For Quick Alerts
ALLOW NOTIFICATIONS  
For Daily Alerts
 

ಆ ಗುಟ್ಟು ಬಿಟ್ಟುಕೊಡಲ್ಲ: ಟೆಸ್ಟ್ ಸರಣಿಗೆ ರಾಸ್ ಟೇಯ್ಲರ್ ವಿಶೇಷ ರಣತಂತ್ರ!

Ind vs NZ test series: Ross Taylor dont want to reveal his secrets against R Ashwin

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮುಕ್ತಾಯದ ಬಳಿಕ ಈ ಎರಡು ತಂಡಗಳೂ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಟಿ20 ಸರಣಿಯಲ್ಲಿ ಭಾಗವಹಿಸುವ ಸಲುವಾಗಿ ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ರಾಸ್ ಟೇಯ್ಲರ್ ಈಗಾಲೇ ಭಾರತಕ್ಕೆ ಆಗಮಿಸಿದ್ದು ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಬೌಲಿಂಗ್ ದಾಳಿಯ ವಿರುದ್ಧ ಮೇಲುಗೈ ಸಾಧಿಸಲು ವಿಶೇಷ ರಣತಂತ್ರವನ್ನು ಮಾಡಿರುವುದು ಸ್ಪಷ್ಟವಾಗಿದೆ.

ಆದರೆ ಆರ್ ಅಶ್ವಿನ್ ಅವರ ವಿರುದ್ಧ ಯಾವ ರೀತಿಯ ಯೋಜನೆ ಹಾಕಿಕೊಂಡಿದ್ದೀರಿ ಎಂಬ ಪ್ರಶ್ನೆ ರಾಸ್ ಟೇಯ್ಲರ್ ಮುಂದೆ ಬಂದಾಗ ಈ ವಿಚಾರವನ್ನು ಬಹಿರಂಗಪಡಿಸಲು ಟೇಯ್ಲರ್ ನಿರಾಕರಿಸಿದ್ದಾರೆ. ಭಾರತೀಯ ನೆಲದಲ್ಲಿಯೇ ಈ ಟೆಸ್ಟ್ ಸರಣಿ ಕೂಡ ನಡೆಯುತ್ತಿರುವ ಕಾರಣ ಸ್ಪಿನ್ನರ್‌ಗಳು ಭಾರೀ ಪರಿಣಾಮವನ್ನುಂಟು ಮಾಡುವುದು ನಿಶ್ಚಿತ. ಹಾಗಾಗಿ ಭಾರತೀಯ ಬೌಲಿಂಗ್ ವಿಭಾಗವನ್ನು ಎದುರಿಸಲು ಟೇಯ್ಲರ್ ವಿಶೇಷ ರಣತಂತ್ರ ಹೆಣೆದಿದ್ದಾರೆ. ಈ ಸಂದರ್ಭದಲ್ಲಿ ಅವರು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಬೌಲಿಂಗ್ ಲೈನ್‌ಅಪ್ ಹೇಗಿರಲಿದೆ ಎಂಬುದು ಕೂಡ ತಿಳಿದಿಲ್ಲ ಎಂದಿದ್ದಾರೆ.

2ನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವ ಈ ಸರಣಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಈ ಆವೃತ್ತಿಯ ಪ್ರಥಮ ಸರಣಿಯೂ ಹೌದು. ಈ ಎರಡು ತಂಡಗಳು ಕೂಡ ಈ ಹಿಂದಿನ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಫೈನಲ್‌ನಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ. ಹೀಗಾಗಿ ಈ ಎರಡು ತಂಡಗಳ ಮುಖಾಮುಖಿ ಸಾಕಷ್ಟು ಕುತೂಹಲ ಮೂಡಿಸಿದೆ.

"ಖಂಡಿತವಾಗಿಯೂ ನಾನು ಈ ಸರಣಿಯನ್ನು ಎದುರುನೋಡುತ್ತಿದ್ದೇನೆ. ಇದು ಖಂಡಿತ ಕಠಿಣ ಸವಾಲಾಗಲಿದೆ. ಭಾರತವನ್ನು ಅಥವಾ ಆಸ್ಟ್ರೇಲಿಯಾವನ್ನು ತವರಿನಲ್ಲಿ ಎದುರಿಸುವುದದಕ್ಕಿಂತ ಕಠಿಣವಾದ ಸವಾಲು ಇನ್ನೊಂದಿಲ್ಲ ಎಂದು ನಾನು ಭಾವಿಸುತ್ತೇನೆ. ಅದರಲ್ಲೂ ಟೆಸ್ಟ್ ಮಾದರಿಯಲ್ಲಿ ಇದು ಅತ್ಯಂತ ಕಠಿಣ ಸವಾಲಾಗಿರಲಿದೆ" ಎಂದಿದ್ದಾರೆ ರಾಸ್ ಟೇಯ್ಲರ್. "ಈ ಸವಾಲನ್ನು ನಾವು ತಂಡವಾಗಿ ಎದುರಸಬೇಕಿದೆ. ಈಗ ನಾವು ಸರಣಿಯಲ್ಲಿ ಅಂಡರ್‌ಡಾಗ್ಸ್ ಎಂಬುದು ನನಗೆ ಅರಿವಿದೆ. ಅದು ವಿಶ್ವದ ನಂಬರ್ 1 ಆಗಿದ್ದರೂ ಅಥವಾ ಅಲ್ಲದಿದ್ದರೂ ಭಾರತದಲ್ಲಿ ಯಾವಾಗ ನೀವು ಆಡಿದರೂ ನಿಮ್ಮ ತಂಡ ಅಂಡರ್‌ಡಾಗ್ಸ್ ತಂಡವಾಗಿಯೇ ಇರುತ್ತದೆ" ಎಂದಿದ್ದಾರೆ ರಾಸ್ ಟೇಯ್ಲರ್.

ಇನ್ನು ಇದೇ ಸಂದರ್ಭದಲ್ಲಿ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಆಡುವಾಗ ತಂಡದ ಇಬ್ಬರು ಸ್ಪಿನ್ನರ್‌ಗಳನ್ನು ಹೇಗೆ ಎದುರಿಸುತ್ತೇನೆ ಎಂಬುದು ಮುಖ್ಯವಾಗುತ್ತದೆ ಎಂದಿದ್ದಾರೆ. ಈ ಇಬ್ಬರು ಬೌಲರ್‌ಗಳನ್ನು ಎದುರಿಸುವುದರ ಮೇಲೆ ನ್ಯೂಜಿಲೆಂಡ್ ತಂಡದ ಯಶಸ್ಸು ನಿಂತಿದೆ ಎಂದಿದ್ದಾರೆ ರಾಸ್ ಟೇಯ್ಲರ್.

ಈ ಸಂದರ್ಭದಲ್ಲಿ ರಾಸ್ ಟೇಯ್ಲರ್‌ಗೆ ಆರ್ ಅಶ್ವಿನ್ ವಿರುದ್ಧ ಯಾವ ರಣತಂತ್ರವನ್ನು ಹೆಣೆದಿದ್ದೀರಿ ಎಂಬ ಪ್ರಶ್ನೆ ಎದುರಾಯಿತು. ಆದರೆ ಈ ಪ್ರಶ್ನೆಗೆ ರಾಸ್ ಟೇಯ್ಲರ್ ಜಾಣತನದ ಉತ್ತರವನ್ನು ನೀಡಿದ್ದಾರೆ. ನಾನು ಯಾವುದೇ ರಹಸ್ಯಗಳನ್ನು ಕೂಡ ಈ ಸಂದರ್ಭದಲ್ಲಿ ಬಿಚ್ಚಿಡುವುದಿಲ್ಲ. ಭಾರತ ಯಾವ ಬೌಲಿಂಗ್ ಲೈನ್‌ಅಪ್‌ನೊಂದಿಗೆ ಕಣಕ್ಕಿಳಿಯಲಿದೆ ಎಂಬುದು ಕೂಡ ನನಗೆ ಗೊತ್ತಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಕ್ಷರ್‌ ಪಟೇಲ್ ದೊಡ್ಡ ಪಾತ್ರವನ್ನು ವಹಿಸಿದ್ದರು" ಎಂದಿದ್ದಾರೆ ಕಿಬೀಸ್ ತಮಡದ ಅನುಭವಿ ಆಟಗಾರ ರಾಸ್ ಟೇಯ್ಲರ್. ರಾಸ್ ಟೇಯ್ಲರ್ ಭಾರತದ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಟಿ20 ವಿಶ್ವಕಪ್‌ನ ತಂಡಕ್ಕೂ ಟೇಯ್ಲರ್ ಆಯ್ಕೆಯಾಗಿರಲಿಲ್ಲ.

Story first published: Sunday, November 21, 2021, 18:14 [IST]
Other articles published on Nov 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+