For Quick Alerts
ALLOW NOTIFICATIONS  
For Daily Alerts
 

Virat Kohli: ನ್ಯೂಜಿಲೆಂಡ್‌ ಚಕ್ರವ್ಯೂಹ ಬೇಧಿಸಲು ವಿರಾಟ್ ಕೊಹ್ಲಿ ಸಿದ್ಧ

ಚಾಂಪಿಯನ್ಸ್‌ ಟ್ರೋಫಿ ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಲೀಗ್‌ ಹಂತ ಮುಗಿಯುವ ಹಂತಕ್ಕೆ ಬಂದಿದ್ದು, ಭಾನುವಾರ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು, ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯ ಗೆದ್ದು ಟೂರ್ನಿಯಲ್ಲಿ ಅಜೇಯ ಓಟವನ್ನು ಮುನ್ನಡೆಸುವ ಇರಾದೆ ಭಾರತ ತಂಡದ್ದಾಗಿದೆ. ಭಾರತ ಈ ಲೆಕ್ಕಾಚಾರದಲ್ಲೇ ಚಾಂಪಿಯನ್ಸ್ ಟ್ರೋಫಿ ಕಣಕ್ಕೆ ಇಳಿಯಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಭಾರತದ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್‌ ಅವರ ಮೇಲೆ ನೆಟ್ಟಿರಲಿವೆ.

ಭಾರತ ಹಾಗೂ ನ್ಯೂಜಿಲೆಂಡ್ ಎರಡೂ ತಂಡಗಳಲ್ಲಿ ವಿಶ್ವ ವಿಖ್ಯಾತ ಸ್ಟಾರ್ ಆಟಗಾರರು ಇದ್ದಾರೆ. ಮದಗಜಗಳ ಕಾದಾಟವನ್ನು ಕಣ್ಣು ತುಂಬಿಕೊಳ್ಳಲು ಇಡೀ ಕ್ರಿಕೆಟ್‌ ಜಗತ್ತು ಕಾತುರದಿಂದ ಕಾಯುತ್ತಿದೆ. ಈ ವೇಳೆ ಭಾರತ ಸಹ ನ್ಯೂಜಿಲೆಂಡ್ ಹಣೆಯಲು ಮಾಸ್ಟರ್‌ ಪ್ಲ್ಯಾನ್ ಮಾಡಿಕೊಂಡಿದೆ. ಭಾರತ ತಂಡವನ್ನು ಬ್ಯಾಟಿಂಗ್ ವಿಭಾಗದಲ್ಲಿ ಹಲವು ಸ್ಟಾರ್ ಆಟಗಾರರು ಮುನ್ನಡೆಸುತ್ತಿದ್ದಾರೆ. ಆದರೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾವನ್ನು ಅರ್ಜುನನ್ನಂತೆ ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಮೇಲೆ ನೆಟ್ಟಿರಲಿದೆ.

IND vs NZ Virat Kohli a Big Threat to New Zealand in Champions Trophy Match

ವಿರಾಟ್ ಕೊಹ್ಲಿ ಅಂಕಿ ಅಂಶಗಳು ನ್ಯೂಜಿಲೆಂಡ್ ವಿರುದ್ಧ ಅಮೋಘವಾಗಿವೆ. ಇವರು ಆಡಿದ 31 ಪಂದ್ಯಗಳಲ್ಲಿ 58.75ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದ್ದಾರೆ. ಅಲ್ಲದೆ 95.69ರ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ಈ ವೇಳೆ ಇವರು 1645 ರನ್‌ ಸಿಡಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 9 ಅರ್ಧಶತಕಗಳು ಸೇರಿವೆ.

ಚೇಸಿಂಗ್ ಸ್ಟಾರ್ ವಿರಾಟ್‌ಗೆ ಬಿಗ್‌ ಮ್ಯಾಚ್‌ಗಳಲ್ಲಿ ಆಡುವುದು ತುಂಬ ಇಷ್ಟ. ಇದಕ್ಕೆ ಉದಾರಹಣೆ 2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ. ಈ ಪಂದ್ಯದಲ್ಲಿ ವಿರಾಟ್‌ ಮುಂಬೈನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ತನ್ನ ಗಾಡ್‌ ಫಾದರ್‌ ಎದುರು ಅವರದ್ದೇ ದಾಖಲೆಯನ್ನು ಮೀರಿ ನಿಂತಿದ್ದರು. ಈ ಪಂದ್ಯದಲ್ಲಿ ವಿರಾಟ್‌ 113 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 117 ರನ್‌ ಬಾರಿಸಿದ್ದರು. ಇದು ಅವರ ಏಕದಿನ ವೃತ್ತಿ ಜೀವನದ 50ನೇ ಏಕದಿನ ಶತಕವಾಗಿತ್ತು.

IND vs NZ Virat Kohli a Big Threat to New Zealand in Champions Trophy Match

ಆ ಶತಕದ ಬಳಿಕ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕವನ್ನು ಸಿಡಿಸಿರಲಿಲ್ಲ. ಆದರೆ ಕಳೆದ ಭಾನುವಾರ ಪಾಕಿಸ್ತಾನ ವಿರುದ್ಧ ತಮ್ಮ ಹಳೆಯ ಖದರ್‌ನಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದ್ದಾರೆ. ಈ ಮೂಲಕ ತಮ್ಮಲ್ಲಿ ಇನ್ನು ಕ್ಲಾಸ್ ಹಾಗೇ ಇದೆ ಎನ್ನುವುದಾಗಿ ತಿಳಿಸಿದ್ದಾರೆ. ಪಾಕ್‌ ವಿರುದ್ಧ ಶತಕ ಸಿಡಿಸಿರುವ ವಿರಾಟ್, ನ್ಯೂಜಿಲೆಂಡ್ ತಂಡಕ್ಕೆ ಭಯ ಹುಟ್ಟಿಸಿದ್ದಾರೆ.

Story first published: Saturday, March 1, 2025, 10:00 [IST]
Other articles published on Mar 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+