For Quick Alerts
ALLOW NOTIFICATIONS  
For Daily Alerts
 

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಮಂಗಳವಾರ, ಡಿಸೆಂಬರ್ 28ರಿಂದ ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಆರಂಭವಾಗಿದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಪ್ರವಾಸಿ ಭಾರತ ತಂಡ ಇನ್ನಿಂಗ್ಸ್ ಹಾಗೂ 32 ರನ್‌ಗಳಿಂದ ಸೋಲು ಕಂಡಿತು.

ಮೂರನೇ ದಿನದಾಟದಲ್ಲೇ ಮುಗಿದ ಪಂದ್ಯದಲ್ಲಿ ಮತ್ತೊಮ್ಮೆ ಭಾರತೀಯ ಬ್ಯಾಟಿಂಗ್ ಲೈನ್‌ಅಪ್ ಕೈಕೊಟ್ಟಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಶತಕ ಸಿಡಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು.

IND vs SA 1st Test: Virat Kohli Breaks Sachin Tendulkars Record Against South Africa

ಇದೇ ವೇಳೆ ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ತಮ್ಮ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ಅಪರೂಪದ ದಾಖಲೆಯನ್ನು ಮುರಿದರು.

ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ 3ನೇ ದಿನದಂದು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕುವ ಮೂಲಕ ವಿರಾಟ್ ಕೊಹ್ಲಿ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದರು.

IND vs SA 1st Test: Virat Kohli Breaks Sachin Tendulkars Record Against South Africa

ದಕ್ಷಿಣ ಆಫ್ರಿಕಾದಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದವರು (ಎಲ್ಲಾ ಸ್ವರೂಪಗಳು)

ವಿರಾಟ್ ಕೊಹ್ಲಿ - 29 ಪಂದ್ಯಗಳಲ್ಲಿ 1750 ರನ್ - 5 ಶತಕ
ಸಚಿನ್ ತೆಂಡೂಲ್ಕರ್ - 38 ಪಂದ್ಯಗಳಲ್ಲಿ 1724 ರನ್ - 6 ಶತಕ
ರಾಹುಲ್ ದ್ರಾವಿಡ್ - 22 ಪಂದ್ಯಗಳಲ್ಲಿ 1136 ರನ್ - 1 ಶತಕ
ಸೌರವ್ ಗಂಗೂಲಿ - 17 ಪಂದ್ಯಗಳಲ್ಲಿ 897 ರನ್ - 1 ಶತಕ
ಎಂಎಸ್ ಧೋನಿ - 32 ಪಂದ್ಯಗಳಲ್ಲಿ 872 ರನ್ -

ಮೊದಲ ಇನಿಂಗ್ಸ್‌ನಲ್ಲಿ 38 ರನ್‌ಗಳಿಗೆ ಔಟಾಗಿದ್ದ ವಿರಾಟ್ ಕೊಹ್ಲಿ, ಎರಡನೇ ಇನ್ನಿಂಗ್ಸ್‌ನಲ್ಲಿ 76 ರನ್ ಗಳಿಸಿ ಭಾರತದ ಪರ ಏಕೈಕ ಗರಿಷ್ಠ ಸ್ಕೋರರ್ ಆದರು. ಮೊದಲ ಇನ್ನಿಂಗ್ಸ್‌ನಲ್ಲಿ 157 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ, ಒಂದು ವಿಕೆಟ್‌ ಕಳೆಕೊಳ್ಳುತ್ತಿದ್ದರೂ, ಕೊಹ್ಲಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದು ಕಂಡುಬಂದಿತು.

ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರು ಆರಂಭದಲ್ಲಿಯೇ ವಿಕೆಟ್ ನೀಡಿದರೂ, ವಿರಾಟ್ ಕೊಹ್ಲಿ ತಮ್ಮ ಎಲ್ಲಾ ಅನುಭವವನ್ನು ಧಾರೆ ಎರೆದರು.

ಶ್ರೇಯಸ್ ಅಯ್ಯರ್ ಕೂಡ ಸ್ಕೋರರ್‌ಗಳಿಗೆ ಹೆಚ್ಚು ತೊಂದರೆ ನೀಡಲಿಲ್ಲ ಮತ್ತು ಭಾರತವು 4 ವಿಕೆಟ್‌ಗೆ 72 ರನ್‌ಗಳಿಗೆ ಕುಸಿದಾಗ ಅನುಭವಿ ವಿರಾಟ್ ಕೊಹ್ಲಿ ಮೇಲೆ ಒತ್ತಡವಿತ್ತು. ಆದರೆ ಅವರಿಗೆ ಭಾರತದ ಯಾವೊಬ್ಬ ಬ್ಯಾಟರ್‌ಗಳು ಸಾಥ್ ನೀಡಲಿಲ್ಲ.

ಇನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1-0 ಅಂತರದ ಮುನ್ನಡೆ ಸಾಧಿಸಿದ್ದು, ಎರಡನೇ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವುದು ಭಾರತ ತಂಡದ ಮುಂದಿರುವ ಸವಾಲಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅವರ ಅಮೋಘ ಶತಕದ ಸಹಾಯದಿಂದ 67.4 ಓವರ್‌ಗಳಲ್ಲಿ 245 ರನ್‌ ಗಳಿಸಿ ಆಲೌಟ್ ಆಯಿತು.

ನಂತರ, ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಡೀನ್ ಎಲ್ಗರ್ ಅವರ 185 ರನ್‌ಗಳ ಭರ್ಜರಿ ಶತಕದ ನೆರವಿನಿಂದ 108.4 ಓವರ್‌ಗಳಲ್ಲಿ 408 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು 157 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿತು.

ಬಳಿಕ, ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ವಿರಾಟ್ ಕೊಹ್ಲಿಯ ಏಕೈಕ ಅರ್ಧಶತಕದ ಸಹಾಯದಿಂದ 34.1 ಓವರ್‌ಗಳಲ್ಲಿ 131 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಾಗೂ 32 ರನ್‌ಗಳ ಸೋಲು ಅನುಭವಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಭಾರತ ಪರ ಎಲ್ಲಾ ಸ್ವರೂಪಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ 1724 ರನ್‌ಗಳ ಮೊತ್ತವನ್ನು ಹಿಂದಿಕ್ಕಿದರು.

ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ 50ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಭಾರತದ ಮಾಜಿ ನಾಯಕ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಪಂದ್ಯಗಳಲ್ಲಿ 74.83ರ ಸರಾಸರಿಯಲ್ಲಿ 898 ರನ್‌ಗಳೊಂದಿಗೆ ಭಾರತೀಯ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಭಾರತ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟಗಾರನಾಗಿದ್ದರು. ಏಕೆಂದರೆ ಅವರು ತ್ವರಿತ ಕ್ರಮದಲ್ಲಿ ಜೊತೆಗಾರರ ವಿಕೆಟ್ ಕಳೆದುಕೊಳ್ಳುತ್ತಿದ್ದರು. ವಿರಾಟ್ ಕೊಹ್ಲಿ ತಮ್ಮ 30ನೇ ಟೆಸ್ಟ್ ಅರ್ಧಶತಕ ಬಾರಿಸಿದರು.

Story first published: Thursday, December 28, 2023, 22:25 [IST]
Other articles published on Dec 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+