ಭಾರತ, ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯದ ಟಿಕೆಟ್ 8 ನಿಮಿಷದಲ್ಲಿ ಸೋಲ್ಡ್ ಔಟ್!
ಭಾರತದ ಆಟಗಾರರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕೆಲವು ಆಟಗಾರರು ದೇಶೀಯ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಟೀಮ್ ಇಂಡಿಯಾ ಪ್ರಸಕ್ತ ವರ್ಷದ ಆರಂಭವನ್ನು ನ್ಯೂಜಿಲೆಂಡ್ ವಿರುದ್ಧ ಮಾಡಲಿದೆ. ಕಿವೀಸ್ ತಂಡ ವಿರುದ್ಧ ಭಾರತ ತಂಡದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.
ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ. ಉಭಯ ದೇಶಗಳ ನಡುವಣ ಮೊದಲ ಏಕದಿನ ಪಂದ್ಯ ಜನವರಿ 11 ರಂದು ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯ ನೋಡಲು ಅಭಿಮಾನಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಬರೋಡಾದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಪಂದ್ಯದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಯಿತು. ಈ ಟಿಕೆಟ್‌ಗಳು ಕೇವಲ 8 ನಿಮಿಷದಲ್ಲಿ ಬಿಕರಿಯಾಗಿವೆ. ವಿರಾಟ್, ರೋಹಿತ್ ಅಭಿಮಾನಿಗಳನ್ನು ಮೈದಾನದತ್ತ ಸೆಳೆಯುವಲ್ಲಿ ಮತ್ತೊಮ್ಮೆ ಸಫಲರಾಗಿದ್ದಾರೆ.

8 ನಿಮಿಷದಲ್ಲಿ ಮಾರಾಟವಾದ ಟಿಕೆಟ್
ಭಾರತ ಹಾಗೂ ನ್ಯೂಜಿಲೆಂಡ್ ಸರಣಿಯ ಟಿಕೆಟ್‌ಗಳನ್ನು ಆನ್‌ಲೈನ್ ಹಾಗೂ ಆಪ್‌ನಲ್ಲಿ ಮಾರಾಟ ಮಾಡಲಾಯಿತು. ವರದಿಗಳ ಪ್ರಕಾರ, ಟಿಕೆಟ್ ಮಾರಟ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಟಿಕೆಟ್‌ಗಳು ಜಸ್ಟ್ 8 ನಿಮಿಷದಲ್ಲಿ ಸೋಲ್ಡ್ ಔಟ್ ಆಗಿವೆ. ನಾವು ಗಮನಿಸಬೇಕಾದ ಅಂಶ ಎಂದರೆ, ಈಗ ಆನ್‌ಲೈನ್ ಟಿಕೆಟ್‌ಗಳ ಮಾರಾಟ ಮಾತ್ರ ನಡೆದಿದೆ. ಇನ್ನು ಆಫ್‌ಲೈನ್ ಟಿಕೆಟ್‌ಗಳ ಮಾರಾಟ ಆಗುವುದು ಬಾಕಿ ಇದೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಇದು ಈ ವರ್ಷದ ಮೊದಲ ಏಕದಿನ ಪಂದ್ಯವಾಗಿರಲಿದೆ. ಈ ಇಬ್ಬರೂ ಆಟಗಾರರು ಸದ್ಯ ಭಾರತದ ಪರ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಇವರು ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ. ಹೀಗಾಗಿ ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳಿಗೆ ಇದು ಸದವಕಾಶ.
ಭರ್ಜರಿ ಲಯದಲ್ಲಿರುವ ಸ್ಟಾರ್ಸ್
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರೂ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇಬ್ಬರೂ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ರೋಹಿತ್ ಶರ್ಮಾ ಧಮಾಕೆದಾರ್ ಪ್ರದರ್ಶನ ನೀಡಿದರೆ, ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಅಬ್ಬರಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ರಿಂದ ಗೆಲ್ಲುವಲ್ಲಿ ಈ ಸ್ಟಾರ್ ಆಟಗಾರರ ಕೊಡುಗೆ ಅಪಾರ. ಈ ಆಟಗಾರರ ಲಯ ಅಭಿಮಾನಿಗಳನ್ನು ಮೈದಾನದತ್ತ ಬರುವಂತೆ ಮಾಡಿದೆ.
ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 11 ರಂದು ಬರೋಡಾದಲ್ಲಿ ನಡೆಯಲಿದೆ. ಜ.14 ರಂದು ರಾಜ್‌ಕೋಟ್‌ನಲ್ಲಿ ಎರಡನೇ ಪಂದ್ಯ, ಜ.18 ರಂದು ಮೂರನೇ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications