ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಡ್ರೆಸ್ಸಿಂಗ್‌ರೂಮ್‌ನಲ್ಲಿ ನೀಡುವ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಈಗ ಎಲ್ಲರ ಗಮನಸೆಳೆಯುಂಥಾಗಿದೆ. ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರ ಕೂಡ ಈ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿರುವುದು ಕೂಡ ಸ್ಪಷ್ಟವಾಗಿದೆ. ಅಲ್ಲದೆ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೀಲ್ಡಿಂಗ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸುತ್ತಿರುವುದು ಕೂಡ ಗಮನಾರ್ಹ ಅಂಶ.
ಧರ್ಮಶಾಲಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಫೀಲ್ಡಿಂಗ್‌ನಲ್ಲಿ ಒಂದೆರಡು ಎಡವಟ್ಟುಗಳನ್ನು ಮಾಡಿದ್ದರೂ ಟೀಮ್ ಇಂಡಿಯಾದ ಒಟ್ಟಾರೆ ಫಿಲ್ಡಿಂಗ್ ಉತ್ತಮವಾಗಿಯೇ ಇತ್ತು. ಹೀಗಾಗಿ ಈ ಪಂದ್ಯದಲ್ಲಿ ಯಾರಿಗೆ ಪಂದ್ಯದ ಅತ್ಯುತ್ತಮ, ಫಿಲ್ಡರ್ ಪ್ರಶಸ್ತಿ ದೊರೆಯಲಿದೆ ಎನ್ನುವ ಕುತೂಹಲ ಮೂಡಿಸಿತ್ತು. ಈ ಕುತೂಹಲಕ್ಕೆ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಹಾಗೂ ಮ್ಯಾನೇಜ್‌ಮೆಂಟ್ ಅಷ್ಟೇ ರೋಚಕ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ಸ್ಪೈಡರ್ ಕ್ಯಾಮರ್ ಹೊತ್ತು ತಂದ ಫಲಿತಾಂಶ
ಟೀಮ್ ಇಂಡಿಯಾದ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಗೆ ಭಾಜನರಾಗುವ ಆಟಗಾರರ ಘೋಷಣೆಯನ್ನು ಮತ್ತೊಮ್ಮೆ ವಿಭಿನ್ನ ರೀತಿಯಲ್ಲಿ ಮಾಡಲಾಗಿದೆ. ಈ ಬಾರಿ ಸ್ಪೈಡರ್ ಕ್ಯಾಮರ್ ಈ ಪ್ರಶಸ್ತಿ ಗೆದ್ದವರು ಯಾರು ಎನ್ನುವ ಪ್ರಶ್ನೆಗೆ ಉತ್ತರವಾಗಿ ಟೀಮ್ ಇಂಡಿಯಾದ ಆಟಗಾರ ಶ್ರೇಯಸ್ ಐಯ್ಯರ್ ಅವರ ಫೋಟೋವನ್ನು ಹೊತ್ತು ತರುವ ಮೂಲಕ ಅವರನ್ನು ವಿಜೇತರು ಎಂದು ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ತಂಡದ ಆಟಗಾರರೆಲ್ಲರೂ ಸಂಭ್ರಮಿಸಿದರು.
ತಂಡದ ಫೀಲ್ಡಿಂಗ್ ಬಗ್ಗೆ ಫೀಲ್ಡಿಂಗ್ ಕೋಚ್ ಮಾತು
ನ್ಯೂಜಿಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾದ ಸ್ಮರಣೀಯ ಗೆಲುವಿನ ಬಳಿಕ ಡ್ರೆಸ್ಸಿಂಗ್‌ರೂಮ್‌ನಲ್ಲಿ ತಂಡವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಿವೀಸ್ ದಾಂಡಿಗ ಡೆವೋನ್ ಕಾನ್ವೆ ಔಟಾ್ ಆಗಲು ಕಾರಣವಾದ ಶ್ರೇಯಸ್ ಐಯ್ಯರ್ ಅವರ ಅದ್ಭುತ ಕ್ಯಾಚ್‌ಗೆ ವಿಶೇಷ ಮೆಚ್ಚಿಗೆ ವ್ಯಕ್ತಪಡಿಸಿದರು. ಅಲ್ಲದೆ ಮೊಹಮ್ಮದ್ ಸಿರಾಜ್ ಹಾಗೂ ವಿರಾಟ್ ಕೊಹ್ಲಿಯ ಫೀಲ್ಡಿಂಗ್ ಬಗ್ಗೆಯೂ ವಿಶೇಷ ಮಾತುಗಳನ್ನಾಡಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಕ್ಯಾಚ್‌ಗಳನ್ನು ಕೈಚೆಲ್ಲಿದ ಬಗ್ಗೆಯೂ ಮಾತನಾಡಿದ ಟಿ ದಿಲೀಪ್ ಅವರು ಕೆಲ ತಪ್ಪುಗಳು ಆಗಿದೆ ಆದರೆ ಒಟ್ಟಾರೆಯಾಗೊಗಿ ಫೀಲ್ಡಿಂಗ್ ಅದ್ಭುತವಾಗಿತ್ತು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಈ ಹಿಂದಿನ ಪಂದ್ಯದಲ್ಲಿ ದೊಡ್ಡ ಪರದೆಯಲ್ಲಿ ಫಲಿತಾಂಶ
ಇನ್ನು ಇದಕ್ಕೂ ಹಿಂದೆ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿಯೂ ಹೀಗೆ ವಿಭಿನ್ನವಾಗಿ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ಯಾರಿಗೆ ಎನ್ನುವ ಘೋಷಣೆ ಮಾಡಲಾಗಿತ್ತು. ಡ್ರೆಸ್ಸಿಂಗ್‌ರೂಮ್‌ನಲ್ಲಿ ತಂಡದ ಫಿಲ್ಡಿಂಗ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಬಳಿಕ ಫೀಲ್ಡಿಂಗ್ ಕೋಚ್ ಆರ್ ಶ್ರೀಧರನ್ ಬೃಹತ್ ಪರದೆಯತ್ತ ನೋಡುವಂತೆ ಟೀಮ್ ಇಂಡಿಯಾ ಆಟಗಾರರಿಗೆ ತಿಳಿಸಿದರು. ಬೃಹತ್ ಪರೆದೆಯಲ್ಲಿ ರವೀಂದ್ರ ಜಡೇಜಾ ಅವರ ಫೋಟೋ ಕಾಣಿಸಿಕೊಂಡಿತ್ತು. ಇದಕ್ಕೆ ಇಡೀ ತಂಡವೇ ರೋಮಾಂಚನಗೊಂಡು ಸಂಭ್ರಮಿಸಿತ್ತು.