For Quick Alerts
ALLOW NOTIFICATIONS  
For Daily Alerts
 

IND vs SA: ಟಿ20ಯ ಈ ಅಂಕಿ-ಅಂಶದಲ್ಲಿ ವೀರೇಂದ್ರ ಸೆಹ್ವಾಗ್‌ರನ್ನು ಹಿಂದಿಕ್ಕಿದ ಇಶಾನ್ ಕಿಶನ್

IND vs SA 2nd T20: Ishan Kishan Surpasses Virender Sehwag in T20 Runs

ಕೋವಿಡ್ ನಿರ್ಬಂಧ ಸಡಿಲಿಕೆ ಬಳಿಕ ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ತಂಡವು ಟೀಮ್ ಇಂಡಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ಆತಿಥೇಯ ಭಾರತ ತಂಡಕ್ಕೆ ಸೋಲುಣಿಸಿ ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನು ಸಾಧಿಸಿದೆ.

ಇತ್ತಂಡಗಳ ನಡುವೆ ಜೂನ್ 9ರಂದು ನಡೆದ ಪ್ರಥಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ್ದ 212 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಜಯ ಸಾಧಿಸಿತ್ತು ಹಾಗೂ ಕಟಕ್ ನಗರದ ಬಾರಾಬತಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ (ಜೂನ್ 12) ನಡೆದ ದ್ವಿತೀಯ ಟಿ20 ಪಂದ್ಯದಲ್ಲಿಯೂ ಕೂಡ ಟೀಮ್ ಇಂಡಿಯಾ ನೀಡಿದ್ದ 149 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸತತ 2 ಗೆಲುವು ಸಾಧಿಸಿದೆ. ಸರಣಿಯನ್ನು ಕೈವಶಮಾಡಿಕೊಳ್ಳಲು ಇನ್ನೊಂದು ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದೆ.

2 ಪಂದ್ಯಗಳಲ್ಲಿ ಮುಂಬೈನ ಆಟಗಾರ 110 ರನ್ ಗಳಿಸಿದ್ದಾರೆ

2 ಪಂದ್ಯಗಳಲ್ಲಿ ಮುಂಬೈನ ಆಟಗಾರ 110 ರನ್ ಗಳಿಸಿದ್ದಾರೆ

ಇನ್ನು ಸೋಲಿನ ನಡುವೆಯೂ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಗ್ರ ಫಾರ್ಮ್‌ನಲ್ಲಿದ್ದಾರೆ. ಐದು ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಮುಂಬೈನ ಆಟಗಾರ 110 ರನ್ ಗಳಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 48 ಎಸೆತಗಳಲ್ಲಿ 76 ರನ್ ಗಳಿಸುವ ಮೂಲಕ ಭಾರತಕ್ಕೆ 211 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಲು ನೆರವಾದರು. ನಂತರ ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ 21 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 34 ರನ್‌ಗಳೊಂದಿಗೆ ಭಾರತಕ್ಕೆ ಉತ್ತಮ ಆರಂಭ ನೀಡುವಲ್ಲಿ ಸಹಾಯ ಮಾಡಿದರು.

ವೀರೇಂದ್ರ ಸೆಹ್ವಾಗ್‌ರನ್ನು ಹಿಂದಿಕ್ಕಿದ ಇಶಾನ್ ಕಿಶನ್

ವೀರೇಂದ್ರ ಸೆಹ್ವಾಗ್‌ರನ್ನು ಹಿಂದಿಕ್ಕಿದ ಇಶಾನ್ ಕಿಶನ್

ನಿನ್ನೆ (ಜೂನ್ 12) ಕಟಕ್‌ನಲ್ಲಿ ನಡೆದ ಟಿ20 ಪಂದ್ಯದ ವೇಳೆ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರ ಅಂತಾರಾಷ್ಟ್ರೀಯ ರನ್‌ಗಳ ಸಂಖ್ಯೆಯನ್ನು ಇಶಾನ್ ಕಿಶನ್ ಹಿಂದಿಕ್ಕಿದರು.

2006 ಮತ್ತು 2012ರ ನಡುವೆ 19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಾನ್ನಾಡಿರುವ ಭಾರತದ ಮಾಜಿ ಆರಂಭಿಕ ಆಟಗಾರ ಸೆಹ್ವಾಗ್, 145.38 ಸ್ಟ್ರೈಕ್ ರೇಟ್ ಮತ್ತು 21.88ರ ಸರಾಸರಿಯಲ್ಲಿ 394 ರನ್ ಗಳಿಸಿದ್ದರು. ಬಲಗೈ ಬ್ಯಾಟ್ಸ್‌ಮನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವೃತ್ತಿಜೀವನದಲ್ಲಿ ಒಂದು ಅರ್ಧಶತಕ ಬಾರಿಸಿದ್ದಾರೆ.

12 ಪಂದ್ಯಗಳಲ್ಲಿ 399 ರನ್ ಗಳಿಸಿದ್ದಾರೆ

12 ಪಂದ್ಯಗಳಲ್ಲಿ 399 ರನ್ ಗಳಿಸಿದ್ದಾರೆ

ಮತ್ತೊಂದೆಡೆ, ಒಂದು ವರ್ಷದ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೇವಲ 12 ಪಂದ್ಯಗಳನ್ನು ಆಡಿದ್ದಾರೆ ಮತ್ತು ಟಿ20 ಪಂದ್ಯಗಳಲ್ಲಿ 399 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ ಈವರೆಗೆ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಇಶಾನ್ ಕಿಶನ್ ಸಾಮಾನ್ಯವಾಗಿ ಭಾರತದ ಬ್ಯಾಟಿಂಗ್ ಅನ್ನು ಅತ್ಯಂತ ಕಡಿಮೆ ಸ್ವರೂಪದ ಆಟದ ರೂಪದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ. ಅವರ ಸ್ಟ್ರೈಕ್ ರೇಟ್ 129.96 ಮತ್ತು ಸರಾಸರಿ 36.27 ಆಗಿದೆ.

ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಅಗ್ರ ಐವರು
ರೋಹಿತ್ ಶರ್ಮಾ - 3313

ವಿರಾಟ್ ಕೊಹ್ಲಿ - 3296

ಕೆಎಲ್ ರಾಹುಲ್ - 1831

ಶಿಖರ್ ಧವನ್ - 1759

ಎಂಎಸ್ ಧೋನಿ - 1617

IND vs RSA ಮುಂದಿನ ಪಂದ್ಯದಲ್ಲಿ ಇರಲೇಬೇಕಂತೆ | Oneindia Kannada
ಕೊನೆಯ ಟಿ20 ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ

ಕೊನೆಯ ಟಿ20 ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತ ತನ್ನ ಎರಡೂ ಆರಂಭಿಕ ಪಂದ್ಯಗಳನ್ನು ಕಳೆದುಕೊಂಡಿದೆ. ದೆಹಲಿಯಲ್ಲಿ ಮೊದಲ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಸೋತಿದ್ದರೆ, ಕಟಕ್‌ನಲ್ಲಿ ಎರಡನೇ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್‌ಗಳಿಂದ ಸೋತಿದೆ. ಸರಣಿಯ ಮೂರನೇ ಪಂದ್ಯವನ್ನು ಮಂಗಳವಾರದಂದು ವಿಶಾಖಪಟ್ಟಣದ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಲ್ಕನೇ ಪಂದ್ಯ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿದ್ದರೆ, ಕೊನೆಯ ಟಿ20 ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

Story first published: Monday, June 13, 2022, 17:20 [IST]
Other articles published on Jun 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+