IND vs PAK: ಭಾರತ-ಪಾಕ್ ಫೈಟ್: ಅಭಿಷೇಕ್ ಶರ್ಮಾ vs ಶಾಹೀನ್ ಅಫ್ರಿದಿ
ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಭಾನುವಾರ ಸಂಜೆ ಕೊಲಂಬೊದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ವಿಶ್ವದ ಖ್ಯಾತ ನಾಮ ಆಟಗಾರರು ಮೈದಾನದಲ್ಲಿ ಎದುರಾಗುತ್ತಿರುವುದರಿಂದ ರೋಚಕತೆ ಹೆಚ್ಚಿಸಿದೆ. ಬ್ಯಾಟರ್ ಹಾಗೂ ಬೌಲರ್‍ಗಳ ನಡುವಿನ ಕಾಳಗವನ್ನು ನೋಡಲು ಅಭಿಮಾನಿಗಳು ನೋಡಲು ಕಾತುರರಾಗಿದ್ದಾರೆ.
ಭಾರತ, ಪಾಕ್ ತಂಡಗಳು ಮೈದಾನಕ್ಕೆ ಇಳಿದಾಗ ಜಿದ್ದು ಕಂಡು ಬರುತ್ತದೆ. ಹೊಡಿಬಡಿ ಆಟದ ಶ್ರೇಷ್ಠ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಉತ್ತಮ ಅಂಕಿ ಅಂಶಗಳನ್ನು ಹೊಂದಿದೆ. ಭಾನುವಾರ ನಡೆಯಲಿರುವ ಪಂದ್ಯದ ವೇಳೆ ಎಲ್ಲರ ಕಣ್ಣುಗಳು ಐದು ಜೋಡಿಗಳ ಹೋರಾಟ ಪಂದ್ಯದ ರೋಚಕತೆ ಹೆಚ್ಚಿಸಿದೆ.

ಅಭಿಷೇಕ್ ಶರ್ಮಾ vs ಶಾಹೀನ್ ಅಫ್ರಿದಿ
ಟಿ20 ಕ್ರಿಕೆಟ್‌ನ ಅಪಾಯಕಾರಿ ಬ್ಯಾಟರ್‍ಗಳಲ್ಲಿ ಅಭಿಷೇಕ್ ಶರ್ಮಾ ಒಬ್ಬರು. ಇವರು ತಾವು ಎದುರಿಸುವ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವನ್ನು ಆಡಬಲ್ಲರು. ಇವರು ಇತ್ತೀಚಿಗೆ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲೂ ಅಭಿಷೇಕ್, ಪಾಕ್ ಬೌಲರ್‌ಗಳನ್ನು ಕಾಡಬಲ್ಲರು. ಇನ್ನು ಪಾಕ್ ತಂಡದಲ್ಲೂ ಸ್ಟಾರ್ ವೇಗದ ಬೌಲರ್ ಇದ್ದಾರೆ. ಶಾಹೀನ್ ಅಫ್ರಿದಿ ತಂಡದ ವೇಗದ ಬೌಲಿಂಗ್ ನೊಗವನ್ನು ಮುನ್ನಡೆಸಲಿದ್ದಾರೆ. ಈ ಇಬ್ಬರು ಸ್ಟಾರ್ ಆಟಗಾರರ ಕಾಳಗವನ್ನು ಕಣ್ಣುತುಂಬಿಕೊಳ್ಳಲು ಅಭಿಮಾನಿಗಳು ತಯಾರಾಗಿದ್ದಾರೆ. ಅಭಿಷೇಕ್ ಒಮ್ಮೆಯೂ, ಶಾಹೀನ್‌ಗೆ ವಿಕೆಟ್ ಒಪ್ಪಿಸಿಲ್ಲ. ಅಲ್ಲದೆ ಇವರ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿ ಆರ್ಭಟಿಸಿದ್ದಾರೆ. ಈ ಇಬ್ಬರ ಕಾದಾಟದಲ್ಲಿ ಅಭಿಷೇಕ್ 7 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ್ದಾರೆ.
