರ್ ರಚಿನ್ ರವೀಂದ್ರ ಮತ್ತು ಅನುಭವಿ ಟಿಮ್ ಸೌಥಿ ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಬರೋಬ್ಬರಿ 137 ರನ್‌ಗಳನ್ನು ಕಲೆ ಹಾಕಿದರ. ಇದರೊಂದಿಗೆ ರವೀಂದ್ರ ಮತ್ತು ಟಿಮ್ ಸೌಥಿ ಅವರು ನ್ಯೂಜಿಲೆಂಡ್‌ನ ಮುನ್ನಡೆಯನ್ನು 300 ಗಡಿ ದಾಟಿಸಿದರು.
ಭಾರತದ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ರಚಿನ್ ರವೀಂದ್ರ 157 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 134 ರನ್ ಗಳಿಸಿ ಅಮೋಘ ಶತಕ ಸಿಡಿಸಿದರು. ರಚಿನ್ ಅವರ ಈ ಅದ್ಭುತ ಶತಕದಿಂದಾಗಿ ನ್ಯೂಜಿಲೆಂಡ್ ಪಂದ್ಯದ ಮೇಲೆ ಪ್ರಬಲ ಹಿಡಿದ ಹೊಂದಿದೆ. ಭಾರತಕ್ಕಿಂತ ಕೀವಿಸ್ ಪಡೆ 356 ರನ್‌ಗಳ ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications