ಕೇಪ್ ಟೌನ್ ಟೆಸ್ಟ್ ನ ಮೊದಲ ದಿನವೂ ಬೌಲರ್ ಗಳ ಪ್ರಾಬಲ್ಯ ಮುಂದುವರಿದಿದೆ. ಭಾರತ ತಂಡ 153 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಂ ಇಂಡಿಯಾ 98 ರನ್‌ಗಳ ಮುನ್ನಡೆ ಸಾಧಿಸಿದೆ.
ಭಾರತದ ಐದನೇ ಬ್ಯಾಟ್ಸ್‌ಮನ್ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದಾಗ, ತಂಡದ ಸ್ಕೋರ್ 153 ರನ್ ಆಗಿತ್ತು. ಆದರೆ ನಂತರದ 5 ಬ್ಯಾಟ್ಸ್‌ಮನ್‌ಗಳು 1 ರನ್ ಸೇರಿಸಲು ಸಾಧ್ಯವಾಗಲಿಲ್ಲ. ಭಾರತದ ಕೊನೆಯ 6 ಬ್ಯಾಟ್ಸ್‌ಮನ್‌ಗಳು ಕೇವಲ 11 ಎಸೆತಗಳಲ್ಲಿ ಪೆವಿಲಿಯನ್‌ಗೆ ಮರಳಿದರು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ, ಲುಂಗಿ ಎನ್‌ಗಿಡಿ ಮತ್ತು ನಾಂದ್ರೆ ಬರ್ಗರ್ ತಲಾ 3 ವಿಕೆಟ್ ಪಡೆದರು. ಆದರೆ ಪ್ರಸಿದ್ಧ್ ಕೃಷ್ಣ ರನ್ ಔಟ್ ಆದ ನಂತರ ಪೆವಿಲಿಯನ್‌ಗೆ ಮರಳಿದರು.
ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರು ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 46 ರನ್ ಗಳಿಸಿದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ 50 ಎಸೆತಗಳಲ್ಲಿ 39 ರನ್ ಗಳಿಸಿದರು. ಶುಭಮನ್ ಗಿಲ್ 36 ರನ್ ಕೊಡುಗೆ ನೀಡಿದರು. ಭಾರತ ತಂಡದ 7 ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯಲು ವಿಫಲರಾದರು. ಆದರೆ ಕೇವಲ 3 ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ದಾಟಿದರು.

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಮುಖೇಶ್ ಕುಮಾರ್ 1ಸೊನ್ನೆ ಸುತ್ತಿದ್ದರು.
ದಕ್ಷಿಣ ಆಫ್ರಿಕಾದ 55 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್‌ಗೆ ಬಂದ ಟೀಂ ಇಂಡಿಯಾಗೆ ಉತ್ತಮ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟಾದರು. ಇದರ ನಂತರ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ವೇಗವಾಗಿ ರನ್ ಸೇರಿಸಿದರು. ಇದಾದ ನಂತರ ವಿರಾಟ್ ಕೊಹ್ಲಿ ಜವಾಬ್ದಾರಿ ವಹಿಸಿಕೊಂಡರು, ಆದರೆ ನಂತರ ಪಟಪಟನೆ ಬಿದ್ದ ವಿಕೆಟ್‌ಗಳು ನಿರಾಸೆಯನ್ನು ಮೂಡಿಸಿದವು.

153 ರನ್‌ಗಳಾಗುವಷ್ಟರಲ್ಲಿ ಭಾರತಕ್ಕೆ ಆರು ವಿಕೆಟ್ ಕಳೆದುಕೊಂಡಿತು. ಆ ವೇಳೆ ಕೆಎಲ್ ರಾಹುಲ್ ಔಟ್ ಆಗಿ ನಿರಾಸೆ ಮೂಡಿಸಿದ್ದರು. ಕೆಎಲ್ ರಾಹುಲ್ ಅವರನ್ನು ಲುಂಗಿ ಎನ್‌ಗಿಡಿ ಔಟ್ ಮಾಡಿದ್ದರು. ಆದರೆ ನಂತರದ 5 ಬ್ಯಾಟ್ಸ್‌ಮನ್‌ಗಳು 1 ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರತದ ಇನ್ನಿಂಗ್ಸ್ ಕೇವಲ 153 ರನ್‌ಗಳಿಗೆ ಕುಸಿಯಿತು. ಆದರೆ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 98 ರನ್‌ಗಳ ಮಹತ್ವದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.