ಸಾಹಿಬ್‌ಜಾದಾ vs ಬುಮ್ರಾ
ಸಾಹಿಬ್‌ಜಾದಾ ಫರ್ಹಾನ್ ಮತ್ತು ಜಸ್‌ಪ್ರೀತ್ ಬುಮ್ರಾ ನಡುವೆ ಬಿಗ್ ಫೈಟ್ ನಡೆಯಲಿದೆ. ಸಾಹಿಬ್‌ಜಾದಾ ಫರ್ಹಾನ್, ಬುಮ್ರಾ ವಿರುದ್ಧ ಆಡಿದ 34 ಎಸೆತಗಳಲ್ಲಿ 51 ರನ್ ಗಳಿಸಿದ್ದಾರೆ. ಇಷ್ಟಾದ್ರೂ ಬುಮ್ರಾ ಇವರನ್ನು ಒಮ್ಮೆಯೂ ಔಟ್ ಮಾಡಿಲ್ಲ.
ತಿಲಕ್ ವರ್ಮಾ vs ಅಬ್ರಾರ್ ಅಹ್ಮದ್
ಈ ಜೋಡಿ ಕಾಳಗದಲ್ಲಿ ಎಲ್ಲರ ಚಿತ್ತ ಕದ್ದಿರುವ ಇನ್ನೊಂದು ಜೋಡಿ ತಿಲಕ್ ವರ್ಮಾ ಹಾಗೂ ಅಬ್ರಾರ್ ಅಹ್ಮದ್. ಈ ವರೆಗೆ ಆಡಿದ ಟಿ20 ಕ್ರಿಕೆಟ್‌ನಲ್ಲಿ ತಿಲಕ್ 26 ಎಸೆತಗಳಲ್ಲಿ 23 ರನ್ ಗಳಿಸಿದ್ದಾರೆ. ಅಲ್ಲದೆ ತಿಲಕ್ ಅಬ್ರಾರ್‌ಗೆ ಒಮ್ಮೆಯೂ ವಿಕೆಟ್ ಒಪ್ಪಿಸಿಲ್ಲ.
ಸೈಮ್ ಅಯೂಬ್ vs ಅರ್ಶ್‌ದೀಪ್
ಪಾಕಿಸ್ತಾನದ ಎಡಗೈ ಬ್ಯಾಟ್ಸ್‌ಮನ್ ಸೈಮ್ ಅಯೂಬ್ ಅವರ ಹಾಗೂ ಎಡಗೈ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ನಡುವಣ ಫೈಟ್ ಎಲ್ಲರ ಗಮನ ಸೆಳೆದಿದೆ.
ಉಸ್ಮಾನ್ ತಾರೀಕ್ vs ಹಾರ್ದಿಕ್ ಪಾಂಡ್ಯ
ಎರಡೂ ತಂಡಗಳ ಕಾದಾಟದಲ್ಲಿ ಎಲ್ಲರ ಚಿತ್ತ ಕದ್ದ ಫೈಟ್ ಎಂದರೆ ಉಸ್ಮಾನ್ ತಾರೀಕ್ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ. ಉಸ್ಮಾನ್ ತಾರೀಕ್ ಸ್ಪಿನ್ ಬೌಲಿಂಗ್ ಮಾಡಲಿದ್ದು, ಇವರು ಮಿಡ್ಲ್ ಓವರ್‌ಗಳಲ್ಲಿ ಬೌಲಿಂಗ್ ಮಾಡಬಲ್ಲರು. ಇನ್ನು ಹಾರ್ದಿಕ್ ಪಾಂಡ್ಯ ಸಹ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡುತ್ತಾರಾ. ಹೀಗಾಗಿ ಈ ಇಬ್ಬರ ಕಾಳಗ ಎಲ್ಲರ ಚಿತ್ತ ಕದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications