For Quick Alerts
ALLOW NOTIFICATIONS  
For Daily Alerts
 

IND vs SA: ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ, ಈತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದು ಅನುಮಾನ!; ಕಾರಣವೇನು?

ಡಿಸೆಂಬರ್ 10ರಿಂದ ಆರಂಭವಾಗಲಿರುವ ಬಹು-ಮಾದರಿಯ ಸರಣಿಗಾಗಿ ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಗುರುವಾರ, ನವೆಂಬರ್ 30ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ.

ಮುಂಬರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿ ಗಮನದಲ್ಲಿಟ್ಟುಕೊಂಡು, ಟಿ20 ಸರಣಿಗೆ ಯುವ ಆಟಗಾರರನ್ನು ಪ್ರಕಟಿಸಿದ್ದರೆ, ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ವೈಟ್‌ಬಾಲ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

IND vs SA: Deepak Chahar Is Doubtful for South Africa Tour Due To a Family Emergency

ಡಿಸೆಂಬರ್ 10ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸಲಿದ್ದರೆ, ಮೂರು ಏಕದಿನ ಪಂದ್ಯಗಳಿಗೆ ಕೆಎಲ್ ರಾಹುಲ್ ನಾಯಕತ್ವ ವಹಿಸಲಿದ್ದಾರೆ. ಅಂತಿಮವಾಗಿ ಸೆಂಚೂರಿಯನ್ (ಡಿಸೆಂಬರ್ 26ರಿಂದ) ಮತ್ತು ಕೇಪ್ ಟೌನ್ (ಜನವರಿ 3ರಿಂದ) ನಲ್ಲಿ ನಡೆಯುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ.

ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ, ಕುಟುಂಬ ತುರ್ತುಪರಿಸ್ಥಿತಿಯ ಕಾರಣದಿಂದ ವೇಗಿ ದೀಪಕ್ ಚಹಾರ್ ಅವರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದು ಅನುಮಾನವೆನಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಐದನೇ ಟಿ20 ಪಂದ್ಯಕ್ಕೂ ಮುನ್ನ ದೀಪಕ್ ಚಹಾರ್ ಅವರು ತಮ್ಮ ಅನಾರೋಗ್ಯದ ತಂದೆಯ ಪಕ್ಕದಲ್ಲಿರಲು ಭಾರತೀಯ ತಂಡದಿಂದ ವಿನಾಯಿತಿ ಪಡೆದರು.

ವೈಟ್-ಬಾಲ್ ಸರಣಿಗಾಗಿ ಬಲಗೈ ವೇಗಿಯನ್ನು ಭಾರತ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ತನ್ನ ತಂದೆಯ ಆರೋಗ್ಯ ಸುಧಾರಿಸಿದರೆ ಮಾತ್ರ ಅವರು ರೇನ್ ಬೋ ರಾಷ್ಟ್ರಕ್ಕೆ ಆಡಲು ಪ್ರಯಾಣಿಸಬಹುದು ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ.

ದೀಪಕ್ ಚಹಾರ್ ತನ್ನ ತಂದೆಯ ಪಕ್ಕದಲ್ಲಿರಲು ಬೆಂಗಳೂರಿನಲ್ಲಿ ಐದನೇ ಮತ್ತು ಅಂತಿಮ ಟಿ20 ಪಂದ್ಯದಿಂದ ಹೊರಗುಳಿಯಲು ಅನುಮತಿ ಪಡೆದರು. ಅವರ ತಂದೆ ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಆಸ್ಟ್ರೇಲಿಯಾ ವಿರುದ್ಧದ ಐದನೇ ಪಂದ್ಯವನ್ನು ಏಕೆ ತಪ್ಪಿಸಿಕೊಂಡರು ಎಂದು ಕೇಳಿದಾಗ, ದೀಪಕ್ ಚಹಾರ್ ತನ್ನ ತಂದೆಯ ಸ್ಥಿತಿ ಸುಧಾರಿಸಿದೆ ಎಂದು ಬಹಿರಂಗಪಡಿಸಿದರು. ಅವರ ತಂದೆ ಉತ್ತಮವಾಗಿ ಚೇತರಿಸಿಕೊಳ್ಳುವವರೆಗೆ ಭಾರತದಲ್ಲೇ ಉಳಿಯುವ ಬಯಕೆಯನ್ನು ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಆಯ್ಕೆಗಾರರಿಗೆ ತಿಳಿಸಿದ್ದೇನೆ ಎಂದು ವೇಗಿ ಹೇಳಿದರು.

'ಸದ್ಯ ಪರಿಸ್ಥಿತಿ ಉತ್ತಮವಾಗಿದೆ'

"ನಾವು ಸಮಯಕ್ಕೆ ಸರಿಯಾಗಿ ತಂದೆಯನ್ನು ಆಸ್ಪತ್ರೆಗೆ ಸೇರಿಸಿದೆವು. ಇಲ್ಲದಿದ್ದರೆ, ಇದು ಅಪಾಯಕಾರಿಯಾಗಬಹುದಿತ್ತು. ಸದ್ಯಕ್ಕೆ ಅವರ ಸ್ಥಿತಿ ಉತ್ತಮವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯವನ್ನು ನಾನೇಕೆ ಆಡಲಿಲ್ಲ ಎಂದು ಜನರು ಕೇಳುತ್ತಿದ್ದರು. ನನಗೆ, ನನ್ನ ತಂದೆ ಬಹಳ ಮುಖ್ಯ. ಅವರು ನನ್ನನ್ನು ಆಟಗಾರನನ್ನಾಗಿ ಮಾಡಿದರು. ನಾನು ಅವರನ್ನು ಈ ಸ್ಥಿತಿಯಲ್ಲಿ ಬಿಡಲು ಸಾಧ್ಯವಿಲ್ಲ ಮತ್ತು ಎಲ್ಲಿಯೂ ಹೋಗಲು ಸಾಧ್ಯವಿಲ್ಲ," ಎಂದು ದೀಪಕ್ ಚಹಾರ್ ತಿಳಿಸಿದರು.

ಈ ಕಾರಣದಿಂದಾಗಿ ದೀಪಕ್ ತಮ್ಮ ತಂದೆಯ ಪಕ್ಕದಲ್ಲಿ ಉಳಿಯಲು ನಿರ್ಧರಿಸಿದ್ದಾರೆ ಮತ್ತು ಅವರ ತಂದೆ ಚೇತರಿಸಿಕೊಂಡ ಬಳಿಕ, ದಕ್ಷಿಣ ಆಫ್ರಿಕಾಕ್ಕೆ ವಿಮಾನವನ್ನು ಏರಲಿದ್ದಾರೆ. ತಾನು ತನ್ನ ಕ್ರಿಕೆಟ್ ವೃತ್ತಿಜೀವನವನ್ನು ನನ್ನ ತಂದೆಗೆ ಋಣಿಯಾಗಿರುತ್ತೇನೆ ಎಂದು ಹೇಳಿದರು. ದೀಪಕ್ ಚಹಾರ್ ಇತ್ತೀಚೆಗೆ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಭಾರತ ತಂಡಕ್ಕೆ ಪುನರಾಗಮನ ಮಾಡಿದ್ದರು.

Story first published: Wednesday, December 6, 2023, 10:09 [IST]
Other articles published on Dec 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+