IND vs SA 3ನೇ ಟಿ20: ಸಂಭಾವ್ಯ ಆಡುವ ಬಳಗ, ಪಿಚ್ ವರದಿ, ಹವಾಮಾನ ವರದಿ ಮತ್ತು ನೇರಪ್ರಸಾರದ ಮಾಹಿತಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 5 ಪಂದ್ಯಗಳ ಟ್ವೆಂಟಿ ಸರಣಿಯಲ್ಲಿ ಸದ್ಯ ಸೆಣಸಾಟವನ್ನು ನಡೆಸುತ್ತಿವೆ. ಹೌದು, ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಕೈಗೊಂಡಿದ್ದು ಈಗಾಗಲೇ ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದು ಎರಡೂ ಪಂದ್ಯಗಳಲ್ಲಿಯೂ ಆತಿಥೇಯ ಭಾರತ ತಂಡಕ್ಕೆ ಸೋಲುಣಿಸಿ 2 - 0 ಅಂತರದ ಮುನ್ನಡೆಯನ್ನು ಸಾಧಿಸಿದೆ.
ಹೀಗೆ ತವರು ನೆಲದಲ್ಲಿಯೇ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಳ್ಳಬೇಕೆಂದರೆ ಉಳಿದಿರುವ ಎಲ್ಲಾ ಪಂದ್ಯಗಳಲ್ಲಿಯೂ ಗೆಲ್ಲಬೇಕಾದ ಅನಿವಾರ್ಯತೆ ಇದ್ದು, ತೃತೀಯ ಟಿ ಟ್ವೆಂಟಿ ಪಂದ್ಯವನ್ನು ಗೆಲ್ಲುವತ್ತ ಸದ್ಯ ಟೀಮ್ ಇಂಡಿಯಾ ಚಿತ್ತ ನೆಟ್ಟಿದೆ. ಅತ್ತ ಆಡಿರುವ 2 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದಿರುವ ದಕ್ಷಿಣ ಆಫ್ರಿಕಾ ಸರಣಿ ಕೈವಶಪಡಿಸಿಕೊಳ್ಳಲು ಉಳಿದ 3 ಪಂದ್ಯಗಳಲ್ಲಿ ಯಾವುದಾದರೊಂದು ಪಂದ್ಯದಲ್ಲಿ ಗೆದ್ದರೂ ಸಾಕಾಗಿದೆ.
ಹೀಗಾಗಿ ಇತ್ತಂಡಗಳು ಈ ಪಂದ್ಯದಲ್ಲಿ ಗೆಲುವನ್ನು ಸಾಧಿಸುವತ್ತ ಚಿತ್ತ ನೆಟ್ಟಿದ್ದರೆ, ಅದರಲ್ಲೂ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇಬೇಕಿರುವ ಟೀಮ್ ಇಂಡಿಯಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿ ಪರಿಣಮಿಸಿದೆ. ಹೀಗೆ ಮಹತ್ವದ ಪಂದ್ಯವಾಗಿ ರೂಪುಗೊಂಡಿರುವ ಈ ಹಣಾಹಣಿಯಲ್ಲಿ ಕಣಕ್ಕಿಳಿಯಬಹುದಾದ ಆಡುವ ಬಳಗಗಳು ಯಾವ ರೀತಿ ಇರಲಿವೆ, ಪಿಚ್ ವರದಿ ಮತ್ತು ಹವಾಮಾನ ವರದಿ ಹೇಗಿರಲಿದೆ ಹಾಗೂ ನೇರ ಪ್ರಸಾರವನ್ನು ವೀಕ್ಷಿಸುವುದು ಹೇಗೆ ಎಂಬುದರ ಕುರಿತಾದ ವಿವರ ಮುಂದೆ ಇದೆ ಓದಿ.

ಪಿಚ್ ವರದಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ತೃತೀಯ ಟಿ20 ಪಂದ್ಯ ವಿಷಾಖಪಟ್ಟಣದ ಡಾ ವೈಎಸ್ ರಾಜಶೇಖರರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲಕರವಾಗಿ ಇರಲಿದೆ ಹಾಗೂ ಹೆಚ್ಚಿನ ರನ್ ಹೊಳೆ ಹರಿಯುವ ಸಾಧ್ಯತೆಗಳಿವೆ. ಹಾಗೂ ಈ ಪಂದ್ಯದಲ್ಲಿ ಟಾಸ್ ಗೆಲ್ಲುವ ನಾಯಕ ಮೊದಲು ಫೀಲ್ಡಿಂಗ್ ಮಾಡಿ ನಂತರ ಚೇಸ್ ಮಾಡುವ ಕಡೆ ಹೆಚ್ಚಿನ ಗಮನ ನೀಡಲಿದ್ದಾನೆ.

ಆಡುವ ಬಳಗಗಳು
ಭಾರತ: ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್
ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಟೆಂಬಾ ಬವುಮಾ (ನಾಯಕ), ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ತಬ್ರೈಜ್ ಶಮ್ಸಿ, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಕಿಯಾ

ಹವಾಮಾನ ವರದಿ ಮತ್ತು ನೇರ ಪ್ರಸಾರದ ಮಾಹಿತಿ
ಪಂದ್ಯದ ದಿನ ವಿಶಾಖಪಟ್ಟಣದಲ್ಲಿ 31° ಸೆಲ್ಸಿಯಸ್ ಉಷ್ಣಾಂಶವಿರಲಿದ್ದು, 80% ಆರ್ದ್ರತೆ ಇರಲಿದೆ ಹಾಗೂ ಗಾಳಿ ಗಂಟೆಗೆ 13 ಕಿಲೋ ಮೀಟರ್ ವೇಗದಲ್ಲಿ ಬೀಸಲಿದ್ದು, ಪಂದ್ಯದ ವೇಳೆ ಮಳೆಯಾಗುವ ಯಾವುದೇ ಸಂಭವವಿಲ್ಲ ಎಂದು ಹವಾಮಾನ ವರದಿ ಹೇಳುತ್ತಿದೆ.
ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಈ ಮೂರನೇ ಟಿ ಟ್ವೆಂಟಿ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್ ಮುಖಾಂತರ ದೂರದರ್ಶನದಲ್ಲಿ ನೇರ ಪ್ರಸಾರ ವೀಕ್ಷಿಸಬಹುದಾಗಿದ್ದು, ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಷನ್ ಮೂಲಕವೂ ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications