IND vs SA: 8ನೇ ಟೆಸ್ಟ್ ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಕೆಎಲ್ ರಾಹುಲ್; ಗುರುವಿನ ಹಾದಿಯಲ್ಲಿ ಶಿಷ್ಯನ ನಡೆ
ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 2ನೇ ದಿನದಂದು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್-ವಿಕೆಟ್‌ಕೀಪರ್ ಕೆಎಲ್ ರಾಹುಲ್ ಅಮೋಘ ಶತಕ ಬಾರಿಸುವ ಮೂಲಕ ಭಾರತಕ್ಕೆ ನೆರವಾದರು.
ಬುಧವಾರದಂದು ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 67.4 ಓವರ್‌ಗಳಲ್ಲಿ 245 ರನ್‌ಗಳಿಗೆ ಸರ್ವಪತನ ಕಂಡಿತು. ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್‌ನಲ್ಲಿನ ಈ ಶತಕದೊಂದಿಗೆ ಕೆಎಲ್ ರಾಹುಲ್ ತನ್ನ ವಿಶೇಷ ಸಂಬಂಧವನ್ನು ಮುಂದುವರೆಸಿದರು.

ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 8ನೇ ಶತಕವನ್ನು ಗಳಿಸಿದರು. ಒತ್ತಡದ ಸಂದರ್ಭದಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ 14 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಮೇತ 101 ರನ್ ಗಳಿಸಿದರು.
ಏಷ್ಯಾದ ಹೊರಗೆ ಭಾರತೀಯ ವಿಕೆಟ್ ಕೀಪರ್‌ಗಳಿಂದ ಶತಕ
ರಿಷಭ್ ಪಂತ್ - 4
ವಿ ಮಂಜ್ರೇಕರ್, ಎ ರಾತ್ರಾ, ವೃದ್ಧಿಮಾನ್ ಸಹಾ, ಕೆಎಲ್ ರಾಹುಲ್ - ತಲಾ 1 ಶತಕ
ಸೆಂಚುರಿಯನ್‌ನಲ್ಲಿ ಎರಡು ಶತಕಗಳನ್ನು ಗಳಿಸಿದ ಮೊದಲ ಪ್ರವಾಸಿ ಬ್ಯಾಟರ್ ಕೆಎಲ್ ರಾಹುಲ್
2021/22ರಲ್ಲಿ 123 (260)
2023/24ರಲ್ಲಿ 101 (133)
ದಕ್ಷಿಣ ಆಫ್ರಿಕಾದಲ್ಲಿ ಬಹು ಶತಕ ಗಳಿಸಿದ ಏಷ್ಯನ್ ಬ್ಯಾಟ್ಸ್‌ಮನ್‌ಗಳು
5- ಸಚಿನ್ ತೆಂಡೂಲ್ಕರ್
2 - ಅಜರ್ ಮಹಮೂದ್, ಟಿ ಸಮರವೀರ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್
ವೇಗದ ಬೌಲರ್‌ಗಳಿಗೆ ಹೆಚ್ಚು ಅನುಕೂಲಕರವಾದ ಪಿಚ್‌ನಲ್ಲಿ ಕೆಎಲ್ ರಾಹುಲ್ ತನ್ನ ಶತಕ ಪೂರೈಸುತ್ತಿದ್ದಂತೆ, ಇಡೀ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡದ ಆರಂಭಿಕರಾದ ಯಶಸ್ವಿ ಜೈಸ್ವಾಲ್ 17 ರನ್, ನಾಯಕ ರೋಹಿತ್ ಶರ್ಮಾ 5 ರನ್, ಶುಭ್ಮನ್ ಗಿಲ್ 2 ರನ್, ವಿರಾಟ್ ಕೊಹ್ಲಿ 38 ರನ್, ಶ್ರೇಯಸ್ ಅಯ್ಯರ್ 31 ರನ್ ಗಳಿಸಿ ಔಟಾಗಿದ್ದರು.
ರವಿಚಂದ್ರನ್ ಅಶ್ವಿನ್ 8 ರನ್, ಶಾರ್ದೂಲ್ ಠಾಕೂರ್ 24 ರನ್, ಜಸ್ಪ್ರೀತ್ ಬುಮ್ರಾ 1 ರನ್, ಮೊಹಮ್ಮದ್ ಸಿರಾಜ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಕಗಿಸೊ ರಬಾಡ 20 ಓವರ್‌ಗಳಲ್ಲಿ 59 ರನ್ ನೀಡಿ 5 ವಿಕೆಟ್ ಕಬಳಿಸಿದ್ದರೆ, ನಾಂದ್ರೆ ಬರ್ಗರ್ 15.4 ಓವರ್‌ಗಳಲ್ಲಿ 50 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಮಾರ್ಕೊ ಜಾನ್ಸನ್ ಮತ್ತು ಗೆರಾಲ್ಡ್ ಕೋಯಟ್ಜಿ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications