Jasprit Bumrah: ಸೆನಾ ರಾಷ್ಟ್ರಗಳಲ್ಲಿ 6ನೇ, ಒಟ್ಟಾರೆ 9ನೇ ಬಾರಿಗೆ; ಜಸ್ಪ್ರೀತ್ ಬುಮ್ರಾ ದಾಖಲೆಗಳು ಒಂದೆರಡಲ್ಲ!
ಗುರುವಾರ, ಜನವರಿ 4ರಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಅಕ್ಷರಶಃ ಬೆಂಕಿಯುಗುಳಿದರು.
ಗುರುವಾರ, ಜನವರಿ 4ರಂದು ನಡೆಯುತ್ತಿರುವ ಎರಡನೇ ಪಂದ್ಯದ ಎರಡನೇ ದಿನದಂದು ದಕ್ಷಿಣ ಆಫ್ರಿಕಾ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಏಡೆನ್ ಮಾರ್ಕ್ರಾಮ್ ಅವರ ಭರ್ಜರಿ ಶತಕದ ಹೊರತಾಗಿಯೂ 36.5 ಓವರ್‌ಗಳಲ್ಲಿ 176 ರನ್‌ಗಳಿಗೆ ಸರ್ವಪತನ ಕಂಡಿತು.

ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಲೈನ್‌ಅಪ್ ಅನ್ನು ಧ್ವಂಸಗೊಳಸಿದ ಜಸ್ಪ್ರೀತ್ ಬುಮ್ರಾ, 13.5 ಓವರ್‌ಗಳಲ್ಲಿ 61 ರನ್ ನೀಡಿ 6 ವಿಕೆಟ್ ಕಬಳಿಸಿದರು.
ಈ ಮೂಲಕ ಜಸ್ಪ್ರೀತ್ ಬುಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಒಂಬತ್ತನೇ ಬಾರಿಗೆ ಐದು ವಿಕೆಟ್ ಗೊಂಚಲನ್ನು ಪಡೆದರೆ, ದಕ್ಷಿಣ ಆಫ್ರಿಕಾದಲ್ಲಿ ಇದು ಮೂರನೇ ಬಾರಿಗೆ 5 ವಿಕೆಟ್‌ಗಳ ಸಾಧನೆಯಾಗಿದೆ. ಎರಡನೇ ಟೆಸ್ಟ್ ಪಂದ್ಯದ 2ನೇ ದಿನದ ಮೊದಲ ಅವಧಿಯ ಮೊದಲ ಗಂಟೆಯೊಳಗೆ ಜಸ್ಪ್ರೀತ್ ಬುಮ್ರಾ ಈ ಸಾಧನೆ ಮಾಡಿದರು.
ಮೊದಲ ದಿನದ ಅಂತಿಮ ಸೆಷನ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರು ಚೊಚ್ಚಲ ಪಂದ್ಯವಾಡಿದ ದಕ್ಷಿಣ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್ ಅವರ ವಿಕೆಟ್ ಪಡೆದರು. ಸ್ಟಬ್ಸ್ ಎರಡೂ ಬಾರಿ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ನೀಡಿದರು.

ಇನ್ನು 2ನೇ ದಿನದಲ್ಲಿ ಜಸ್ಪ್ರೀತ್ ಬುಮ್ರಾ ಅವರು ಡೇವಿಡ್ ಬೆಡಿಂಗ್‌ಹ್ಯಾಮ್, ಕೈಲ್ ವೆರ್ರೆನ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್ ಮತ್ತು ಲುಂಗಿ ಎನ್‌ಗಿಡಿ ಅವರ ವಿಕೆಟ್‌ಗಳನ್ನು ಕಬಳಿಸಲು ಕಾರಣರಾದರು.
ಜಸ್ಪ್ರೀತ್ ಬುಮ್ರಾ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಟೇಕರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ಮಾಜಿ ವೇಗಿ ಜಾವಗಲ್ ಶ್ರೀನಾಥ್ ಕ್ರಮವಾಗಿ 45 ಮತ್ತು 43 ವಿಕೆಟ್‌ಗಳೊಂದಿಗೆ ಆಫ್ರಿಕನ್ ದೇಶದಲ್ಲಿ ಭಾರತದ ಅಗ್ರ ಎರಡು ಬೌಲರ್‌ಗಳಾಗಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಬೌಲರ್‌ನಿಂದ ಅತಿ ಹೆಚ್ಚು ಬಾರಿ (3) ಐದು ವಿಕೆಟ್‌ಗಳನ್ನು ಪಡೆದ ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ಸರಿಗಟ್ಟಿದರು.
ಜಸ್ಪ್ರೀತ್ ಬುಮ್ರಾ ಅವರು ಜಾವಗಲ್ ಶ್ರೀನಾಥ್, ಮೊಹಮ್ಮದ್ ಶಮಿ, ವೆಂಕಟೇಶ್ ಪ್ರಸಾದ್ ಮತ್ತು ಎಸ್ ಶ್ರೀಶಾಂತ್ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ಹಲವು ಬಾರಿ ಐದು ವಿಕೆಟ್‌ಗಳನ್ನು ಪಡೆದ ಐದು ಭಾರತೀಯ ಬೌಲರ್‌ಗಳಲ್ಲಿ ಒಬ್ಬರಾದರು.
ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತದ ಬೌಲರ್‌ಗಳು
45 - ಅನಿಲ್ ಕುಂಬ್ಳೆ
43 - ಜಾವಗಲ್ ಶ್ರೀನಾಥ್
38 - ಜಸ್ಪ್ರೀತ್ ಬುಮ್ರಾ
35 - ಮೊಹಮ್ಮದ್ ಶಮಿ
30 - ಜಹೀರ್ ಖಾನ್
SENA ದೇಶಗಳಲ್ಲಿ ಅತಿ ಹೆಚ್ಚು ಬಾರಿ ಟೆಸ್ಟ್ 5-ವಿಕೆಟ್ ಪಡೆದ ಭಾರತದ ಬೌಲರ್‌ಗಳು
7 - ಕಪಿಲ್ ದೇವ್
6 - ಬಿ. ಚಂದ್ರಶೇಖರ್
6 - ಜಹೀರ್ ಖಾನ್
6 - ಜಸ್ಪ್ರೀತ್ ಬುಮ್ರಾ
ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಬಾರಿ 5-ವಿಕೆಟ್ ಪಡೆದ ಭಾರತ ಬೌಲರ್‌ಗಳು
3 - ಜಾವಗಲ್ ಶ್ರೀನಾಥ್
3 - ಜಸ್ಪ್ರೀತ್ ಬುಮ್ರಾ
2 - ವೆಂಕಟೇಶ್ ಪ್ರಸಾದ್
2 - ಎಸ್. ಶ್ರೀಶಾಂತ್
2 - ಮೊಹಮ್ಮದ್ ಶಮಿ
ಕೇಪ್ ಟೌನ್‌ಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಪ್ರವಾಸಿ ಬೌಲರ್‌ಗಳು
25 - ಕಾಲಿನ್ ಬ್ಲೈಥ್ (ಇಂಗ್ಲೆಂಡ್)
18 - ಜಸ್ಪ್ರೀತ್ ಬುಮ್ರಾ (ಭಾರತ)
17 - ಶೇನ್ ವಾರ್ನ್ (ಆಸ್ಟ್ರೇಲಿಯಾ)
16 - ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್)
15 - ಜಾನಿ ಬ್ರಿಗ್ಸ್ (ಇಂಗ್ಲೆಂಡ್)
ಕೇಪ್ ಟೌನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರು 8 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್‌ಗಳ ಅಂಕಿಅಂಶಗಳೊಂದಿಗೆ ಮುಗಿಸಿದ ನಂತರ ಅಷ್ಟೇ ಪರಿಣಾಮಕಾರಿ ಪುನರಾಗಮನ ಮಾಡಿದರು.
ಟ್ರಿಸ್ಟಾನ್ ಸ್ಟಬ್ಸ್ ಮತ್ತು ನಾಂದ್ರೆ ಬರ್ಗರ್ ಅವರ ವಿಕೆಟ್‌ಗಳನ್ನು ಪಡೆದ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್‌ಗೆ ಬೆಂಬಲ ನೀಡಿದರು. ಮೊಹಮ್ಮದ್ ಸಿರಾಜ್ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದಿದ್ದರು.
2018ರಲ್ಲಿ ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು ಮತ್ತು ಅವರು ತಮ್ಮ ವೃತ್ತಿಜೀವನದಲ್ಲಿ ಹಿಂತಿರುಗಿ ನೋಡಲಿಲ್ಲ. ಈ ವೇಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳ ಹೆಗ್ಗುರುತನ್ನು ಸಹ ಸಮೀಪಿಸುತ್ತಿದ್ದಾರೆ.
ಕಳೆದ ವರ್ಷ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದ ಚೇತರಿಸಿಕೊಂಡ ನಂತರ, ಕ್ರಿಕೆಟ್ ಮೈದಾನಕ್ಕೆ ಮರಳಿದರು. ಭಾರತ ತಂಡವು 2023ರ ವಿಶ್ವಕಪ್ ಫೈನಲ್‌ಗೆ ಮುನ್ನಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications