ವಿರಾಟ್ ಕೊಹ್ಲಿ ಬ್ಯಾಟ್‌ನಿಂದಲೇ ಎಲ್ಲರ ಬಾಯ್ಮಿಚ್ಚಿಸಿದ್ದಾರೆ ಎಂದ ಮಾಜಿ ಕೋಚ್ ರವಿ ಶಾಸ್ತ್ರಿ

ಮೆಲ್ಬರ್ನ್‌ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಸ್ಮರಣಿಯ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿಯ ಅಮೋಘ ಹೋರಾಟದ ಕಾರಣದಿಂದಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಈ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದು ಕೊಹ್ಲಿ ಟೀಕಾಕಾರರಿಗೂ ಉತ್ತರ ನೀಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಆಡಿದ ಅಮೀಘ ಪ್ರದರ್ಶನದೊಂದಿಗೆ ವಿರಾಟ್ ಕೊಹ್ಲಿ ಟೀಕಾಕಾರರಿಗೆ ಬ್ಯಾಟ್‌ನಿಂದಲೇ ತಕ್ಕ ಉತ್ತರವನ್ನು ನೀಡಿದ್ದಾರೆ ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ವಿರಾಟ್ ಕೊಹ್ಲಿ ತಮ್ಮ ಕಠಿಣ ಸಮಯದಲ್ಲಿದ್ದಾಗ ತಾನು ಅವರನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ ಎಂದಿದ್ದಾರೆ ರವಿ ಶಾಸ್ತ್ರಿ.
45 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ಸೇರಿಕೊಂಡು ಅದ್ಭುತ ಪ್ರದರ್ಶನ ನೀಡಿ ಅಸಾಧ್ಯ ಗೆಲುವು ಸಾಧ್ಯವಾಗಿಸಿದ್ದಾರೆ. ಪಾಕಿಸ್ತಾನದ ಬಲಾಢ್ಯ ಬೌಲಿಂಗ್ ವಿಭಾಗದ ವಿರುದ್ಧ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ನಾಲ್ಕು ಸಿಕ್ಸರ್ ಹಾಗೂ 6 ಬೌಂಡರಿ ಸಿಡಿಸಿ ಭಾರತದ ಗೆಲುವಿಗೆ ಕಾರಣವಾದರು.
ಈ ಭರ್ಜರಿ ಪ್ರದರ್ಶನದ ಬಗ್ಗೆ ರವಿ ಶಾಸ್ತ್ರಿ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ್ದಾರೆ. "ಈ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕಷ್ಟು ಮಹತ್ವವಿದೆ. ಅಂತಿಮ ಹಂತದಲ್ಲಿ ಅಷ್ಟೊಂದು ತಾಳ್ಮೆಯಿಂದ ಇರುವುದು ಸುಲಭವಲ್ಲ. ವಿರಾಟ್ ಕೊಹ್ಲಿ ವಿಚಾರವಾಗಿ ನಾನು ಕಳೆದ ಮೂರು ವರ್ಷಗಳಿಂದ ಆತನ ಕಠಿಣ ಸಂದರ್ಭವನ್ನು ಹತ್ತಿರದಿಂದ ಗಮನಿಸಿಕೊಂಡು ಬಂದಿದ್ದೇನೆ. ತಮ್ಮ ಟೀಕಾಕಾರರಿಗೆ ಉತ್ತರಿಸಲು ಆತನಿಗೆ ಉತ್ತಮವಾದ ವೇದಿಕೆ ಬೇಕಾಗಿದ್ದರೆ ಇದು ಅದ್ಭುತವಾದ ವೇದಿಕೆಯಾಗಿದೆ. ಈ ನಿಜವಾದ ಗುಣಮಟ್ಟದ ಆಟದ ಮೂಲಕ ಕೊಹ್ಲಿ ಎಲ್ಲರ ಬಾಯ್ಮುಚ್ಚಿಸಿದ್ದಾರೆ" ಎಂದಿದ್ದಾರೆ ರವಿ ಶಾಸ್ತ್ರಿ.
ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿದ ಬಳಿಕ ರೋಹಿತ್ ಶರ್ಮಾ ಮಾತನಾಡಿದ್ದು ಈ ಗೆಲುವನ್ನು ವರ್ಣಿಸಲು ನನ್ನಲ್ಲಿ ಯಾವುದೇ ಪದಗಳಿಲ್ಲ ಎಂದಿದ್ದಾರೆ. "ಈ ಗೆಲುವನ್ನು ಬಣ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ. ಇಂಥಾ ಪಂದ್ಯಗಳಲ್ಲಿ ಇಂಥಾ ವಿಶೇಷವಾದದನ್ನು ನಿರೀಕ್ಷಿಸಬೇಕಾಗುತ್ತದೆ. ಸಾಧ್ಯವಾದಷ್ಟು ಪಂದ್ಯವನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ನಾವು ಬಯಸಿದ್ದೆವು. ಆ ನಿರ್ಣಾಯಕ ಜೊತೆಯಾಟವೇ ನಮಗೆ ಗೆಲುವಿಗೆ ನಿರ್ಣಾಯಕವಾದ ಕ್ಷಣವಾಗಿತ್ತು" ಎಂದು ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಏಷ್ಯಾ ಕಪ್ ವರೆಗೂ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗಿದ್ದವು. ವಿರಾಟ್ ಕೊಹ್ಲಿ ಭಾರತೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಅರ್ಹನಲ್ಲ ಎಂಬಂಥಾ ಕಟು ಟೀಕೆಗಳು ಕೂಡ ವ್ಯಕ್ತವಾಗಿದ್ದವು. ಈ ಎಲ್ಲದಕ್ಕೂ ಈಗ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‌ನಿಂದಲೇ ಉತ್ತರವನ್ನು ನೀಡುತ್ತಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತೆ ತಮ್ಮ ಅತ್ಯುತ್ತಮ ಫಾರ್ಮ್ ಕಂಡುಕೊಂಡಿದ್ದು ಭಾರತದ ಗೆಲುವಿಗೆ ಮತ್ತೆ ಕಾರಣವಾಗುತ್ತಿದ್ದಾರೆ. ಅದರಲ್ಲೂ ಮೆಲ್ಬರ್ನ್‌ನಲ್ಲಿ ಭಾರತ ಸಾಧಿಸಿದ ಗೆಲುವು ಅದೆಷ್ಟು ವಿಶೇಷವಾಗಿತ್ತು ಎಂಬುದಕ್ಕೆ ವಿರಾಟ್ ಕೊಹ್ಲಿ ಹಾಗೂ ಭಾರತ ತಂಡ ಸಂಭ್ರಮಿಸಿದ ರೀತಿಯೇ ಸಾಕ್ಷಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications