Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA: ಭಾರತದ ವಿರುದ್ಧದ ಸರಣಿಗೂ ಮುನ್ನ ಆಫ್ರಿಕಾಕ್ಕೆ ಪೆಟ್ಟು, ಸ್ಟಾರ್ ವೇಗಿ ಔಟ್!

ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಬೆಳೆಸಲಿದೆ. ಉಭಯ ತಂಡಗಳ ನಡುವಿನ ಟಿ20 ಸರಣಿ ಆರಂಭಕ್ಕೂ ಮುನ್ನವೇ ಆತಿಥೇಯ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ತಂಡದ ಪ್ರಮುಖ ವೇಗದ ಬೌಲರ್ ಲುಂಗಿ ಎನ್‌ಗಿಡಿ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ.

ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಲುಂಗಿ ಎನ್‌ಗಿಡಿ ಅವರನ್ನು ದಕ್ಷಿಣ ಆಫ್ರಿಕಾ ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನದಲ್ಲಿ ಬ್ಯೂರಾನ್ ಹೆಂಡ್ರಿಕ್ಸ್ ತಂಡಕ್ಕೆ ಎಂಟ್ರಿ ಪಡೆದಿದ್ದಾರೆ. ಲುಂಗಿ ಎನ್‌ಗಿಡಿ ಅವರು ಎಡ ಪಾದದ ಗಾಯದಿಂದಾಗಿ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಅವರು ಫಿಟ್ ಆಗುವ ಸಾಧ್ಯತೆ ಇದೆ.

IND vs SA: A shock to South Africa ahead of the T20 series against India

ಲುಂಗಿ ಎನ್‌ಗಿಡಿ ಹೊರಗುಳಿದ ನಂತರ ದಕ್ಷಿಣ ಆಫ್ರಿಕಾ ತಂಡವನ್ನು 33 ವರ್ಷದ ಬೈರಾನ್ ಹೆಂಡ್ರಿಕ್ಸ್ ಎರಡು ವರ್ಷಗಳ ನಂತರ ಸೇರಿಕೊಂಡಿದ್ದಾರೆ. ಅವರು ಕೊನೆಯ ಬಾರಿಗೆ ಜುಲೈ 2021 ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಆಡಿದ್ದರು. ಈ ಎಡಗೈ ವೇಗದ ಬೌಲರ್ ಇದುವರೆಗೆ ಒಂದು ಟೆಸ್ಟ್, ಎಂಟು ODIಗಳು ಮತ್ತು 19 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹೆಂಡ್ರಿಕ್ಸ್ ಅವರ ದಾಖಲೆಯು ಸರಾಸರಿಯಾಗಿದೆ. ಅವರು 19 ಪಂದ್ಯಗಳಲ್ಲಿ 25ರ ಸರಾಸರಿಯಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದಾರೆ.

ಭಾರತ ವಿರುದ್ಧದ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತನ್ನ ಪ್ರಮುಖ ಬೌಲರ್ ಕಗಿಸೊ ರಬಾಡಗೆ ವಿಶ್ರಾಂತಿ ನೀಡಿದೆ. ಈಗ ಲುಂಗಿ ಎನ್‌ಗಿಡಿ ಔಟಾದ ನಂತರ, ಆತಿಥೇಯ ತಂಡದ ವೇಗದ ಬೌಲಿಂಗ್ ದಾಳಿಗೆ ಸ್ವಲ್ಪ ಪೆಟ್ಟು ಬಿದ್ದಿದೆ. ಈಗ ಈ ತಂಡದಲ್ಲಿ ವೇಗದ ಬೌಲಿಂಗ್ ದಾಳಿಯ ಜವಾಬ್ದಾರಿಯನ್ನು ಜೆರಾಲ್ಡ್ ಕೊಯೆಟ್ಜಿ, ನಾಂಡ್ರೆ ಬರ್ಗರ್, ಓಟ್ನಿಯಲ್ ಬಾರ್ಟ್‌ಮನ್ ಮತ್ತು ಲಿಝಾರ್ಡ್ ವಿಲಿಯಮ್ಸ್ ಹೊರಲಿದ್ದಾರೆ. ಈ ನಾಲ್ವರು ವೇಗದ ಬೌಲರ್‌ಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವ ಕಡಿಮೆ ಇದೆ.

IND vs SA: A shock to South Africa ahead of the T20 series against India

ಡಿ.10 ರಿಂದ ಸರಣಿ ಆರಂಭ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಡಿಸೆಂಬರ್ 10 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಡರ್ಬನ್‌ನಲ್ಲಿ ನಡೆಯಲಿದೆ. ಇದಾದ ನಂತರ ಡಿಸೆಂಬರ್ 12 ರಂದು ಗ್ಕೆಬರ್ಹಾ ಮತ್ತು ಡಿಸೆಂಬರ್ 14 ರಂದು ಜೋಹಾನ್ಸ್ ಬರ್ಗ್ ನಲ್ಲಿ ಟಿ20 ಪಂದ್ಯಗಳು ನಡೆಯಲಿವೆ. ಇದಾದ ಎರಡು ದಿನಗಳ ನಂತರ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದು ಡಿಸೆಂಬರ್ 17 ರಿಂದ 21 ರವರೆಗೆ ನಡೆಯಲಿದೆ. ಡಿಸೆಂಬರ್ 26 ರಿಂದ ಈ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪರ್ಧಿಸಲಿವೆ.

Story first published: Saturday, December 9, 2023, 9:03 [IST]
Other articles published on Dec 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+