For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ: ನೆಚ್ಚಿನ ಕ್ರೀಡಾಂಗಣದಲ್ಲಿ ದಾಖಲೆ ಬರೆಯಲು ವಿರಾಟ್ ಕೊಹ್ಲಿ ಸಜ್ಜು

Ind vs SA: 2nd test, Virat Kohli eye on batting record and looks to level Steve Waughs captaincy record

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನಾಡಲು ಸಜ್ಜಾಗಿದೆ. 2022ನೇ ಕ್ಯಾಲೆಂಡರ್ ವರ್ಷದ ಮೊದಲ ಪಂದ್ಯದಲ್ಲಿ ಈ ಎರಡು ತಂಡಗಳು ಕಣಕ್ಕಿಳಿಯಲಿದ್ದು ಈ ಪ[ಂದ್ಯ ಜೋಹನ್ಸ್‌ಬರ್ಗ್‌ನಲ್ಲಿ ಸೋಮವಾರದಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಮುಖ ದಾಖಲೆಯೊಂದರ ಮೇಲೆ ಕಣ್ಣಿಟ್ಟಿದ್ದಾರೆ.

ಜೋಹನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣ ವಿರಾಟ್ ಕೊಹ್ಲಿ ಪಾಲಿಗೆ ಯಶಸ್ವೀ ಕ್ರೀಡಾಂಗಣ ಎನಿಸಿದೆ. ಇಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಕೊಹ್ಲಿ 310 ರನ್‌ಗಳಿಸಿದ್ದಾರೆ. ಪ್ರವಾಸ ತಂಡಗಳ ಆಟಗಾರರ ಪೈಕಿ ಈ ಮೈದಾನದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಲು ವಿರಾಟ್ ಕೊಹ್ಲಿ ಇನ್ನು ಕೇವಲ 7 ರನ್‌ಗಳಿಸಿದರೆ ಸಾಕು. ವಾಂಡರರ್ಸ್ ಕ್ರೀಡಾಂಗಣದಲ್ಲಿ 316 ರನ್‌ಗಳಿಸಿರುವ ನ್ಯೂಜಿಲೆಂಡ್‌ನ ಜಾನ್ ರೈಡ್ ಹೆಸರಿನಲ್ಲಿ ಈಗ ಈ ದಾಖಲೆಯಿದೆ.

2013ರಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದ ವೇಳೆ ವಿರಾಟ್ ಕೊಹ್ಲಿ ಅಮೋಘ ಫಾರ್ಮ್‌ನಲ್ಲಿದ್ದರು. ಆ ಸರಣಿಯಲ್ಲಿ ಜೋಹನ್ಸ್ ಬರ್ಗ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 119 ರನ್‌ಗಳಿಸಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 96 ರನ್‌ಗಳಿಸಿದ್ದರು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಇನ್ನು 2018ರ ಸರಣಿಯಲ್ಲಿ ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 54 ರನ್‌ಗಳನ್ನು ಗಳಸಿದ್ದರೆ ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು.

ಇನ್ನು ದಕ್ಷಿಣ ಆಫ್ರಿಕಾದಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶವೂ ವಿರಾಟ್ ಕೊಹ್ಲಿ ಮುಂದಿದೆ. ಸದ್ಯ ಎರಡನೇ ಸ್ಥಾನದಲ್ಲಿರುವ ರಾಹುಲ್ ದ್ರಾವಿಡ್ ಸ್ಕೋರ್‌ಅನ್ನು ಹಿಂದಿಕ್ಕುವ ಅವಕಾಶವೂ ವಿರಾಟ್ ಕೊಹ್ಲಿ ಮುಂದಿದೆ. ದಕ್ಷಿಣ ಆಫ್ರಿಕಾದಲ್ಲಿ ಇವರೆಗೆ 6 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 50.91ರ ಸರಾಸರಿಯಲ್ಲಿ 611 ರನ್‌ಗಳಿಸಿದ್ದಾರೆ.

ಇದರ ಜೊತೆಗೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಮುಖ ದಾಖಲೆಯೊಂದನ್ನು ಸರಿಗಟ್ಟುವ ಅವಕಾಶವನ್ನು ಕೂಡ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ದಾಖಲೆಯನ್ನು ಸರಿಗಟ್ಟುವ ಅವಕಾಶ ವಿರಾಟ್ ಮುಂದಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಈವರೆಗೆ 67 ಪಂದ್ಯಗಳನ್ನು ಆಡಿದ್ದು ಇದರಲ್ಲಿ 40 ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಜೋಹನ್ಸ್‌ಬರ್ಗ್‌ನಲ್ಲಿ ಗೆದ್ದರೆ ವಿರಾಟ್ ಕೊಹ್ಲಿ ಜಂಟಿಯಾಗಿ ಮೂರನೇ ಸ್ಥಾನಕ್ಕೇರಲಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ತಂಡ ಕಳೆದ ವಾರ ಸೆಂಚೂರಿಯನ್‌ನಲ್ಲಿ ಪಂದ್ಯವನ್ನು ಗೆದ್ದಿದ್ದು ಈ ಗೆಲುವಿನಿಂದಿಗೆ ಸೆಂಚುರಿಯನ್‌ನಲ್ಲಿ ಗೆಲುವು ಸಾಧಿಸಿದ ಮೊದಲ ಏಷ್ಯಾ ನಾಯಕ ಎಂಬ ಹೆಗ್ಗಳಿಕೆಯನ್ನು ಕೊಹ್ಲಿ ಪಡೆದುಕೊಂಡಿದ್ದಾರೆ. ಈಗ ಜೊಹನ್ಸ್‌ಬರ್ಗ್‌ನಲ್ಲಿ ಗೆಲುವು ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಭಾರತೀಯ ನಾಯಕ ಎನಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ.

ಇನ್ನು ವಾಂಡರರ್ಸ್ ಕ್ರೀಡಾಂಗಣ ಭಾರತದ ಪಾಲಿಗೆ ಅದೃಷ್ಠದ ಕ್ರೀಡಾಂಗಣ ಎನಿಸಿದೆ. ಇಲ್ಲಿ ಆಡಿದ ಪಂದ್ಯಗಳ ಪೈಕಿ ಭಾರತ ಈವರೆಗೆ ಸೋಲು ಕಂಡಿಲ್ಲ. ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತ ಒಟ್ಟು ಐದು ಪಂದ್ಯಗಳನ್ನು ಆಡಿದೆ. ಇದರಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಈ ಮೂಲಕ ಅಜೇಯ ಸಾಧನೆಯನ್ನು ಮುಂದುವರಿಸಲು ಭಾರತ ಚಿತ್ತ ನೆಟ್ಟಿದೆ.

ಟೀಮ್ ಇಂಡಿಯಾ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಯಂತ್ ಯಾದವ್, ಎಸ್ ಜಯಂತ್ ಯಾದವ್ , ಹನುಮ ವಿಹಾರಿ, ಪ್ರಿಯಾಂಕ್

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟೆಂಬಾ ಬವುಮಾ, ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್ಗಿಡಿ, ಡುವಾನ್ ಸಿಯಾಂಡರಿಕ್ಸ್, ಬೆಯುರ್ ಸಿಂಡಾರಿಕ್ಸ್, , ಜಾರ್ಜ್ ಲಿಂಡೆ, ಪ್ರೆನೆಲನ್ ಸುಬ್ರಾಯೆನ್, ಕೈಲ್ ವೆರ್ರೆನ್, ಸರೆಲ್ ಎರ್ವೀ, ರಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್ಪಾಂಚಾಲ್, ಇಶಾಂತ್ ಶರ್ಮಾ

Story first published: Sunday, January 2, 2022, 21:59 [IST]
Other articles published on Jan 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+