ಬೂಮ್ರಾ ಮಾತ್ರ ಅಲ್ಲ.. ಪದೇ ಪದೇ ಪಾಕ್‌ಗೆ ದು:ಸ್ವಪ್ನವಾಗಿ ಕಾಡುವ ಭಾರತೀಯ ಬೌಲರ್ ಈತನೇ!!
ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಅಮೋಘ ಯಶಸ್ಸು ಸಾಧಿಸಿದೆ. ಅಗ್ರ ಕ್ರಮಾಂಕದ ಆಟಗಾರರ ಅದ್ಭುತ ಪ್ರದರ್ಶನದಿಂದಾಗಿ ಪಾಕಿಸ್ತಾನ ದೊಡ್ಡ ಮೊತ್ತದತ್ತ ಹೆಜ್ಜೆ ಹಾಕುತ್ತಿದ್ದರೂ ಅದಕ್ಕೆ ಕಡಿವಾಣ ಹಾಕುವಲ್ಲಿ ಭಾರತ ಯಶಸ್ವಿಯಾಗಿದೆ. ಮಧ್ಯಮ ಓವರ್‌ಗಳಲ್ಲಿ ಟೀಮ್ ಇಂಡಿಯಾದ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಪಾಕಿಸ್ತಾನ ತಂಡವನ್ನು ಕೇವಲ 191 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.
ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಈ ಪಂದ್ಯದಲ್ಲಿ ಅದ್ಭುತವಾದ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಇಂದು ಬೌಲಿಂಗ್ ನಡೆಸಿದ ಆರು ಬೌಲರ್‌ಗಳ ಪೈಕಿ ಐವರು ಬೌಲರ್‌ಗಳು ತಲಾ ಎರಡು ವಿಕೆಟ್ ಪಡೆಯುವ ಮೂಲಕ ಪಾಕ್ ಪಡೆಯನ್ನು ಧ್ವಂಸ ಮಾಡಿದ್ದಾರೆ. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲ್‌ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದುಕೊಂಡದ್ದು ಪಾಕ್ ಆಟಕ್ಕೆ ಅಂತ್ಯ ಹಾಡಿದ್ದಾರೆ.

ಭಾರತದ ಟ್ರಂಪ್ ಕಾರ್ಡ್ ಬೌಲರ್ ಜಸ್ಪ್ರೀತ್ ಬೂಮ್ರಾ 7 ಓವರ್‌ಗಳಲ್ಲಿ ಕೇವಲ 19 ರನ್‌ಗಳನ್ನು ನೀಡಿದ್ದು ಅಪಾಯಕಾರಿ ಮೊಹಮ್ಮದ್ ರಿಜ್ವಾನ್ ಮತ್ತು ಆಲ್‌ರೌಂಡರ್ ಶದಬ್ ಖಾನ್ ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ ಆರಂಭದಲ್ಲಿ ಸಾಕಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದರೂ ಭಾರತ ತಂಡಕ್ಕೆ ಮೊದಲ ವಿಕೆಟ್ ಕಬಳಿಸಿ ಬ್ರೇಕ್ ಕೊಡುವಲ್ಲಿ ಯಶಸ್ವಿಯಾದರು. ಅಲ್ಲದೆ ಪಾಕ್ ನಾಯಕ ಬಾಬರ್ ಅಜಂ ಕೂಡ ಸಿರಾಜ್‌ಗೆ ಬಲಿಯಾದರು.
ಪಾಕ್‌ಗೆ ಮತ್ತೆ ಕಾಡಿದ ಕುಲ್‌ದೀಪ್ ಎಂಬ ದುಃಸ್ವಪ್ನ!
ಹೌದು.. ಪಾಕಿಸ್ತಾನ ತಂಡ ಭಾರತದ ವಿರುದ್ಧ ಪ್ರತಿ ಭಾರಿ ಕಣಕ್ಕಿಳಿದಾಗಲೂ ಆಘಾತ ನೀಡುವ ಬೌಲರ್ ಎಂದರೆ ಅದು ಕುಲ್‌ದೀಪ್ ಯಾದವ್. ಇತ್ತೀಚೆಗಷ್ಟೇ ಏಷ್ಯಾಕಪ್ ಟೂರ್ನಿಯಲ್ಲಿ ಕುಲ್‌ದೀಪ್ ಪಾಕಿಸ್ತಾನ ತಂಡಕ್ಕೆ ಐದು ವಿಕೆಟ್‌ಗಳ ಗೊಂಚಲು ಪಡೆದು ಆಘಾತ ನೀಡಿದ್ದರು. ಈ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಎರಡು ಪ್ರಮುಖ ವಿಕೆಟ್ ಪಡೆಯುವ ಮೂಲಕ ಕುಲ್‌ದೀಪ್ ಯಾದವ್ ಪಾಕ್ ಕುಸಿತಕ್ಕೆ ಕಾರಣವಾದರು. ಇದರಿಂದ ಚೇತರಿಸಿಕೊಳ್ಳಲು ಭಾರತದ ಉಳಿದ ಬೌಲರ್‌ಗಳು ಅವಕಾಶವನ್ನೇ ನೀಡಲಿಲ್ಲ.
155-2ರಿಂದ 191ಕ್ಕೆ ಆಲೌಟ್
ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಒಂದು ಹಂತದಲ್ಲಿ 155 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಅತ್ಯಂತ ಸುಸ್ಥಿತಿಯಲ್ಲಿತ್ತು. ಪಾಕ್‌ನ ಆಧಾರ ಸ್ಥಂಭ ಎನಿಸಿಕೊಳ್ಳುವ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ 82 ರನ್‌ಗಳ ಜೊತೆಯಾಟ ನೀಡಿದ್ದಾಗ ಬೃಹತ್ ಮೊತ್ತದತ್ತ ಹೆಜ್ಜೆಯಿಟ್ಟಿರುವುದು ಸ್ಪಷ್ಟವಾಗಿತ್ತು. ಆದರೆ ಈ ಜೋಡಿಯನ್ನು ಸಿರಾಜ್ ಬೇರ್ಪಡಿಸುತ್ತಿದ್ದಂತೆಯೇ ಭಾರತ ತನ್ನ ಹಿಡಿತವನ್ನು ಪಂದ್ಯದ ಮೇಲೆ ಸಾಧಿಸುವಲ್ಲಿ ಯಶಸ್ವಿಯಾಯಿತು.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್
ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶದಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್
ಬೆಂಚ್: ಆಘಾ ಸಲ್ಮಾನ್, ಫಖರ್ ಜಮಾನ್, ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications