ತವರು ನೆಲದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ತಂಡಗಳು ಏನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ನ್ಯೂಜಿಲೆಂಡ್ ತಂಡ ಭಾರತವನ್ನು ತವರಿನಲ್ಲಿ ಆತ್ಯಂತ ಕಡಿಮೆ ಸ್ಕೋರ್‌ಗೆ ಆಲೌಟ್ ಮಾಡಿದ ದಾಖಲೆ ಸೃಷ್ಟಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಕಿವೀಸ್ ತಂಡ ರೋಹಿತ್ ಪಡೆಯನ್ನು ಮೊದಲ ಇನಿಂಗ್ಸ್ 46 ರನ್‌ಗಳಿಗೆ ಆಲೌಟ್ ಮಾಡಿತ್ತು. ಕೇವಲ 15 ಗಂಟೆಗಳ ಆಟದಲ್ಲಿ ಕಿವೀಸ್ ಪಡೆ ಭಾರತದ ನೆಲದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಇತ್ತ ಟೀಮ್ ಇಂಡಿಯಾ ಬೆಂಗಳೂರು ಟೆಸ್ಟ್ ಗೆಲ್ಲಲು ನಿರಂತರವಾಗಿ ಹರಸಾಹಸ ಪಡುತ್ತಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆದ್ದರೆ 35 ವರ್ಷಗಳ ನಂತರ ಭಾರತದ ನೆಲದಲ್ಲಿ ಗೆಲುವು ದಾಖಲಿಸಿದಂತಾಗುತ್ತದೆ.

ಇಂತಹ ರಣರೋಚಕ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ವೇಗದ ಬೌಲರ್ ಟಿಮ್ ಸೌಥಿ ಅವರು ದಾಖಲೆ ಮಾಡಿದ್ದಾರೆ. 8ನೇ ವಿಕೆಟ್‌ಗೆ ರಚಿನ್ ರವೀಂದ್ರ ಅವರೊಂದಿಗೆ ಜೊತೆಯಾಗಿ ಟಿಮ್ ಸೌಥಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅನುಭವಿ ಸೌಥಿ ಅರ್ಧಶತಕ ಸಿಡಿಸಿ ಮಿಂಚಿದರು. ಸೌಥಿ 73 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 65 ರನ್ ಬಾರಿಸಿದರು.
ಈ ಅದ್ಭುತ ಇನ್ನಿಂಗ್ಸ್‌ನಲ್ಲಿ ಬಾರಿಸಿದ 4 ಸಿಕ್ಸರ್‌ಗಳ ಮೂಲಕ ಟಿಮ್ ಸೌಥಿ, ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿದರು. ಸೆಹ್ವಾಗ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 91 ಸಿಕ್ಸರ್‌ಗಳನ್ನು ಹೊಂದಿದ್ದರು. ಆದರೆ ಸೌಥಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 4 ಸಿಕ್ಸರ್‌ಗಳನ್ನು ಸಿಡಿಸಿ ಸೆಹ್ವಾಗ್ ಅವರನ್ನು ಹಿಂದಿಕ್ಕಿದರು. ಈಗ ಸೌಥಿ ಹೆಸರಿನಲ್ಲಿ 93 ಟೆಸ್ಟ್ ಸಿಕ್ಸರ್‌ಗಳಿವೆ.
ಬೆಂಗಳೂರು ಟೆಸ್ಟ್‌ನಲ್ಲಿ ರಚಿನ್ ಮತ್ತು ಸೌಥಿ ದಾಖಲೆಯ ಜೊತೆಯಾಟವಾಡಿದರು. ಈ ಜೋಡಿ ಟೀಮ್ ಇಂಡಿಯಾ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ನಿಂತು ಕಾಡಿದರು. ರಚಿನ್ ಮತ್ತು ಸೌಥಿ ಇಬ್ಬರು 137 ರನ್‌ಗಳ ಜೊತೆಯಾಟ ಪ್ರದರ್ಶಿಸಿದರು. ಇದು ಭಾರತದ ನೆಲದಲ್ಲಿ ವಿದೇಶಿ ಬ್ಯಾಟರ್‌ಳು 8ನೇ ವಿಕೆಟ್‌ನ ದಾಖಲೆಯ ಜೊತೆಯಾಟವಾಗಿದೆ. ಕಳೆದ 41 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಆಗಿದೆ. ಈ ಹಿಂದೆ ಈ ಸಾಧನೆಯನ್ನು ಕ್ಲೈವ್ ಲಾಯ್ಡ್ ಮತ್ತು ಆಂಡಿ ರಾಬರ್ಟ್ಸ್ 1983 ರಲ್ಲಿ ಮಾಡಿದ್ದರು. ಇಬ್ಬರು ಕೆರಿಬಿಯನ್ ದೈತ್ಯರ ನಡುವೆ 8ನೇ ವಿಕೆಟ್‌ಗೆ 161 ರನ್‌ಗಳ ಜೊತೆಯಾಟ ಕಂಡುಬಂದಿತು.