155-2ರಿಂದ 191ಕ್ಕೆ ಆಲೌಟ್: ಪಾಕ್ ಕುಸಿತವನ್ನು ನೆಟ್ಟಿಗರು ಸಂಭ್ರಮಿಸಿದ್ದು ಹೀಗೆ!!
ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿದೆ. ಮೊದಲಿಗೆ ಪಾಕಿಸ್ತಾನ ಬ್ಯಾಟರ್‌ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿದ್ದರು. ಆದರೆ ಪಾಕಿಸ್ತಾನದ ಮಧ್ಯಮ ಕ್ರಮಾಂಕವನ್ನು ಅತ್ಯಂತ ದುರ್ಬಲವಾಗಿಒ ಕಾಣುವಂತೆ ಮಾಡಿದ್ದು ಭಾರತದ ಬೌಲಿಂಗ್ ವಿಭಾಗ. ಟೀಮ್ ಇಂಡಿಯಾದ ಸಂಘಟಿತ ಪ್ರದರ್ಶನಕ್ಕೆ ಪಾಕ್ ಸಂಪೂರ್ಣವಾಗಿ ಶರಣಾಯಿತು.
ಒಂದು ಹಂತದಲ್ಲಿ ಪಾಕಿಸ್ತಾನ 155 ರನ್‌ಗಳಿಗೆ ಕೇವಲ ಎರಡು ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಪಾಕ್‌ನ ಸ್ಟಾರ್ ಜೋಡಿಯಾದ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ 82 ರನ್‌ಗಳ ಜೊತೆಯಾಟ ನೀಡುವ ಮೂಲಕ ಬೃಹತ್ ಮೊತ್ತದತ್ತ ಹೆಜ್ಜೆಯಿಟ್ಟಿದ್ದರು. ಆದರೆ ಈ ಜೋಡಿಯನ್ನು ಬೇರ್ಪಡಿಸುವ ಮೂಲಕ ಪಾಕ್ ಪಡೆಯ ಕುಸಿತಕ್ಕೆ ವೇದಿಕೆ ಸೃಷ್ಟಿ ಮಾಡಿದ್ದು ಮೊಹಮ್ಮದ್ ಸಿರಾಜ್. ಇನ್ನಿಂಗ್ಸ್‌ನ ಆರಂಭಿಕ ವಿಕೆಟ್ ಪಡೆದ ಮೊದಲ ಯಶಸ್ಸು ತಂದುಕೊಟ್ಟಿದ್ದ ಸಿರಾಜ್ ಬಾಬರ್ ಅಜಂ ಅವರನ್ನು ಔಟ್ ಮಾಡುವ ಮೂಲಕ ಮತ್ತೊಮ್ಮೆ ಬ್ರೇಕ್ ನೀಡಿದರು.

ಆದರೆ ಈ ಜೋಡಿಯನ್ನು ಬೇರ್ಪಡುತ್ತಿದ್ದಂತೆಯೇ ಭಾರತ ತನ್ನ ಹಿಡಿತವನ್ನು ಪಂದ್ಯದ ಮೇಲೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಮಧ್ಯಮ ಕ್ರಮಾಂಕದ ಯಾವುದೇ ಆಟಗಾರ ಕೂಡ ಈ ಪಂದ್ಯದಲ್ಲಿ ಭಾರತದ ದಾಳಿಯನ್ನು ಎದುರಿಸಲು ಸಾಧ್ಯವಾಗಲೇ ಇಲ್ಲ. ಹೀಗಾಗಿ 155 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ತಂಡ 191 ರನ್‌ಗಳಾಗುವಷ್ಟರಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. 42.5 ಓವರ್‌ನಲ್ಲಿಯೇ ಆಲವಟ್ ಆಗಿದೆ ಪಾಕಿಸ್ತಾನ.
ಇನ್ನು ಈ ಪಂದ್ಯದಲ್ಲಿ ಭಾರತದ ಈ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಅಭಿಮಾನಿಗಳು ಮನದುಂಬಿ ಆನಂದಿಸಿದ್ದಾರೆ. ಈ ವಿಶ್ವಕಪ್ ಕ್ರೀಡಾಕೂಟದ ಬಹು ನಿರೀಕ್ಷಿತ ಪಂದ್ಯ ಎನಿಸಿಕೊಂಡಿದ್ದ ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗ ಸಾಧಿಸಿದ ಈ ಯಶಸ್ಸಿಗೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇನ್ನು ನೆಟ್ಟಿಗರು ಇದನ್ನು ತಮ್ಮದೇ ರೀತಿಯಲ್ಲಿಒ ಮೀಮ್ಸ್‌ಗಳ ಮೂಲಕ ಆನಂದಿಸಿದ್ದಾರೆ. ಅಂಥಾ ಕೆಲ ವಿಶಿಷ್ಟ ಪ್ರತಿಕ್ರಿಯೆಗಳು ಇಲ್ಲಿದೆ. ಮುಂದೆ ಓದಿ..
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್
ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶದಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್
ಬೆಂಚ್: ಆಘಾ ಸಲ್ಮಾನ್, ಫಖರ್ ಜಮಾನ್, ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications