For Quick Alerts
ALLOW NOTIFICATIONS  
For Daily Alerts
 

IND vs SA: ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಕೇಪ್ ಟೌನ್ ಟೆಸ್ಟ್ ಪಂದ್ಯ; ಏನದು?

ಗುರುವಾರ, ಜನವರಿ 4ರಂದು ಕೇಪ್ ಟೌನ್‌ನಲ್ಲಿ ಮುಕ್ತಾಯಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೆ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡ ಐತಿಹಾಸಿಕ ಗೆಲುವು ಸಾಧಿಸಿತು.

ಇದೇ ವೇಳೆ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಕೇಪ್ ಟೌನ್ ಪಂದ್ಯವು ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿತು. ಇದು ನಿರ್ಣಾಯಕ ಫಲಿತಾಂಶದೊಂದಿಗೆ ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ಬೌಲ್ ಮಾಡಿದ ಎಸೆತಗಳ ವಿಷಯದಲ್ಲಿ ಅತ್ಯಂತ ಶಾರ್ಟೆಸ್ಟ್ ಪಂದ್ಯವಾಯಿತು.

ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ಕೇವಲ ಒಂದೂವರೆ ದಿನದಲ್ಲಿ ರೋಚಕವಾಗಿ ಮುಕ್ತಾಯಗೊಂಡಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 7 ವಿಕೆಟ್‌ಗಳ ಅಭೂತಪೂರ್ವ ಜಯ ದಾಖಲಿಸಿತು.

IND vs SA 2nd Test: Cape Town Test Match That Made History in Test cricket; What is That

ಈ ಪಂದ್ಯದಲ್ಲಿ ಗಮನಾರ್ಹವಾಗಿ ಭಾರತ ತಂಡದ ಬ್ಯಾಟಿಂಗ್ ಪತನ ಮತ್ತು ಭಾರತೀಯ ಬೌಲರ್‌ಗಳ ಅದ್ವಿತೀಯ ಪ್ರದರ್ಶನದಿಂದ ಕೂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತೀಯ ಬೌಲರ್‌ಗಳು ದಕ್ಷಿಣ ಆಫ್ರಿಕಾ ತಂಡವನ್ನು 55 ರನ್‌ಗಳಿಗೆ ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿತ್ತು.

ನಂತರ ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 98 ರನ್‌ಗಳ ಮುನ್ನಡೆಯೊಂದಿಗೆ ಉತ್ತಮ ಸ್ಥಿತಿಯಲ್ಲಿ ತಮ್ಮನ್ನು ತಾವು ಕಂಡುಕೊಂಡರು. ಪಂದ್ಯದ ಮೊದಲ ದಿನದ ಹೀರೋ ಮೊಹಮ್ಮದ್ ಸಿರಾಜ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶಗಳನ್ನು 15 ರನ್ ನೀಡಿ 6 ವಿಕೆಟ್ ಕಬಳಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಉತ್ತಮ ಜೊತೆಯಾಟ ನೀಡುವ ಮೂಲಕ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು. ಆ ಬಳಿಕ ವಿರಾಟ್ ಕೊಹ್ಲಿ ಕೂಡ ಆಕರ್ಷಕ 46 ರನ್ ಗಳಿಸಿದರು.

ಆದರೆ, ಮಧ್ಯಮ ಕ್ರಮಾಂಕದ ಭಾರತೀಯ ಬ್ಯಾಟಿಂಗ್ ಲೈನ್‌ಅಪ್ ಐತಿಹಾಸಿಕ ಕುಸಿತ ಅನುಭವಿಸಿತು. 4 ವಿಕೆಟ್‌ಗೆ 153 ರನ್ ಗಳಿಸಿದ್ದಾಗ, ಯಾವುದೇ ಹೆಚ್ಚುವರಿ ರನ್‌ ಗಳಿಸದೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅನಗತ್ಯ ದಾಖಲೆಯನ್ನು ಸ್ಥಾಪಿಸಿತು.

ಬ್ಯಾಟಿಂಗ್ ಹಿನ್ನಡೆಯ ಹೊರತಾಗಿಯೂ, ಭಾರತೀಯ ಬೌಲರ್‌ಗಳು ವಿಶೇಷವಾಗಿ, ಜಸ್ಪ್ರೀತ್ ಬುಮ್ರಾ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ, 6 ವಿಕೆಟ್‌ಗಳನ್ನು ಪಡೆದರು.

ದಕ್ಷಿಣ ಆಫ್ರಿಕಾ ಪರ ಏಡೆನ್ ಮಾರ್ಕ್ರಾಮ್ ಅವರ ಪ್ರತಿರೋಧದ ಶತಕದಾಟವು ಪ್ರಬಲ ಭಾರತೀಯ ಬೌಲಿಂಗ್ ದಾಳಿಯ ವಿರುದ್ಧ ಏಕಾಂಗಿ ಹೋರಾಟವೆನಿಸಿತು.

IND vs SA 2nd Test: Cape Town Test Match That Made History in Test cricket; What is That

ಅಂತಿಮವಾಗಿ, ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ 79 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವಲ್ಲಿ ಭಾರತ ತಂಡವು ಯಶಸ್ವಿಯಾಯಿತು. ಏಳು ವಿಕೆಟ್‌ಗಳ ಗೆಲುವು ಗಳಿಸಿತು ಮತ್ತು ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿತು.

ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಪಿಚ್ ಪಂದ್ಯದ ಫಲಿತಾಂಶದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಆರಂಭಿಕ ದಿನವೇ 23 ವಿಕೆಟ್‌ಗಳು ಪತನಗೊಂಡಿವು.

ವಿಶಿಷ್ಟ ದಾಖಲೆ ಸೃಷ್ಟಿಸಿದ ಕೇಪ್ ಟೌನ್ ಟೆಸ್ಟ್ ಪಂದ್ಯ

ಕೇವಲ ಒಂದೂವರೆ ದಿನಗಳಲ್ಲಿ ಪಂದ್ಯವನ್ನು ಮುಗಿಸುವುದರೊಂದಿಗೆ, ಇದು ಕೇವಲ 107 ಓವರ್‌ಗಳನ್ನು ಬೌಲ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಟೆಸ್ಟ್ ಪಂದ್ಯವಾಯಿತು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎಸೆತಗಳ ವಿಷಯದಲ್ಲಿ ಅತ್ಯಂತ ವೇಗವಾಗಿ ಕೊನೆಗೊಂಡಿತು. ಏಕೆಂದರೆ ಪಂದ್ಯದ ಫಲಿತಾಂಶವನ್ನು ಪಡೆಯಲು ಕೇವಲ 642 ಎಸೆತಗಳನ್ನಷ್ಟೆ ತೆಗೆದುಕೊಂಡಿತು.

ಅತ್ಯಂತ ಬೇಗ ಮುಕ್ತಾಯಗೊಂಡ ಟೆಸ್ಟ್ ಪಂದ್ಯಗಳು (ಬೌಲ್ ಮಾಡಿದ ಎಸೆತಗಳಿಂದ)

642 - ಭಾರತ vs ದಕ್ಷಿಣ ಆಫ್ರಿಕಾ, ಕೇಪ್ ಟೌನ್, 2024
656 - ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ಮೆಲ್ಬೋರ್ನ್, 1932
672 - ವೆಸ್ಟ್ ಇಂಡೀಸ್ vs ಇಂಗ್ಲೆಂಡ್, ಬ್ರಿಡ್ಜ್‌ಟೌನ್, 1935
788 - ಇಂಗ್ಲೆಂಡ್ vs ಆಸ್ಟ್ರೇಲಿಯಾ, ಮ್ಯಾಂಚೆಸ್ಟರ್, 1888
792 - ಇಂಗ್ಲೆಂಡ್ vs ಆಸ್ಟ್ರೇಲಿಯಾ, ಲಾರ್ಡ್ಸ್, 1888

Story first published: Thursday, January 4, 2024, 19:05 [IST]
Other articles published on Jan 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+