IND vs SA 2ನೇ ಟಿ20: ಈ ಮೈಲಿಗಲ್ಲುಗಳ ಮೇಲೆ ಇಶಾನ್ ಕಿಶನ್, ಡಿಕಾಕ್ ಮತ್ತು ಹಾರ್ದಿಕ್ ಪಾಂಡ್ಯ ಕಣ್ಣು

ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದ್ದು, ಕಳೆದ ಗುರುವಾರ ( ಜೂನ್ 9 ) ದೆಹಲಿಯಲ್ಲಿ ನಡೆದ ಪ್ರಥಮ ಪಂದ್ಯದ ಮೂಲಕ ಈ ಸರಣಿ ಚಾಲನೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಅತಿಥೇಯ ಟೀಮ್ ಇಂಡಿಯಾ ನೀಡಿದ್ದ 212 ರನ್‌ಗಳ ಬೃಹತ್ ಗುರಿಯನ್ನು 19.1 ಓವರ್‌ಗಳಲ್ಲಿಯೇ ಬೆನ್ನಟ್ಟಿ 7 ವಿಕೆಟ್‍ಗಳ ಭರ್ಜರಿ ಗೆಲುವನ್ನು ದಾಖಲಿಸಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1 - 0 ಮುನ್ನಡೆಯನ್ನು ಕಾಯ್ದುಕೊಂಡಿದೆ.
ಇತ್ತ ಬೃಹತ್ ಮೊತ್ತ ಗಳಿಸಿದರೂ ಸಹ ತವರು ನೆಲದಲ್ಲಿ ಸೋತು ಭಾರಿ ಮುಖಭಂಗಕ್ಕೆ ಒಳಗಾಗಿರುವ ಟೀಮ್ ಇಂಡಿಯಾ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಗೆದ್ದು ಕಮ್ ಬ್ಯಾಕ್ ಮಾಡುವ ಯೋಜನೆಯಲ್ಲಿದೆ. ಇತ್ತಂಡಗಳ ನಡುವಿನ ಎರಡನೇ ಟಿ ಟ್ವೆಂಟಿ ಪಂದ್ಯ ಕಟಕ್ ನಗರದ ಬಾರಬತಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯ ಇಂದು ( ಜೂನ್ 12 ) ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ.
ಈ ಪಂದ್ಯದಲ್ಲಿ ಇತ್ತಂಡಗಳೂ ಗೆಲ್ಲುವತ್ತ ಚಿತ್ತ ನೆಟ್ಟಿದ್ದರೆ, ಎರಡೂ ತಂಡಗಳ ಕೆಲ ಆಟಗಾರರು ಈ ಪಂದ್ಯದಲ್ಲಿ ಹಲವು ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆಗಳಿವೆ. ಹೀಗೆ ಈ ಪಂದ್ಯದಲ್ಲಿ ಯಾವ ಆಟಗಾರರು ಯಾವ ಮೈಲಿಗಲ್ಲುಗಳನ್ನು ಮುಟ್ಟಬಹುದು ಎಂಬುದರ ಕುರಿತಾದ ವಿವರ ಮುಂದೆ ಇದೆ ಓದಿ.

ಈ ಮೈಲಿಗಲ್ಲುಗಳತ್ತ ಡಿಕಾಕ್ ಚಿತ್ತ
• ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್, ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಈ ಪಂದ್ಯದಲ್ಲಿ ಒಂದೇ ಒಂದು ಕ್ಯಾಚ್ ಪಡೆದರೂ 50 ಅಂತರಾರಾಷ್ಟ್ರೀಯ ಟಿ ಟ್ವೆಂಟಿ ಕ್ಯಾಚ್ ಪಡೆದ ಆಟಗಾರ ಎಂಬ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 192 ಬೌಂಡರಿಗಳನ್ನು ಬಾರಿಸಿರುವ ಡಿ ಕಾಕ್ ಈ ಪಂದ್ಯದಲ್ಲಿ 8 ಬೌಂಡರಿ ಬಾರಿಸಿದರೆ 200 ಅಂತರರಾಷ್ಟ್ರೀಯ ಟಿ ಟ್ವೆಂಟಿ ಬೌಂಡರಿ ಬಾರಿಸಿದ ಆಟಗಾರ ಎಂಬ ಮೈಲಿಗಲ್ಲನ್ನು ತಲುಪಲಿದ್ದಾರೆ.
• ಕ್ವಿಂಟನ್ ಡಿಕಾಕ್ ಇಲ್ಲಿಯವರೆಗೂ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 1849 ರನ್ ಕಲೆಹಾಕಿದ್ದು, ದಕ್ಷಿಣ ಆಫ್ರಿಕಾ ಪರ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಜೆಪಿ ಡ್ಯುಮಿನಿ ( 1934 ರನ್ ) ದಾಖಲೆ ಮುರಿಯಲು 86 ರನ್ ಬಾರಿಸಬೇಕಾದ ಅಗತ್ಯವಿದೆ.

ಈ ಮೈಲಿಗಲ್ಲುಗಳ ಮೇಲೆ ಇತರೆ ಆಟಗಾರರ ಕಣ್ಣು
ಈ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಇತರೆ ಆಟಗಾರರು ಮುಟ್ಟಬಹುದಾದ ಮೈಲಿಗಲ್ಲುಗಳ ಪಟ್ಟಿ ಕೆಳಕಂಡಂತಿದೆ.
• ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ 45 ಬೌಂಡರಿಗಳನ್ನು ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಬಾರಿಸಿದ್ದು, ಈ ಪಂದ್ಯದಲ್ಲಿ 5 ಬೌಂಡರಿ ಬಾರಿಸಿದರೆ 50 ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಇಶಾನ್ ಕಿಶನ್ ಕೂಡ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 45 ಬೌಂಡರಿಗಳನ್ನು ಬಾರಿಸಿದ್ದು, ಈ ಪಂದ್ಯದಲ್ಲಿ 5 ಬೌಂಡರಿ ಗಳಿಸಿದರೆ, 50 ಬೌಂಡರಿಗಳ ಮೈಲಿಗಲ್ಲನ್ನು ತಲುಪಲಿದ್ದಾರೆ.
• ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಈ ಪಂದ್ಯದಲ್ಲಿ 1 ವಿಕೆಟ್ ಕಬಳಿಸಿದರೆ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 50 ವಿಕೆಟ್ ಪಡೆದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಹಾರ್ದಿಕ್ ಪಾಂಡ್ಯ ಎಲ್ಲಾ ಅಂತರರಾಷ್ಟ್ರೀಯ ಕ್ರಿಕೆಟ್ ಆವೃತ್ತಿಯೂ ಸೇರಿದಂತೆ 197 ಬೌಂಡರಿಗಳನ್ನು ಬಾರಿಸಿದ್ದು, ಈ ಪಂದ್ಯದಲ್ಲಿ 3 ಬೌಂಡರಿ ಬಾರಿಸಿದರೆ 200 ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಸಂಭಾವ್ಯ ಆಡುವ ಬಳಗಗಳು
ಭಾರತ: ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications