ಆಸ್ಟ್ರೇಲಿಯಾ ಹೆಸರಿನಲ್ಲಿರುವ ದೊಡ್ಡ ದಾಖಲೆ ಧ್ವಂಸ: ಭರ್ಜರಿ ಗೆಲುವಿನಲ್ಲಿ ಮುರಿದ ಮೂರು ದಾಖಲೆಗಳಿದು!

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಕೂಡ ಅಂತ್ಯವಾಗಿದೆ. ಶಿಖರ್ ಧವನ್ ನೇತೃತ್ವದ ಯುವ ಆಟಗಾರರನ್ನು ಒಂಗೊಂಡ ಎರಡನೇ ದರ್ಜೆಯ ಭಾರತ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ಸೋಲು ಅನುಭವಿಸುವ ಮೂಲಕ ಸರಣಿಯಲ್ಲಿ ಸೋಲು ಅನುಭವಿಸಿದೆ. ಮೂರು ಪಂದ್ಯಗಳಲ್ಲಿಯೂ ಅಮೋಘ ಆಟ ಪ್ರದರ್ಶಿಸಿದ ಟೀಮ್ ಇಂಡಿಯಾ ಆಟಗಾರರ ಬಳಗ ಏಕದಿನ ಸರಣಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಮೊದಲ ಪಂದ್ಯದಲ್ಲಿ ಭಾರತ ತಂಡದ ಸಣ್ಣ ಅಂತರದಿಂದ ಸೋಲು ಅನುಭವಿಸಿದ್ದರೂ ಎರಡನೇ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಹಾಗೂ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದಾಗಿ ಭರ್ಜರಿ ಗೆಲುವು ಸಾಧಿಸಿತ್ತು. ಹೀಗಾಗಿ ಶಿಖರ್ ಧವನ್ ಬಳಗ ಈ ಸರಣಿಯಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಕಾರಣದಿಂದಾಗಿ ದೆಹಲಿಯಲ್ಲಿ ನಡೆದ ಪಂದ್ಯ ಈ ಸರಣಿಯ ನಿರ್ಣಾಯಕ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಬೌಲಿಂಗ್ ವಿಭಾಗ ನೀಡಿದ ಅಮೋಘ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಬೃಹತ್ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪ್ರಮುಖ ದಾಖಲೆಗಳು ಮುರಿದಿದ್ದು ಆ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ನೋಡೋಣ ಮುಂದೆ ಓದಿ..

ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಕನಿಷ್ಠ ಮೊತ್ತ ದಾಖಲಿಸಿದ ದ. ಆಫ್ರಿಕಾ
ದೆಹಲಿಯ ಅರುಣ್ ಜೇಟ್ಲೀ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಬೌಲಿಂಗ್ ಪ್ರದರ್ಶನ ನೀಡಿತು. ಇದರ ಪರಿಣಾಮವಾಗಿ ದಕ್ಷಿಣ ಆಫ್ರಿಕಾ ತಂಡ 27.1 ಓವರ್‌ಗಳಲ್ಲಿ ಕೇವಲ 99 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಭಾರತ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಗಳಿಸಿದ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. ಇದಕ್ಕೂ ಮುನ್ನ 1999ರಲ್ಲಿ ನೈರೋಬಿಯಲ್ಲಿ ನಡೆದ ಪಂದ್ಯದಲ್ಲಿ 48 ಓವರ್‌ಗಳಲ್ಲಿ 117 ರನ್‌ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್ ಆಗಿದ್ದು ಈವರೆಗಿನ ಕನಿಷ್ಠ ಮೊತ್ತವಾಗಿತ್ತು. ಇನ್ನು ಒಟ್ಟಾರೆಯಾಗಿ ಮಂಗಳವಾರ ದ. ಆಫ್ರಿಕಾ ಗಳಿಸಿದ ಮೊತ್ತ ಆ ತಂಡದ ಒಟ್ಟಾರೆ 50 ಓವರ್‌ಗಳ ಮಾದರಿಯ 4ನೇ ಕನಿಷ್ಠ ಮೊತ್ತವಾಗಿದೆ.

ದ. ಆಫ್ರಿಕಾ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಭಾರತ
ದಕ್ಷಿಣ ಆಫ್ರಿಕಾ ತಂಡವ ಕೇವಲ 99 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ತಂಡ ಬಳಿಕ ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿತ್ತು. ಈ ಮೊತ್ತವನ್ನು ಭಾರತ ತಂಡ 7 ವಿಕೆಟ್ ಉಳಿಸಿಕೊಂಡು ಮತ್ತು ಎಸೆತಗಳ ವಿಚಾರದಲ್ಲಿ 185 ಎಸೆತಗಳು ಬಾಕಿಯಿರುವಂತೆಯೇ ಗೆದ್ದುಕೊಂಡಿತ್ತು. ಹೀಗಾಗಿ ಏಕದಿನ ದ್ವಿಪಕ್ಷೀಯ ಸರಣಿಯಲ್ಲಿ ಎಸೆತಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಸಾಧಿಸಿದ ಅತ್ಯಂತ ದೊಡ್ಡ ಗೆಲುವು ಇದಾಗಿದೆ. ಇದಕ್ಕೂ ಮುನ್ನ ಸೆಂಚೂರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ 177 ಎಸೆತಗಳನ್ನು ಉಳಿಸಿಕೊಂಡು ಗೆಲುವು ಸಾಧಿಸಿದ್ದು ಭಾರತದ ಬೃಹತ್ ಗೆಲುವಾಗಿತ್ತು.

ಗೆಲುವಿನ ದಾಖಲೆ ಸರಿಗಟ್ಟಿದ ಭಾರತ
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ದೊಡ್ಡ ದಾಖಲೆಯೊಂದನ್ನು ಸರಿಗಟ್ಟಿದ ಸಾಧನೆ ಮಾಡಿದೆ. ಒಂದು ವರ್ಷದಲ್ಲಿ ಎಲ್ಲಾ ಮಾದರಿಯಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿರುವ ಆಸ್ಟ್ರೇಲಿಯಾ ತಂಡದ ದಾಖಲಯನ್ನು ಟೀಮ್ ಇಂಡಿಯಾ ಈ ಮೂಲಕ ಸರಿಗಟ್ಟಿದೆ. ಟೀಮ್ ಇಂಡಿಯಾ ಈ ವರ್ಷ ಈವರೆಗೆ 38 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ. ಈ ಮೂಲಕ 2017ರಲ್ಲಿ 37 ಪಂದ್ಯಗಳನ್ನು ಗೆದ್ದ ತನ್ನದೇ ಸಾಧನೆಯನ್ನು ಹಿಂದಿಕ್ಕಿದೆ. ಇದೀಗ 2003ರಲ್ಲಿ ರಿಕಿ ಪಾಂಟಿಂಗ ನೇತೃತ್ವದ ಆಸ್ಟ್ರೇಲಿಯಾ ತಂಡ 38 ಪಂದ್ಯಗಳನ್ನು ಗೆದ್ದ ಸಾಧನೆಗೆ ಸಮ ಸಾಧನೆಯನ್ನು ಮಾಡಿದೆ ಭಾರತ. ಪಾಂಟಿಂಗ್ ನೇತೃತ್ವದ ಆಸಿಸ್ ಪಡೆ ಅಂದು 30 ಏಕದಿನ ಹಾಗೂ 8 ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications