ಕೊಹ್ಲಿಯನ್ನು ಎತ್ತಿ ಸಂಭ್ರಮಿಸಿದ ರೋಹಿತ್: ಪಾಕ್ ವಿರುದ್ಧ ಗೆದ್ದ ನಂತರ ಭಾರತದ ಸಂಭ್ರಮಾಚರಣೆ: ವಿಡಿಯೋ

ಮೆಲ್ಬರ್ನ್ ಕ್ರಿಕೆಟ್ ಮೈದಾನದ ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಕದನಕ್ಕೆ ಸಾಕ್ಷಿಯಾಗಿದೆ. ವಿರಾಟ್ ಕೊಹ್ಲಿಯ ಅಮೋಘ ಬ್ಯಾಟಿಂಗ್‌ನ ನೆರವಿನಿಂದಾಗು ಭಾರತ ಈ ರೋಚಕ ಪಂದ್ಯವನ್ನು 4 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಅದರಲ್ಲೂ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡು ವರ್ಷಗಳ ಬಳಿಕ ಫಾರ್ಮ್ ಕಂಡುಕೊಂಡು ನೀಡಿದ ಈ ಪ್ರದರ್ಶನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನಕಾರಿ ಅನುಭವ ನೀಡಿದೆ.
ಕಳೆದ ಏಷ್ಯಾ ಕಪ್ ವರೆಗೂ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗಿದ್ದವು. ವಿರಾಟ್ ಕೊಹ್ಲಿ ಭಾರತೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಅರ್ಹನಲ್ಲ ಎಂಬಂಥಾ ಕಟು ಟೀಕೆಗಳು ಕೂಡ ವ್ಯಕ್ತವಾಗಿದ್ದವು. ಈ ಎಲ್ಲದಕ್ಕೂ ಈಗ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‌ನಿಂದಲಲೇ ಉತ್ತರವನ್ನು ನೀಡುತ್ತಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತೆ ತಮ್ಮ ಅತ್ಯುತ್ತಮ ಫಾರ್ಮ್ ಕಂಡುಕೊಂಡಿದ್ದು ಭಾರತದ ಗೆಲುವಿಗೆ ಮತ್ತೆ ಕಾರಣವಾಗುತ್ತಿದ್ದಾರೆ. ಅದರಲ್ಲೂ ಮೆಲ್ಬರ್ನ್‌ನಲ್ಲಿ ಭಾರತ ಸಾಧಿಸಿದ ಗೆಲುವು ಅದೆಷ್ಟು ವಿಶೇಷವಾಗಿತ್ತು ಎಂಬುದಕ್ಕೆ ವಿರಾಟ್ ಕೊಹ್ಲಿ ಹಾಗೂ ಭಾರತ ತಂಡ ಸಂಭ್ರಮಿಸಿದ ರೀತಿಯೇ ಸಾಕ್ಷಿಯಾಗಿದೆ.

ಸಂಕಷ್ಟದ ಸಮಯದಲ್ಲಿ ಕಣಕ್ಕಿಳಿದ ಕೊಹ್ಲಿ
ಪಾಕಿಸ್ತಾನ ನೀಡಿದ ಸವಾಲಿನ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿತ್ತು. 31 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಈ ಸಂದರ್ಭದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಶತಕದ ಜೊತೆಯಾಟವನ್ನು ಆಡಿದರು. ಪರಿಸ್ಥಿತಿಗೆ ತಕ್ಕನಾಗಿ ಆಡುತ್ತಾ ಸಾಗಿದ ಕೊಹ್ಲಿ-ಪಾಂಡ್ಯ ಜೋಡಿ ಅಂತಿಮ ಓವರ್‌ನಲ್ಲಿ ಬೇರ್ಪಟ್ಟಿತ್ತು. ಹಾರ್ದಿಕ್ ಪಾಂಡ್ಯ 40 ರನ್‌ಗಳಿಸಿ ವಿರಾಟ್‌ಗೆ ಅದ್ಭುತವಾಗಿ ಸಾಥ್ ನೀಡಿದರು. ಮತ್ತೊಂದೆಡೆ ವಿರಾಟ್ ಕೊಹ್ಲಿ ಆರಂಭದಲ್ಲಿ ಎಚ್ಚರಿಕೆಯ ಪ್ರದರ್ಶನ ನೀಡಿದರಾದರೂ ಬಳಿಕ ಅದ್ಭುತವಾಗಿ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿಕೊಂಡು ಗೆಲುವಿಗೆ ಕಾರಣವಾದರು. ಅದರಲ್ಲೂ ಮಹತ್ವದ ಘಟ್ಟದಲ್ಲಿ ಪಾಕಿಸ್ತಾನದ ಪ್ರಮುಖ ಬೌಲರ್‌ಗಳನ್ನು ದಂಡಿಸಿ ಅಸಾಧ್ಯ ಗೆಲುವು ಸಾಧ್ಯವಾಗಿಸಿದರು ವಿರಾಟ್ ಕೊಹ್ಲಿ.

ಕೊಹ್ಲಿ ಅಮೋಘ ಹೋರಾಟ
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 53 ಎಸೆತಗಳನ್ನು ಎದುರಿಸಿದ್ದು ಅತ್ಯಂತ ಮಹತ್ವದ 82 ರನ್‌ಗಳಿಸಿ ಅಜೇಯವಾಗುಳಿದರು. ಅಂತಿಮ ಘಟ್ಟದಲ್ಲಿ ಭಾರತದ ಗೆಲುವಿಗೆ ಬಹುತೇಕ ಓವರ್‌ಗೆ 20ರ ಸನಿಹದಲ್ಲಿ ರನ್‌ಗಳ ಅಗತ್ಯವಿದ್ದಾಗಲೂ ಆತ್ಮವಿಶ್ವಾಸ ಕಳೆದುಕೊಳ್ಳದ ಕೊಹ್ಲಿ ಭಾರತ ತಂಡಕ್ಕೆ ನಂಬಲು ಅಸಾಧ್ಯವಾದ ಗೆಲುವು ತಂದುಕೊಟ್ಟರು. ಕೊಹ್ಲಿಯ ಅವಿಸ್ಮರಣೀಯ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು
ಕೊಹ್ಲಿಯನ್ನು ಎತ್ತಿ ಸಂಭ್ರಮಿಸಿದ ನಾಯಕ
ಇನ್ನು ಅಂತಿಮ ಎಸೆತದಲ್ಲಿ ಭಾರತಕ್ಕೆ ಒಂದು ರನ್ ಅಗತ್ಯವಿದ್ದಾಗ ಕ್ರೀಸ್‌ಗಿಳಿದ ಆರ್ ಅಶ್ವಿನ್ ಒಂದು ರನ್‌ಗಳಿಸಿ ತಂಡದ ಗೆಲುವು ಸಾರಿದರು. ಈ ಸಂದರ್ಭದಲ್ಲಿ ಭಾರತೀಯ ಅಭಿಮಾನಿಗಳ ಸಂಬ್ರ ಮುಗಿಲು ಮುಟ್ಟಿತು. ಇತ್ತ ವಿರಾಟ್ ಕೊಹ್ಲಿ ಮೈದಾನಕ್ಕೆ ಗುದ್ದಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದರು. ಟೀಮ್ ಇಂಡಿಯಾ ಆಟಗಾರರು ಮೈದಾನಕ್ಕೆ ಓಡಿ ಕೊಹ್ಲಿಯನ್ನು ಅಪ್ಪಿಕೊಂಡು ಸಂಭ್ರಮಿಸಿದರು. ಇನ್ನು ಬಳಿಕ ನಾಯಕ ರೋಹಿತ್ ಶರ್ಮಾ ಮಾತ್ರ ವಿರಾಟ್ ಕೊಹ್ಲಿಯನ್ನು ಎತ್ತಿ ತಿರುಗಿಸಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.
THANK YOU KING KOHLI 🙏🏻👑
— ѕтαяк|👑 ᴋᴏʜʟɪ ꜰᴛᴡ ❥ (stark_fooz) October 23, 2022
Bleed Blue 💙#INDvsPAK2022 #ViratKohli #KingKohli #Kohli pic.twitter.com/FcocAJskdL
ಇತ್ತಂಡಗಳ ಆಡುವ ಬಳಗ
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್
ಬೆಂಚ್: ಹರ್ಷಲ್ ಪಟೇಲ್, ರಿಷಭ್ ಪಂತ್, ಯುಜ್ವೇಂದ್ರ ಚಾಹಲ್, ದೀಪಕ್ ಹೂಡಾ
ಪಾಕಿಸ್ತಾನ ಆಡುವ ಬಳಗ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಶಾನ್ ಮಸೂದ್, ಶಾದಾಬ್ ಖಾನ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಆಸಿಫ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹಾರಿಸ್ ರೌಫ್
ಬೆಂಚ್: ಖುಶ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ವಾಸಿಂ ಜೂನಿಯರ್, ಫಖರ್ ಜಮಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications