Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA: ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ವಿರುದ್ಧ ಅತ್ಯಂತ ಕಳಪೆ ದಾಖಲೆ ತನ್ನದಾಗಿಸಿಕೊಂಡ ದಕ್ಷಿಣ ಆಫ್ರಿಕಾ

ಬುಧವಾರ, ಜನವರಿ 3ರಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರವಾಸಿ ತಂಡದ ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ದಾಳಿ ನಡೆಸಿದರು.

ಈ ಮೂಲಕ ದಕ್ಷಿಣ ಆಫ್ರಿಕಾ ತಂಡವು ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಯಾವುದೇ ತಂಡಕ್ಕಿಂತ ಅತ್ಯಂತ ಕಡಿಮೆ ಮೊತ್ತವನ್ನು ದಾಖಲಿಸಿತು.

ಮೊದಲ ಇನಿಂಗ್ಸ್‌ನಲ್ಲಿ ಹರಿಣ ಪಡೆ ಕೇವಲ 23.2 ಓವರ್‌ಗಳಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡಿತು. 2021ರ ಡಿಸೆಂಬರ್‌ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ತಂಡ 62 ರನ್‌ಗಳಿಗೆ ಆಲೌಟ್ ಆಗಿದ್ದು, ಈವರೆಗೂ ಭಾರತದ ವಿರುದ್ಧದ ಅತ್ಯಂತ ಕಡಿಮೆ ಮೊತ್ತವಾಗಿತ್ತು.

IND vs SA 2nd Test: South Africa Scores the Lowest Test score by an opposition against India

ಮೊಹಮ್ಮದ್ ಸಿರಾಜ್ 9 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಆತಿಥೇಯ ತಂಡಕ್ಕೆ ಕಂಟಕವಾಗಿ ಪರಿಣಮಿಸಿದರು. ಮೊದಲ ಟೆಸ್ಟ್‌ ಪಂದ್ಯದ ಸೋಲಿನ ನಂತರ, ಭಾರತ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠವಾಗಿ ಪುನರಾಗಮನ ಮಾಡಿದೆ.

ಭಾರತ ತಂಡದ ಸೊಗಸಾದ ಬೌಲಿಂಗ್‌ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾವು ಭಾರತದ ವಿರುದ್ಧ ತಮ್ಮ ಅತ್ಯಂತ ಕಡಿಮೆ ಟೆಸ್ಟ್ ಮೊತ್ತವನ್ನು ದಾಖಲಿಸಿತು. 2019ರಲ್ಲಿ ನಾಗ್ಪುರದಲ್ಲಿ ಕೇವಲ 79 ರನ್‌ಗಳಿಗೆ ಆಲೌಟ್ ಆದ ಹಾಶೀಮ್ ಆಮ್ಲಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧದ ಅತ್ಯಂತ ಕಡಿಮೆ ಮೊತ್ತದ ಹಿಂದಿನ ದಾಖಲೆಯಾಗಿತ್ತು.

ಇನ್ನು ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್‌ನ ಕಡಿಮೆ ಮೊತ್ತದ ದಾಖಲೆಯು ಹಾಗೆಯೇ ಉಳಿದಿದೆ. 1886ರಲ್ಲಿ ಇಂಗ್ಲೆಂಡ್ ವಿರುದ್ಧ ಹರಿಣ ಪಡೆ ಕೇವಲ 30 ರನ್‌ಗಳಿಗೆ ಆಲೌಟ್ ಆಗಿತ್ತು.

IND vs SA 2nd Test: South Africa Scores the Lowest Test score by an opposition against India

ಬುಧವಾರ ಭಾರತದ ವೇಗಿಗಳು ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡರು ಮತ್ತು ದಿನದ ಮೊದಲ ಸೆಷನ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದರು. ಮೊಹಮ್ಮದ್ ಸಿರಾಜ್ ಅವರ 6 ವಿಕೆಟ್ ಹೊರತುಪಡಿಸಿ, ಜಸ್ಪ್ರೀತ್ ಬುಮ್ರಾ 2 ವಿಕೆಟ್, ಮುಖೇಶ್ ಕುಮಾರ್ 2 ವಿಕೆಟ್ ಪಡೆದರು.

ಇನ್ನು ಮೊಹಮ್ಮದ್ ಸಿರಾಜ್ ಅವರು ಟೆಸ್ಟ್ ಕ್ರಿಕೆಟ್‌ನ ಒಂದು ಇನ್ನಿಂಗ್ಸ್‌ನಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಲು 15 ರನ್ ನೀಡಿ 6 ವಿಕೆಟ್‌ಗಳನ್ನು ಪಡೆದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅತ್ಯಂತ ಕಡಿಮೆ ಮೊತ್ತ ದಾಖಲಿಸಿದ ತಂಡಗಳು

ದಕ್ಷಿಣ ಆಫ್ರಿಕಾ: 55 ರನ್ (ಕೇಪ್ ಟೌನ್, 2023)
ನ್ಯೂಜಿಲೆಂಡ್: 62 ರನ್ (ವಾಂಖೆಡೆ, 2021)
ದಕ್ಷಿಣ ಆಫ್ರಿಕಾ: 79 ರನ್ (ನಾಗ್ಪುರ, 2015)
ಇಂಗ್ಲೆಂಡ್: 81 ರನ್ (ಅಹಮದಾಬಾದ್, 2021)
ಶ್ರೀಲಂಕಾ: 82 ರನ್ (ಚಂಡೀಗಢ, 1990)

ಟೆಸ್ಟ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಅತಿ ಕಡಿಮೆ ಮೊತ್ತ

30: ಇಂಗ್ಲೆಂಡ್ ವಿರುದ್ಧ (ಗ್ಕೆಬರ್ಹಾ, 1896)
30: ಇಂಗ್ಲೆಂಡ್ ವಿರುದ್ಧ (ಬರ್ಮಿಂಗ್ಹ್ಯಾಮ್, 1924)
35: ಇಂಗ್ಲೆಂಡ್ ವಿರುದ್ಧ (ಕೇಪ್ ಟೌನ್; 1899)
36: ಆಸ್ಟ್ರೇಲಿಯಾ ವಿರುದ್ಧ (ಮೆಲ್ಬೋರ್ನ್, 1932)
43: ಇಂಗ್ಲೆಂಡ್ ವಿರುದ್ಧ (ಕೇಪ್ ಟೌನ್, 1889)
45: ವಿರುದ್ಧ ಆಸ್ಟ್ರೇಲಿಯಾ (ಮೆಲ್ಬೋರ್ನ್, 1932)
47: ಇಂಗ್ಲೆಂಡ್ ವಿರುದ್ಧ (ಕೇಪ್ ಟೌನ್, 1889)
55: ಭಾರತ ವಿರುದ್ಧ (ಕೇಪ್ ಟೌನ್, 2024)
58: ಇಂಗ್ಲೆಂಡ್ ವಿರುದ್ಧ (ಲಾರ್ಡ್ಸ್, 1912)
72: ಇಂಗ್ಲೆಂಡ್ ವಿರುದ್ಧ (ಜೋಹಾನ್ಸ್‌ಬರ್ಗ್, 1956)

Story first published: Wednesday, January 3, 2024, 17:10 [IST]
Other articles published on Jan 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+