ವಿರಾಟ್ ಕೂಡ ಹೆಚ್ಚೇನೂ ರನ್ ಬಾರಿಸಿಲ್ಲ: ಕೊಹ್ಲಿಯತ್ತ ಬೊಟ್ಟು ಮಾಡಿ ರಹಾನೆ, ಪೂಜಾರಗೆ ಬೆಂಬಲ ನೀಡಿದ ನೆಹ್ರಾ

ಭಾರತೀಯ ಟೆಸ್ಟ್ ತಂಡದ ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಅತ್ಯಂತ ಕಳಪೆ ಫಾರ್ಮ್ ಮುಂದುವರಿದಿದೆ. ಮತ್ತೆ ಮತ್ತೆ ಅವಕಾಶ ದೊರೆತರೂ ಈ ಇಬ್ಬರು ಆಟಗಾರರ ಸತತವಾಗಿ ವಿಫಲವಾಗುತ್ತಿರುವುದು ತಂಡದ ಇತರ ಆಟಗಾರರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಯುವ ಪ್ರತಿಭಾನ್ವಿತ ಆಟಗಾರರ ಅವಕಾಶಕ್ಕಾಗಿ ಕಾದುಕುಳಿತಿದ್ದು ಅವರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಜೋರಾಗುತ್ತಿದೆ. ಹಲವು ಕ್ರಿಕೆಟ್ ಪಂಡಿತರು ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು ಪೂಜಾರ ಹಾಗೂ ರಹಾನೆ ಫಾರ್ಮ್ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಈ ಇಬ್ಬರು ಅನುಭವಿಗಳಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಕೇವಲ ಪೂಜಾರ ಹಾಗೂ ರಹಾನೆ ಬ್ಯಾತ್ರವೇ ರನ್ ಬರುತ್ತಿಲ್ಲ ಎಂದಲ್ಲ. ವಿರಾಟ್ ಕೊಹ್ಲಿ ಕೂಡ ರನ್‌ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ಆಶಿಶ್ ನೆಹ್ರಾ ತಂಡದ ನಾಯಕನನ್ನು ಮುಂದಿಟ್ಟು ಈ ಇಬ್ಬರು ಅನುಭವಿಗಳ ಮೇಲಿನ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಕ್ರಿಕೆಟಿಗ ಆಶಶ್ ನೆಹ್ರಾ ಭಾರತ ತಂಡದ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಅವರ ಕಳಪೆ ಫಾರ್ಮ್ ಬಗ್ಗೆ ಮಾತ್ರವೇ ಟೀಖೆಯನ್ನು ಮಾಡುತ್ತಿರುವುದಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚಿನ ರನ್‌ಗಳಿಸುತ್ತಿಲ್ಲ. ಆದರೆ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ ಎಂದಿದ್ದಾರೆ ಆಶಿಶ್ ನೆಹ್ರಾ.

ಕೊಹ್ಲಿ ಅಂಕಿಅಂಶ ಕೂಡ ಹೀಗೆಯೇ ಇದೆ
"ವಿರಾಟ್ ಕೊಹ್ಲಿ ಕೂಡ ಇದೇ ರೀತಿಯ ಅಂಕಿಅಂಶಗಳನ್ನು ಹೊಂದಿದ್ದಾರೆ. ಆದರೆ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ. ಖಂಡಿತ ವಿರಾಟ್ ಕೊಹ್ಲಿ ತಂಡದ ನಾಯಕನಾಗಿದ್ದಾರೆ ಮತ್ತು ಈ ಇಬ್ಬರು ಆಟಗಾರರ ಸಾಧನೆಗಿಂತಲೂ ಮಹತ್ತರವಾದ ಸಾಧನೆಯನ್ನು ವಿರಾಟ್ ಕೊಹ್ಲಿ ಮಾಡಿದ್ದಾರೆ. ಅವುಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ. ಆದರೆ ರಹಾನೆ ಹಾಗೂ ಪೂಜಾರ ಕೂಡ ತಮ್ಮ ಫಾರ್ಮ್‌ನ ಅತ್ಯುನ್ನತ ದಿನಗಳಲ್ಲಿ ಅದ್ಭುತವಾದ ಆಟವನ್ನು ಪ್ರದರ್ಶಿಸಿದ್ದಾರೆ" ಎಂದು ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಅಜಿಂಕ್ಯಾ ರಹಾನೆ ಹಾಗೂ ಪುಜಾರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಬದಲಾವಣೆ ಮಾಡಿದರೆ ತಂಡಕ್ಕೆ ಹಿನ್ನಡೆ
ಇನ್ನು ಈ ಸಂದರ್ಭದಲ್ಲಿ ಮುಂದುವರಿದು ಮಾತನಾಡಿದ ನೆಹ್ರಾ, ಪ್ರಮುಖ ಸರಣಿಯೊಂದರ ಮಧ್ಯದಲ್ಲಿ ಆಟಗಾರರನ್ನು ಕೈಬಿಟ್ಟು ತಂಡವನ್ನು ಬದಲಾವಣೆ ಮಾಡಿದರೆ ಅದು ತಂಡದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ಕೂಡ ಹೇಳಿದ್ದಾರೆ ಆಶಿಶ್ ನೆಹ್ರಾ. "ರಹಾನೆ ಅವರಂತಾ ಆಟಗಾರನಿಗೆ ನೀವು ಮೊದಲ ಪಂದ್ಯದಲ್ಲಿ ಬೆಂಬಲವನ್ನು ನೀಡಿದ್ದರೆ ಸರಣಿಯ ಉಳಿದ ಪಂದ್ಯಗಳಲ್ಲಿಯೂ ಅವರನ್ನು ಮುಂದುವರಿಸಿಕೊಂಡು ಹೋಗುವುದು ಉತ್ತಮ" ಎಂದು ನೆಹ್ರಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬದಲಾವಣೆ ಮಾಡುವುದು ದೊಡ್ಡ ನಿರ್ಧಾರ
"ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಪ್ರಮುಖ ಸರಣಿಯೊಂದರ ಮಧ್ಯ ಭಾಗದಲ್ಲಿ ನೀವು ಆಟಗಾರರನ್ನು ಬದಲಾಯಿಸುವುದು ಬಹಳ ದೊಡ್ಡ ನಿರ್ಧಾರವಾಗುತ್ತದೆ" ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆಶಶ್ ನೆಹ್ರಾ ಪ್ರತಿಕ್ರಿಯೆ ನೀಡಿದ್ದಾರೆ.

ಎರಡನೇ ದಿನ ಭಾರತ ಕಮ್‌ಬ್ಯಾಕ್ ನಿರೀಕ್ಷೆ
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಕೇವಲ 202 ರನ್‌ಗಳಿಗೆ ಭಾರತ ತನ್ನ ಎಲ್ಲಾ ವಿಕೆಟ್‌ಗಳನ್ನು ಕೂಡ ಕಳೆದುಕೊಂಡಿದೆ. ಟೀಮ್ ಇಂಡಿಯಾ ಪರವಾಗಿ ನಾಯಕ ಕೆಎಲ್ ರಾಹುಲ್ ಅರ್ಧ ಶತಕ ಗಳಿಸಿ ಮಿಂಚಿದರೆ ಅನುಭವಿ ಆರ್ ಅಶ್ವಿನ್ 46 ರನ್‌ಗಳ ಕೊಡುಗೆ ನೀಡಿ ತಂಡಕ್ಕೆ ನೆರವಾದರು. ಈ ಪಂದ್ಯದಲ್ಲಿ ಪೂಜಾರ ಕೇವಲ 3 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಅಜಿಂಕ್ಯಾ ರಹಾನೆ ಆಡಿದ ಮೊದಲ ಎಸೆತದಲ್ಲಿಯೇ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಮೊದಲ ದಿನ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 34 ರನ್‌ಗಳಿಸಿದ್ದು ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications