ಟೀಮ್ ಇಂಡಿಯಾದ ಅನುಭವಿ ಆಟಗಾರ ಕೆಎಲ್ ರಾಹುಲ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಕೆಎಲ್ ರಾಹುಲ್ ವಿರಾಟ್ ಕೊಹ್ಲಿ ಜೊತೆಗೆ ಸೇರಿ ಅಮೋಘ ಬ್ಯಾಟಿಉಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ತಮ್ಮ 6ನೇ ಶತಕವನ್ನು ಪೂರ್ಣಗೊಳಿಸಿದಂತಾಗಿದೆ.
ಮತ್ತೊಂದೆಡೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಅಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 47ನೇ ಶತಕವನ್ನು ಪೂರ್ಣಗೊಳಿಸಿ ಪಾಕ್ ಬೌಲರ್‌ಗಳಿಗೆ ನೀರುಕುಡಿಸಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ತನ್ನ ಹಿಡಿತವನ್ನು ಸಾಧಿಸಿದೆ.

ಇಂದು ಪಾಕಿಸ್ತಾನದ ಬೌಲರ್‌ಗಳು ಒಂದೇ ಒಂದು ವಿಕೆಟ್ ಪಡೆಯಲು ಕೂಡ ಸಫಲವಾಗಲಿಲ್ಲ. ಇಂದು ಆಡಿದ 25.5 ಓವರ್‌ಗಳು ಸಂಪೂರ್ಣವಾಗಿ ಭಾರತದ ಆಟಗಾರರಾಗಿ ವಿರಾಟ್ ಕೊಹ್ಲಿ ಹಾಗೀ ಕೆಎಲ್ ರಾಹುಲ್ ಆಡಿ ಪಾಕ್ ದಾಳಿಯನ್ನು ಧ್ವಂಸಗೊಳಿಸಿದರು.
ಇನ್ನು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 94 ಎಸೆತಗಳನ್ನು ಎದುರಿಸಿದ್ದು 122 ರನ್‌ಗಳನ್ನು ಬಾರಿಸಿದರು. ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿದ್ದಾರೆ. 129.29ರ ಸ್ಟ್ರೈಕ್‌ರೇಟ್‌ನಲ್ಲಿ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ.
ಇನ್ನು ಇವರಿಗೆ ಸಾಥ್ ನೀಡಿದ ಕೆಎಲ್ ರಾಹುಲ್ 106 ಎಸೆತಗಳನ್ನು ಎದುರಿಸಿ 111 ರನ್‌ಗಳನ್ನು ಬಾರಿಸಿದ್ದಾರೆ. ರಾಹುಲ್ ಈ ಪಂದ್ಯದಲ್ಲಿ 12 ಬೌಂಡರಿ ಬಾರಿಸಿದರೆ 2 ಸಿಕ್ಸರ್ ಸಿಡಿಸಿದರು. 104.72 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಡಿಂಗ್ ನಡೆಸಿದ್ದಾರೆ ಕೆಎಲ್ ರಾಹುಲ್.
ಇನ್ನು ಈ ಪಂದ್ಯದಲ್ಲಿ ಗಾಯದಿಂದಾಗಿ ಸುದೀರ್ಘ ಕಾಲದ ಬಳಿಕ ತಂಡಕ್ಕೆ ಮರಳಿರುವ ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿರುವುದನ್ನು ಸಾರಿದ್ದಾರೆ. ಪಾಕಿಸ್ತಾನ್ ಬೌಲರ್‌ಗಳನ್ನು ಭರ್ಜರಿಯಾಗಿ ಬೆಂಡೆತ್ತಿರುವ ಕೆಎಲ್ ರಾಹುಲ್ ಅದ್ಭುತ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ಶತಕದ ಜೊತೆಯಾಟವನ್ನು ನೀಡಿ ಇನ್ನಿಂಗ್ಸ್ ಮುಂದುವರಿಸಿದ್ದಾರೆ.
ಗಾಯದಿಂದಾಗಿ ತಂಡದಿಮದ ಹೊರಬಿದ್ದಿದ್ದ ಕೆಎಲ್ ರಾಹುಲ್ ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದರು. ಆದರೆ ಮತ್ತೆ ಗಾಯದ ಕಾರಣದಿಂದಾಗಿ ಏಷ್ಯಾಕಪ್ ಟೂರ್ನಿಯ ಮೊದಲ ಎರಡು ಲೀಗ್ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ನಂತರ ಸೂಪರ್ 4 ಹಂತದಲ್ಲಿಯೂ ಕೆಎಲ್ ರಾಹುಲ್‌ಗೆ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಳ್ಳುವುದು ಸುಲಭ ಸವಾಲಾಗಿರಲಿಲ್ಲ.
ಐದನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿದ್ದ ಕಾರಣ ಆ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಆಡುವುದು ಕಷ್ಟ ಎನ್ನುವುದು ಸ್ಪಷ್ಟವಾಗಿತ್ತು. ಹೀಗಾಗಿ ರಾಹುಲ್‌ಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ದೊರೆಯುವುದಿಲ್ಲವೇ ಎನ್ನುವ ಪ್ರಶ್ನೆಗಳು ಕೂಡ ಉದ್ಭವವಾಗಿತ್ತು. ಆದರೆ ಶ್ರೇಯಸ್ ಐಯ್ಯರ್‌ಗೆ ನೋವು ಕಾಣಿಸಿಕೊಂಡಿರುವ ಕಾರಣ ಅವರ ಸ್ಥಾನದಲ್ಲಿ ರಾಹುಲ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.