
ಕುಸಿದ ದ. ಆಫ್ರಿಕಾ, ಪೀಟರ್ಸನ್ ಆಸರೆ
ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾವನ್ನು ಅಗ್ಗಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರೂ ಅದರ ಲಾಭವನ್ನು ಗಳಿಸಲು ಸಾಧ್ಯವಾಗಲಿಲ್ಲ. ಭಾರತೀಯ ಬೌಲರ್‌ಗಳ ತೀಕ್ಷ್ಣ ದಾಳಿಗೆ ದಕ್ಷಿಣ ಆಫ್ರಿಕಾ ದಾಂಡಿಗರಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲವಾದರು. ಎರಡನೇ ಪಂದ್ಯದ ಹೀರೋ ನಾಯಕ ಡೀನ್ ಎಲ್ಗರ್ ಕೇವಲ 3 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು. ಮಾರ್ಕ್ರಮ್ ಕೂಡ 8 ರನ್‌ಗಳಿಸಿ ಆಟವನ್ನು ಅಂತ್ಯಗೊಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೇಶವ್ ಮಹಾರಾಜ್ 25 ರನ್‌ಗಳ ಕೊಡುಗೆ ನೀಡಿದರು. ಆದರೆ ಕೀಗನ್ ಪೀಟರ್ಸನ್ ಮಾತ್ರ ಟೀಮ್ ಇಂಡಿಯಾ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾದರು.

ವಾನ್‌ಡರ್ ಡುಸ್ಸೆನ, ಬವುವಾ ಜೊತೆ ಪೀಟರ್ಸನ್ ಉತ್ತಮ ಜೊತೆಯಾಟ
ಇನ್ನು ಕೀಗನ್ ಪೀಟರ್ಸನ್ ಟೀಮ್ ಇಂಡಿಯಾ ಬೌಲರ್‌ಗಳ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ವಾನ್ ಡರ್ ಡುಸ್ಸೆನ್ ಜೊತೆಗೆ ಕೀಗನ್ ಪಿಟರ್ಸನ್ ಮಹತ್ವದ 57 ರನ್‌ಗಳ ಜೊತೆಯಾಟವನ್ನು ನೀಡುವ ಮುಲಕ ತಂಡಕ್ಕೆ ನೆರವಾದರು, ಈ ಜೋಡಿಯನ್ನು ಬೂಮ್ರಾ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ನಂತರ ಟೆಂಬಾ ಬವುಮಾ ಹಾಗೂ ಕೀಗನ್ ಪೀಟರ್ಸನ್ ಕೂಡ 49 ರನ್‌ಗಳ ಜೊತೆಯಾಟವನ್ನು ನಿಡುವ ಮೂಲಕ ಮತ್ತೊಮ್ಮೆ ಭಾರತಕ್ಕೆ ಅಡ್ಡಗಾಲಾದರು ಈ ಜೋಡಿಯನ್ನು ಮೊಹಮ್ಮದ್ ಶಮಿ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಕೀಗನ್ ಪೀಟರ್ಸನ್ 166 ಎಸೆತಗಳನ್ನು ಎದುರಿಸಿ 72 ರನ್‌ಗಳನ್ನು ಗಳಸಿ ಬೂಮ್ರಾಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡರು. ಉಳಿದಂತೆ ಯಾವ ಆಟಗಾರ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 210 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಬೂಮ್ರಾಗೆ ಐದು ವಿಕೆಟ್ ಗೊಂಚಲು
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರಿತ್ ಬೂಮ್ರಾ ಅದ್ಭುತವಾದ ಬೌಲಿಂಗ್ ದಾಳಿ ನಡೆಸಿದ್ದಾರೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬೂಮ್ರಾ ಐದು ವಿಕೆಟ್‌ಗಳ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾದ ಈ ವೇಗಿಯ ಬೌಲಿಂಗ್ ದಾಳಿಗೆ ವಿಕೆಟ್ ಒಪ್ಪಿಸಿದ ಐವರು ಆಪ್ರಿಕನ್ ಬ್ಯಾಟರ್‌ಗಳ ಪೈಕಿ ನಾಯಕ ಡೀನ್ ಎಲ್ಗರ್, ಮಾರ್ಕ್ರಮ್ ಹಾಗೂ ಕೀಗನ್ ಪೀಟರ್ಸನ್ ಕೂಡ ಸೇರಿದ್ದಾರೆ. ಉಳಿದಂತೆ ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಒಂದು ವಿಕೆಟ್ ಶಾರ್ದೂಲ್ ಠಾಕೂರ್ ಪಾಲಾಯಿತು.

ಮತ್ತೆ ಆರಂಭಿಕರ ವೈಫಲ್ಯ
ಈ ಪಂದ್ಯದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭಿಕ ಆಘಾತವನ್ನು ಅನುಭವಿಸಿದೆ. ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಈ ಪಂದ್ಯದಲ್ಲಿ ಎರಡನೇ ಬಾರಿಯೂ ಉತ್ತಮ ಆರಂಬವನ್ನು ನಿಡಲು ವಿಫಲವಾದರು. ತಂಡದ ಮೊತ್ತ 24 ರನ್ ಆಗುವಷ್ಟರಲ್ಲಿ ಇಬ್ಬರು ಕೂಡ ಫೆವಿಲಿಯನ್ ಸೇರಿಕೊಂಡರು. ಮಯಾಂಕ್ ಅಗರ್ವಾಲ್ 7 ರನ್‌ಗಳಿಸಿ ಔಟಾದರೆ ಕೆಎಲ್ ರಾಹುಲ್ 10 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಕ್ರೀಸ್‌ನಲ್ಲಿದ್ದು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪೂಜಾತ 9 ರನ್‌ಗಳಿಸಿದ್ದರೆ ನಾಯಕ ಕೊಹ್ಲಿ 14 ರನ್‌ಗಳಿಸಿದ್ದಾರೆ.


Click it and Unblock the Notifications
