3ನೇ ಟೆಸ್ಟ್‌ನಲ್ಲಿ ಈ ಆಟಗಾರನಿಗೆ ಅನ್ಯಾಯ ಮಾಡಬೇಡಿ: ಭಾರತೀಯ ಕ್ರಿಕೆಟಿಗನ ಪರ ಗಂಭೀರ್ ಬ್ಯಾಟಿಂಗ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಅಂತ್ಯವಾಗಿದ್ದು ಭಾರತ ದಕ್ಷಿಣ ಆಫ್ರಿಕಾ ತಂಡಕ್ಕೆ 7 ವಿಕೆಟ್‌ಗಳ ಅಂತರದಿಂದ ಸೋಲು ಕಂಡಿದೆ. ನಾಲ್ಕೇ ದಿನದಲ್ಲಿ ಅಂತ್ಯ ಕಂಡ ಪಂದ್ಯದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. ಅದರಲ್ಲೂ ಭಾರತದ ಬ್ಯಾಟಿಂಗ್ ವಿಭಾಗದ ವೈಫಲ್ಯ ತಂಡಕ್ಕೆ ದೊಡ್ಡ ಆಘಾತ ನೀಡಿತು. ಹೀಗಾಗಿ ಅಂತಿಮ ಇನ್ನಿಂಗ್ಸ್‌ನಲ್ಲಿ ಅಗತ್ಯವಾದ ಗುರಿಯನ್ನು ನಿಗದಿಪಡಿಸುವಲ್ಲಿ ಭಾರತ ವಿಫಲವಾದ ಕಾರಣ ಈ ಸೋಲು ಅನುಭವಿಸಿತು. ಇದರ ಪರಿಣಾಮವಾಗಿ ಮೂರು ಪಂದ್ಯಗಳ ಟೆಸ್ಟ್ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ.
ಇದೀಗ ಅಂತಿಮ ಪಂದ್ಯದಲ್ಲಿ ಗೆಲ್ಲುವ ತಂಡ ಈ ಟೆಸ್ಟ್ ಸರಣಿಯ ಟ್ರೋಪಿಯನ್ನು ಎತ್ತಿ ಹಿಡಿಯುವ ಅವಕಾಶವನ್ನು ಹೊಂದಿದೆ. ಹೀಗಾಗಿ ಈ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದ ಸಾಧನೆ ಮಾಡುತ್ತದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವದ ಪ್ರದರ್ಶನದ ಮೇಲೆ ಕುತೂಹಲ ಮೂಡಿಸಿದೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಓರ್ವ ಆಟಗಾರನ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭಿರ್ ಪ್ರತಿಕ್ರಿಯೆ ನೀಡಿದ್ದಾರೆ. ವಾಂಡರರ್ಸ್ ಟೆಸ್ಟ್‌ನಲ್ಲಿ ಭಾರತದ ಪರವಾಗಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ್ದ ಈ ಆಟಗಾರ ಕೇಪ್‌ಟೌನ್ ಟೆಸ್ಟ್‌ನಿಂದ ಹೊರಗುಳಿದರೆ ನಿಜಕ್ಕೂ ದುರಾದೃಷ್ಠ ಎಂದಿದ್ದಾರೆ ಗೌತಮ್ ಗಂಭೀರ್.

ಗಂಭೀರ್ ಮೆಚ್ಚುಗೆಗೆ ಪಾತ್ರವಾದ ಭಾರತೀಯ ಬ್ಯಾಟರ್
ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಮಯೋಚಿತ ಪ್ರದರ್ಶನ ನಿಡಿದ ಭಾರತೀಯ ಬ್ಯಾಟರ್ ಹನುಮ ವಿಹಾರಿ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಹನುಮ ವಿಹಾರಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ನೀಡಿದ ಪ್ರದರ್ಶನಕ್ಕೆ ಗೌತಮ್ ಗಂಭೀರ್ ಮನಸೋತಿದ್ದು ಕೇಪ್‌ಟೌನ್‌ನಲ್ಲಿ ಆತ ಆಡದಿದ್ದರೆ ವಿಪರ್ಯಾಸ ಎಂದಿದ್ದಾರೆ.

ಮಹತ್ವದ ಪ್ರದರ್ಶನ ನೀಡಿದ ಹನುಮ ವಿಹಾರಿ
ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಪರ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದ ಹನುಮ ವಿಹಾರಿ ಬಳಿಕ ಭಾರತ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿರಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದ ಹನುಮ ವಿಹಾರಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ವಿಹಾರಿ 20 ರನ್‌ಗಳ ಕೊಡುಗೆ ನಿಡಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 40 ರನ್‌ಗಳ ಕೊಡುಗೆ ಹನುಮ ವಿಹಾರಿ ಬ್ಯಾಟ್‌ನಿಂದ ಬಂದಿತ್ತು. ಭಾರತೀಯ ಯುವ ಆಟಗಾರ ತಂಡ ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಅಂತಿಮ ಆಟಗಾರ ಜೊತೆಗೆ ನೀಡಿದ ಸಮಯೋಚಿತ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳು ಹಾಗೂ ವಿಶ್ಲೇಷಕರ ಮನಗೆದ್ದಿದೆ. ಹೀಗಾಗಿಯೇ ಗೌತಮ್ ಗಂಭೀರ್ ಹನುಮ ವಿಹಾರಿ ಮುಂದಿನ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರೆ ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮೂರನೇ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಕೊಹ್ಲಿ
ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೆನ್ನು ನೋಡಿಗೆ ಒಳಗಾಗಿದ್ದ ಕಾರಣ ಆಡುವ ಬಳಗದಿಂದ ಹೊರಗುಳಿದಿದ್ದರು. ಹೀಗಾಗಿ ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದರು. ಇನ್ನು ವಿರಾಟ್ ಕೊಹ್ಲಿ ಸ್ಥಾನಕ್ಕೆ ಹನುಮ ವಿಹಾರಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಚೇತರಿಸಿಕೊಂಡು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹೀಗಾಗಿಯೇ ಹನುಮ ವಿಹಾತಿ ಕೊಹ್ಲಿಗೆ ಸ್ಥಾನವನ್ನು ಬಿಟ್ಟುಕೊಡಬೇಕಾಗಿದೆ.

ರಹಾನೆ ಬದಲಿಗೆ ವಿಹಾರಿ ಆಡಲಿ
"ರಹಾನೆ ಅಂತಿಮ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕವನ್ನು ಗಳಿಸಿದ್ದರು ಎಂಬ ಕಾರಣಕ್ಕೆ ವಿಹಾರಿ ಮುಂದಿನ ಪಂದ್ಯದಲ್ಲಿ ಅವಕಾಶವನ್ನು ಪಡೆಯದಿದ್ದರೂ ನಿಜಕ್ಕೂ ಅದು ವಿಪರ್ಯಾಸ. ಯಾಕೆಂದರೆ ಹನುಮ ವಿಹಾರಿ ಕೂಡ ಅಜೇಯ 40 ರನ್ ಬಾರಿಸಿದ್ದರು. ರಹಾನೆಯ ಬದಲಿಗೆ ಅವರ ಕ್ರಮಾಂಕದಲ್ಲಿ ರಹಾನೆ ಆಡಿದ್ದರೆ ಬಹುಶಃ ಅವರು ಕೂಡ ಅರ್ಧ ಶತಕವನ್ನು ಗಳಿಸಿರುತ್ತಿದ್ದರು. ಇಂತಾ ಬ್ಯಾಟರ್‌ಗೆ ನೀವು ಹೆಚ್ಚಿನ ಅವಕಾಶವನ್ನು ನೀಡಬೇಕಿದೆ. ನೀವು ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಅವರನ್ನು ಆಡಿಸಿ ನಂತರ ತಂಡದಿಂದ ಹೊರಗೊಡುವುದು ಸೂಕ್ತವಲ್ಲ. ಅದು ಬಹಳ ಅನ್ಯಾಯ. ನಾವು ಈಗಾಗಲೇ ಬಹಳ ಕಾಲದಿಂದ ರಹಾನೆ ಬ್ಯಾಟಿಂಗ್ ನೋಡುತ್ತಿದ್ದೇವೆ. ನನ್ನ ಪ್ರಕಾರ ವಿರಾಟ್ ಕೊಹ್ಲಿ ಮುಂದಿನ ಪಂದ್ಯದಲ್ಲಿ ಪುನರಾಗಮನ ಮಾಡಿದಾಗ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಿದರೆ ಹನುಮ ವಿಹಾರಿ ಐದನೇ ಕ್ರಮಾಂಕದಲ್ಲಿ ಆಡಬೇಕು. ಹೀಗೆ ಮಾಡುದರೆ ಮಾತ್ರವೇ ಉತ್ತಮ ದಾರಿಯಲ್ಲಿ ಸಾಗಲು ಸಾಧ್ಯ" ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications