For Quick Alerts
ALLOW NOTIFICATIONS  
For Daily Alerts
 

ಈತನಿಂದ ಪಂತ್ ಸ್ಥಾನಕ್ಕೆ ಖಂಡಿತಾ ಕುತ್ತು: ಯುವ ಆಟಗಾರನನ್ನು ಹೊಗಳಿದ ದ. ಆಫ್ರಿಕಾ ದಿಗ್ಗಜ

 Ind vs SA: Dale Steyn praises Ishan Kishan said Rishabh Pant should be worried

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಅಂತ್ಯವಾಗಿದೆ. ಈ ಸರಣಿಯಲ್ಲಿ ಶಿಖರ್ ಧವನ್ ನೇತೃತ್ವದಲ್ಲಿ ದ್ವಿತೀಯ ದರ್ಜೆಯ ಆಟಗಾರರ ಪಡೆಯೊಂದಿಗೆ ಭಾರತ ತಂಡ ಕಣಕ್ಕಿಳಿದಿದ್ದರೂ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಭಾರತ ರೋಚಕ ಹೋರಾಟ ನಡೆಸಿ ಸೋಲು ಅನುಭವಿಸಿದರೂ ಎರಡು ಹಾಗೂ ಮೂರನೇ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಭಾರತ ಏಕದಿನ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಈ ಸರಣಿಯಲ್ಲಿ ಭಾರತ ತಂಡದ ಯುವ ಆಟಗಾರನ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಹರ್ಷ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೈನ್ ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಇಶಾನ್ ಕಿಶನ್ ಅವರ ಈ ಪ್ರದರ್ಶನ ರಿಷಭ್ ಪಂತ್ ಸ್ಥಾನಕ್ಕೆ ಕುತ್ತು ತರಬಲ್ಲದು ಎಂದಿದ್ದಾರೆ.

ಸರಣಿಯಲ್ಲಿ ಮಿಂಚಿದ ಯುವ ಆಟಗಾರರು: ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯಲ್ಲಿ ಭಾರತದ ತಂಡದ ಪ್ರಮುಖ ಆಟಗಾರರು ಸ್ಥಾನ ಪಡೆಯದ ಕಾರಣಯುವ ಆಟಗಾರರು ಅವಕಾಶವನ್ನು ಪಡೆದುಕೊಂಡಿದ್ದಾರೆ. ಈ ಅವಕಾಶವನ್ನು ಕೆಲ ಆಟಗಾರರು ಎರಡೂ ಕೈಗಳಿಂದ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ಶ್ರೇಯಸ್ ಐಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಈ ಸರಣಿಯಲ್ಲಿ ಮಿಂಚಿದ್ದು ತಂಡದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇಶಾನ್ ಕಿಶನ್ ಬಗ್ಗೆ ಭಾರೀ ಪ್ರಶಂಸೆ: ಈ ಸಂದರ್ಭದಲ್ಲಿ ದಕ್ಷಿಣ ಡೇಲ್ ಸ್ಟೇಯ್ನ್ ಇಶಾನ್ ಕೀಶನ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತದ ಈ ಯುವ ಆಟಗಾರ ರಿಷಭ್ ಪಂತ್ ಸ್ಥಾನಕ್ಕೆ ಕುತ್ತು ತರಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ. ಅಲ್ಲದೆ ಇಶಾನ್ ಕಿಶನ್ ಅವರನ್ನು ರಾಕ್‌ಸ್ಟಾರ್ ಎಂದಿದ್ದಾರೆ ಡೇಲ್ ಸ್ಟೇಯ್ನ್.

"ಖಂಡಿತವಾಗಿಯೂ ಅತ ಅದ್ಭುತ ಆಟಗಾರ. ಕೆಲ ವರ್ಷಗಳ ಹಿಂದೆ ಆತನೊಂದಿಗೆ ನಾನು ಆಟವಾಡಿದ್ದೆ. ಆತ ಮಗುವಿನ ರೀತಿ ಕಾಣಿಸುತ್ತಿದ್ದ. ಆತನನ್ನು ನಾವು ಜಸ್ಟಿನ್ ಬೈಬರ್ ಎಂದು ಕರೆಯುತ್ತಿದ್ದೆವು,. ಯಾಕೆಂದರೆ ಆತನೋರ್ವ ನಿಜವಾದ ರಾಕ್‌ಸ್ಟಾರ್. ಆತನ ಆಟವನ್ನು ನಾನು ನೋಡಿಕೊಂಡು ಬರುತ್ತಿದ್ದು ಸಾಕಷ್ಟು ಬೆಳವಣಿಗೆ ಕಂಡಿದ್ದೇನೆ" ಎಂದಿದ್ದಾರೆ.

ಕಿಶನ್ ಎರಡನೇ ಏಕದಿನ ಪಂದ್ಯದಲ್ಲಿ 84 ಎಸೆತಗಳಲ್ಲಿ 93 ರನ್ ಗಳಿಸಿ ಮಿಂಚಿದ್ದಲ್ಲದೆ ಆ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದಾರೆ. ಆಟದಲ್ಲಿ ಶ್ರೇಯಸ್ ಅಯ್ಯರ್ ಅವರೊಂದಿಗಿನ ಅದ್ಭುತ ಜೊತೆಯಾಟವಾಡಿದ್ದು ಮಿಂಚಿದ್ದಾರೆ.

Story first published: Wednesday, October 12, 2022, 18:57 [IST]
Other articles published on Oct 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+