IND vs SA: 4ನೇ ಟಿ20 ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿ

ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಸೆಣಸಾಟ ನಡೆಸುತ್ತಿದೆ. ಇತ್ತಂಡಗಳ ನಡುವಿನ ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಮೇಲುಗೈ ಸಾಧಿಸಿದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ಕಳೆದ ಮಂಗಳವಾರ ವಿಶಾಖಪಟ್ಟಣದಲ್ಲಿ ನಡೆದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಸೋತು ಸರಣಿಯಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ಕಂಡಿತು.
ಇತ್ತ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ 48 ರನ್‌ಗಳ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಂಡು ತವರಿನಲ್ಲಿ ಮುಖಭಂಗದಿಂದ ಪಾರಾಗಬೇಕೆಂದರೆ ಉಳಿದ ಎಲ್ಲಾ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸಲೇಬೇಕಾದ ಒತ್ತಡದಲ್ಲಿದೆ. ಅತ್ತ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು, ಮುನ್ನಡೆ ಸಾಧಿಸಿರುವ ದಕ್ಷಿಣ ಆಫ್ರಿಕಾ ಸರಣಿ ವಶಪಡಿಸಿಕೊಳ್ಳಲು ಇನ್ನೊಂದು ಪಂದ್ಯ ಗೆದ್ದರೆ ಸಾಕಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವತ್ತ ಎರಡೂ ತಂಡಗಳೂ ಚಿತ್ತ ನೆಟ್ಟಿದ್ದು, ಗಾಯದ ಸಮಸ್ಯೆಯಿಂದಾಗಿ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದ ಕ್ವಿಂಟನ್ ಡಿ ಕಾಕ್ ಮರಳುವ ಸಾಧ್ಯತೆಗಳಿದ್ದು, ದಕ್ಷಿಣ ಆಫ್ರಿಕಾ ತಂಡ ಮತ್ತಷ್ಟು ಬಲಿಷ್ಟವಾಗಲಿದೆ ಎನ್ನಬಹುದು. ಅತ್ತ ದುಬಾರಿಯಾಗಿರುವ ಅವೇಶ್ ಖಾನ್ ಬದಲಾಗಿ ಅರ್ಷ್ದೀಪ್ ಸಿಂಗ್‌ರನ್ನು ಕಣಕ್ಕಿಳಿಸುವ ಯೋಚನೆಯಲ್ಲಿದೆ ಟೀಮ್ ಇಂಡಿಯಾ. ಹೀಗೆ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಇತ್ತಂಡಗಳಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆಗಳಿದ್ದು, ಎರಡೂ ತಂಡಗಳ ಆಡುವ ಬಳಗ ಯಾವ ರೀತಿ ಇರಲಿದೆ ಹಾಗೂ ಪಂದ್ಯದಲ್ಲಿ ಗೆಲ್ಲಲು ಯಾವ ರೀತಿಯ ಡ್ರೀಮ್ ಟೀಮ್ ರಚಿಸಬೇಕು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಸಂಭಾವ್ಯ ಆಡುವ ಬಳಗಗಳು
ಭಾರತ: 1. ರುತುರಾಜ್ ಗಾಯಕ್ವಾಡ್, 2. ಇಶಾನ್ ಕಿಶನ್, 3. ಶ್ರೇಯಸ್ ಅಯ್ಯರ್, 4. ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), 5. ದಿನೇಶ್ ಕಾರ್ತಿಕ್, 6. ಹಾರ್ದಿಕ್ ಪಾಂಡ್ಯ, 7. ಅಕ್ಸರ್ ಪಟೇಲ್, 8. ಭುವನೇಶ್ವರ್ ಕುಮಾರ್, 9. ಹರ್ಷಲ್ ಪಟೇಲ್, 10. ಯುಜ್ವೇಂದ್ರ ಚಹಾಲ್, 11. ಅವೇಶ್ ಖಾನ್.
ದಕ್ಷಿಣ ಆಫ್ರಿಕಾ: 1. ರೀಜಾ ಹೆಂಡರಿಕ್ಸ್ ( ವಿಕೆಟ್ ಕೀಪರ್ ), 2. ಟೆಂಬಾ ಬವುಮಾ (ನಾಯಕ), 3. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, 4. ಹೆನ್ರಿಚ್ ಕ್ಲಾಸೆನ್ ( ವಿಕೆಟ್ ಕೀಪರ್ )), 5. ಡೇವಿಡ್ ಮಿಲ್ಲರ್, 6. ಡ್ವೈನ್ ಪ್ರಿಟೋರಿಯಸ್, 7. ವೇಯ್ನ್ ಪಾರ್ನೆಲ್, 8 . ಕಗಿಸೊ ರಬಾಡ, 9. ಕೇಶವ್ ಮಹಾರಾಜ್, 10. ತಬ್ರೈಜ್ ಶಮ್ಸಿ, 11. ಅನ್ರಿಚ್ ನಾರ್ಟ್ಜೆ / ಮಾರ್ಕೊ ಜಾನ್ಸೆನ್.

ಡ್ರೀಮ್ ಟೀಮ್ 1
1. ರುತುರಾಜ್ ಗಾಯಕ್ವಾಡ್, 2, ಇಶಾನ್ ಕಿಶನ್, 3 ರಿಷಭ್ ಪಂತ್, 4 ಹಾರ್ದಿಕ್ ಪಾಂಡ್ಯ, 5 ಹೆನ್ರಿಚ್ ಕ್ಲಾಸೆನ್, 6 ಡೇವಿಡ್ ಮಿಲ್ಲರ್, 7 ಭುವನೇಶ್ವರ್ ಕುಮಾರ್ 8 ಕಗಿಸೊ ರಬಾಡ, 9 ಅಕ್ಸರ್ ಪಟೇಲ್, 10 ಪಟೇಲ್, ಚಾಹಲ್, ಯಜ್ವೇಂದ್ರ 11.
ನಾಯಕ: 1 ರಿಷಭ್ ಪಂತ್, 2 ಉಪನಾಯಕ: ರುತುರಾಜ್ ಗಾಯಕ್ವಾಡ್, 3 ವಿಕೆಟ್ ಕೀಪರ್: ಹೆನ್ರಿಚ್ ಕ್ಲಾಸೆನ್.

ಡ್ರೀಮ್ ಟೀಮ್ 2
1 ರುತುರಾಜ್ ಗಾಯಕ್ವಾಡ್, 2 ಇಶಾನ್ ಕಿಶನ್, 3 ರೀಜಾ ಹೆಂಡ್ರಿಕ್ಸ್, 4 ಹಾರ್ದಿಕ್ ಪಾಂಡ್ಯ, 5 ರಿಷಭ್ ಪಂತ್, 6 ದಿನೇಶ್ ಕಾರ್ತಿಕ್, 7 ಭುವನೇಶ್ವರ್ ಕುಮಾರ್, 8 ಅವೇಶ್ ಖಾನ್, 9 ತಬ್ರೈಜ್ ಶಮ್ಸಿ, 10 ಯುಜ್ವೇಂದ್ರ ಚಾಹಲ್, 11 ಹರ್ಷಲ್ ಪಟೇಲ್.
ನಾಯಕ: ರಿಷಭ್ ಪಂತ್, ಉಪನಾಯಕ: ಇಶಾನ್ ಕಿಶನ್, ವಿಕೆಟ್ ಕೀಪರ್: ರಿಷಭ್ ಪಂತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications