ಭಾರತ vs ದ. ಆಫ್ರಿಕಾ: ಅನುಭವಿ ಆಟಗಾರನನ್ನು ಕಡೆಗಣಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಮೊಹಮ್ಮದ್ ಕೈಫ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭವಾಗಲಿದ್ದು ಈ ಸರಣಿಯ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ ಅವರಂತಾ ಆಟಗಾರರಿಗೆ ವಿಶ್ರಾಂತಿ ನೀಡಿರುವ ಈ ಸರಣಿಯಲ್ಲಿ ಕೆಲ ಯುವ ಆಟಗಾರರು ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಸರಣಿಯಲ್ಲಿ ಓರ್ವ ಅನುಭವಿ ಆಟಗಾರನನ್ನು ಕಡೆಗಣಿಸಿರುವುದಕ್ಕೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಕೈಫ್ ಸ್ಪೋರ್ಟ್ಸ್ ಕೀಡಾ ಜೊತೆಗೆ ಮಾತನಾಡಿದ್ದು ಈ ಸಂದರ್ಭದಲ್ಲಿ ಭಾರತೀಯ ತಂಡದಲ್ಲಿ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್‌ಗೆ ಅವಕಾಶ ನೀಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದರೆ ತಂಡದ ಸಮತೋಲನಕ್ಕೆ ಸಹಾಯವಾಗುತ್ತಿತ್ತು. ಆತ ಬೌಲಿಂಗ್‌ನ ಜೊತೆಗೆ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ಕೊಡುಗೆ ನೀಡುವ ಸಾಮರ್ಥ್ಯವಿರುವ ಆಟಗಾರ ಎಂದಿದ್ದಾರೆ ಮೊಹಮ್ಮದ್ ಕೈಫ್.

ಆರ್ ಅಶ್ವಿನ್‌ಗೆ ಅವಕಾಶ ನೀಡಬೇಕಿತ್ತು
"ಮೊಹಮದ್ ಕೈಫ್ ಆಯ್ಕೆಯಾಗದಿರುವುದು ನಿಜಕ್ಕೂ ಬೇಸರ ಮೂಡಿಸುತ್ತದೆ. ಅವರು ಕಳೆದ ವರ್ಷದ ಟಿ20 ವಿಶ್ವಕಪ್‌ನ ತಂಡದಲ್ಲಿದ್ದರು. ಅವರ ಈಗಿನ ಫಾರ್ಮ್ ಕೂಡ ಅದ್ಭುತವಾಗಿದೆ. ಒಬ್ಬ ಲೆಗ್ ಸ್ಪಿನ್ನರ್‌ನನ್ನು ಕೈಬಿಟ್ಟು ಅಶ್ವಿನ್‌ಗೆ ಅವಕಾಶ ನೀಡಬಹುದಾಗಿತ್ತು" ಎಂದಿದ್ದಾರೆ ಮೊಹಮ್ಮದ್ ಕೈಫ್. ದಕ್ಷಿಣ ಆಫ್ರಿಕಾ ವಿರುದ್ಧಧ ಸರಣಿಗೆ ಮೂವರು ಲೆಗ್ ಅ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಗಿದೆ. ಅದರ ಬದಲಿಗೆ ಓರ್ವ ಲೆಗ್ ಸ್ಪಿನ್ನರ್‌ನನ್ನು ಕೈಬಿಟ್ಟು ಆರ್ ಅಶ್ವಿನ್‌ಗೆ ಸ್ಥಾನ ನೀಡಬಹುದಾಗಿತ್ತು ಎಂಬುದು ಕೈಪ್ ಅಭಿಪ್ರಾಯ.

ಐಪಿಎಲ್‌ನಲ್ಲಿ ಮಿಂಚಿದ್ದ ಅಶ್ವಿನ್
ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾಗಿರುವ ಐಪಿಎಲ್‌ನಲ್ಲಿಯೂ ಆರ್ ಅಶ್ವಿನ್ ಪ್ರದರ್ಶನ ಉತ್ತಮವಾಗಿತ್ತು. ಬೌಲಿಂಗ್‌ನ ಜೊತೆಗೆ ಅಶ್ವಿನ್ ಬ್ಯಾಟಿಂಗ್‌ನಲ್ಲಿಯೂ ಗಮನಸೆಳೆದಿದ್ದರು ಎಂಬುದು ಮಹತ್ವದ ಅಂಶ. ಆಡಿದ 17 ಪಂದ್ಯಗಳಲ್ಲಿ 12 ವಿಕೆಟ್ ಪಡೆದ ಆರ್ ಅಶ್ವಿನ್ ಬ್ಯಾಟಿಂಗ್‌ನಲ್ಲಿ 191 ರನ್‌ಗಳನ್ನು ಗಳಿಸಿದ್ದಾರೆ.

ಯುವ ಆಟಗಾರರಿಗೆ ಅದ್ಭುತ ಅವಕಾಶ
ಇನ್ನು ದಕ್ಷಿಣ ಆಫ್ರಿಕಾ ತಂಡ ತನ್ನ ಬಲಿಷ್ಠ ತಂಡದೊಂದಿಗೆ ಭಾರತಕ್ಕೆ ಆಗಮಿಸಿದ್ದರೆ ಭಾರತ ತಂಡದಲ್ಲಿ ಹೆಚ್ಚಾಗಿ ಯುವ ಆಟಗಾರರೇ ತುಂಬಿದ್ದಾರೆ. ಬಲಿಷ್ಠ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಯುವ ಆಟಗಾರರು 2022ರ ಟಿ20 ವಿಶ್ವಕಪ್‌ನಲ್ಲಿ ಆಯ್ಕೆಯಾಗುವ ಪ್ರಯತ್ನವನ್ನು ನಡೆಸಬಹುದು ಎಂದಿದ್ದಾರೆ ಕೈಫ್. ಭಾರತದ ಯುವ ಆಟಗಾರರು ಬಲಿಷ್ಠವಾಗಿರುವ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುತ್ತಿರುವ ಕಾರಣ ತಮ್ಮ ನೈಜ ಸಾಮರ್ಥ್ಯ ಪ್ರದರ್ಶನಕ್ಕೆ ಅದ್ಭುತ ಅವಕಾಶ ಎಂದಿದ್ದಾರೆ ಮೊಹಮ್ಮದ್ ಕೈಫ್.

ಆಟಗಾರರ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ
ದಕ್ಷಿಣ ಆಫ್ರಿಕಾ ತಂಡದ ಅನೇಕ ಆಟಗಾರರು ಐಪಿಎಲ್ 2022ರ ಭಾಗವಾಗಿದ್ದರು. ಅವರು ಸಾಕಷ್ಟು ಪಂದ್ಯಗಳನ್ನು ಆಡಿರುವ ಕಾರಣ ಉತ್ತಮ ಲಯದಲ್ಲಿದ್ದಾರೆ. ಇಂಥಾ ಬಲಿಷ್ಠ ತಂಡದ ವಿರುದ್ಧ ಒತ್ತಡದ ಸಂದರ್ಭದಲ್ಲಿ ಯುವ ಆಟಗಾರರು ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಇದು ಉತ್ತಮ ಅವಕಾಶವಾಗಿದೆ. ಅಲ್ಲದೆ ಮುಂಬರುವ ಟಿ20 ವಿಶ್ವಕಪ್‌ಗೆ ಆಟಗಾರರ ಸಾಮರ್ಥ್ಯವನ್ನು ನಿರ್ಣಯಿಸಲು ಈ ಸರಣಿಯ ಐದು ಪಂದ್ಯಗಳು ಆಯ್ಕೆಗಾರರಿಗೆ ಸಹಾಯ ಮಾಡುತ್ತದೆ ಎಂದು ಕೈಫ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications