IND vs SA 3rd ODI: ಭಾರತ vs ದಕ್ಷಿಣ ಆಫ್ರಿಕಾ ಸರಣಿ ನಿರ್ಣಾಯಕ ಕದನ; ಹವಾಮಾನ ವರದಿ, ಸಂಭಾವ್ಯ ಆಡುವ ಬಳಗ
ಗುರುವಾರ, ಡಿಸೆಂಬರ್ 21ರಂದು ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಪ್ರವಾಸಿ ಭಾರತ ತಂಡಗಳು ಸರಣಿ ಗೆಲ್ಲಲು ಸೆಣಸಾಡಲಿವೆ.
ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆಲುವು ಸಾಧಿಸಿದ ನಂತರ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸರಣಿ ನಿರ್ಣಾಯಕ ಕದನದಲ್ಲಿ ಹೋರಾಡಲು ಸಿದ್ಧವಾಗಿವೆ.

ಪ್ರವಾಸಿ ತಂಡ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದರೆ, ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಹರಿಣ ಪಡೆ ಉತ್ತಮವಾಗಿ ಪುಟಿದೆದ್ದಿತು. ಟೋನಿ ಡಿ ಝೋರ್ಜಿ ಅವರು 119 ರನ್‌ಗಳ ಅಮೋಘ ಶತಕ ಬಾರಿಸಿದರು. ಇದು ದಕ್ಷಿಣ ಆಫ್ರಿಕಾ 8 ವಿಕೆಟ್‌ಗಳಿಂದ ಗೆಲುವು ದಾಖಲಿಸುವುದರ ಜೊತೆಗೆ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿತು.
ಮೂರು ಪಂದ್ಯಗಳ ಏಕದಿನ ಸರಣಿಯು ಸಮತೋಲನದಲ್ಲಿರುವುದರಿಂದ, ಡಿಸೆಂಬರ್ 21ರಂದು ನಡೆಯುವ ಅಂತಿಮ ಪಂದ್ಯದಲ್ಲಿ ಎರಡೂ ತಂಡಗಳ ತಮ್ಮ ಕ್ಲಾಸ್ ಆಟವನ್ನು ವೀಕ್ಷಿಸಲು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಇದೇ ವೇಳೆ ಪಂದ್ಯದ ದಿನದಂದು ಸ್ಥಳೀಯ ಹವಾಮಾನದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.
ದಕ್ಷಿಣ ಆಫ್ರಿಕಾ vs ಭಾರತ 3ನೇ ಏಕದಿನ ಪಂದ್ಯದ ಹವಾಮಾನ ವರದಿ
ದಕ್ಷಿಣ ಆಫ್ರಿಕಾದ ಪಾರ್ಲ್ ನಗರದ ಬೋಲ್ಯಾಂಡ್ ಪಾರ್ಕ್ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೂರನೇ ಏಕದಿನ ಪಂದ್ಯವನ್ನು ಆಯೋಜಿಸಲು ಸಜ್ಜಾಗಿದೆ. ಹವಾಮಾನ ದಿನದ ಆಟದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹವಾಮಾನ ಮುನ್ಸೂಚನೆಗಳು ತುಂಬಾ ಬಿಸಿಯಾದ ಪರಿಸ್ಥಿತಿಗಳನ್ನು ಸೂಚಿಸುತ್ತವೆ.
3ನೇ ಏಕದಿನ ಪಂದ್ಯವು ಸ್ಥಳೀಯ ಕಾಲಮಾನದ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಆಟದ ಅವಧಿಯುದ್ದಕ್ಕೂ ಬಿಸಿಲು ಮತ್ತು ಸ್ವಚ್ಛ ಆಕಾಶವಿರಲಿದೆ ಎಂದು ಅಕ್ಯುವೆದರ್ ತಿಳಿಸಿದೆ.
ಪಂದ್ಯದ ದಿನದಂದು ಪಾರ್ಲ್‌ನಲ್ಲಿನ ತಾಪಮಾನ ಮಧ್ಯಾಹ್ನದ ಸುಮಾರಿಗೆ 36 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ಮಟ್ಟವನ್ನು ತಲುಪುತ್ತದೆ. ಇದು ಆಟಗಾರರು ಮತ್ತು ಪ್ರೇಕ್ಷಕರಿಗೆ ಪೂರ್ಣ ಪಂದ್ಯದ ಭರವಸೆ ನೀಡಲಿದೆ.
ನಂತರದ ಹಂತಗಳಲ್ಲಿ ಪಂದ್ಯವು ಮುಂದುವರೆದಂತೆ, ತಾಪಮಾನವು ಸುಮಾರು 25 ಡಿಗ್ರಿ ಸೆಲ್ಸಿಯಸ್‌ಗೆ ಕಡಿಮೆಯಾಗುವ ಮುನ್ಸೂಚನೆ ನಿರೀಕ್ಷಿಸಲಾಗಿದೆ.
ಬಿಸಿಲಿನ ಹೊರತಾಗಿ, ಆಟಗಾರರು ಮತ್ತು ಅಭಿಮಾನಿಗಳು ಶೂನ್ಯ ಶೇಕಡಾವಾರು ಮಳೆಯ ಸಾಧ್ಯತೆ ನೋಡಲಿದ್ದಾರೆ ಮತ್ತು ಸ್ಪಷ್ಟವಾದ ಆಕಾಶ ಕಾರಣ, ಯಾವುದೇ ಅಡಚಣೆಯಿಲ್ಲದ ಪಂದ್ಯವನ್ನು ಖಾತ್ರಿಪಡಿಸಿಕೊಳ್ಳಬಹುದು.
ಪಿಚ್ ವರದಿ
ಬೋಲ್ಯಾಂಡ್ ಪಾರ್ಕ್ ಪಿಚ್‌ನ ಬ್ಯಾಟಿಂಗ್-ಸ್ನೇಹಿ ಸ್ವಭಾವವನ್ನು ಗಮನಿಸಿದರೆ, ಉಭಯ ತಂಡಗಳು ಗಣನೀಯ ಮೊತ್ತವನ್ನು ಕಲೆಹಾಕುವುದನ್ನು ನಿರೀಕ್ಷಿಸಬಹುದು. ಇದು 250ಕ್ಕೂ ಅಧಿಕ ರನ್‌ಗಳ ಗುರಿಯಾಗಿರುತ್ತದೆ.
ಗಮನಾರ್ಹವಾಗಿ, ಬೋಲ್ಯಾಂಡ್ ಪಾರ್ಕ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಒಂದು ಪ್ರಯೋಜನವನ್ನು ಹೊಂದಿವೆ. ಇದು ಟಾಸ್‌ನಲ್ಲಿ ನಾಯಕನ ನಿರ್ಧಾರದ ಮೇಲೆ ಪ್ರಭಾವ ಬೀರಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications