For Quick Alerts
ALLOW NOTIFICATIONS  
For Daily Alerts
 

IND vs SA: ವಿರಾಟ್ ಕೊಹ್ಲಿ ದಾಖಲೆ ಅಳಿಸಲು ಗಿಲ್‌ಗಿದೆ ಗೋಲ್ಡನ್ ಚಾನ್ಸ್

ಟೀಮ್ ಇಂಡಿಯಾ ಯುವ ಆಟಗಾರ ಶುಭಮನ್‌ ಗಿಲ್ ಪ್ರಸಕ್ತ ವರ್ಷ ರನ್ ಮಳೆಯನ್ನು ಸುರಿಸಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ಇವರು ಹಲವು ದಾಖಲೆಯನ್ನು ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಶುಭಮನ್‌ ಗಿಲ್ ವಿರಾಟ್ ಕೊಹ್ಲಿ ಅವರ ಮತ್ತೊಂದು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಟಿ20 ಹಾಗೂ ಏಕದಿನ ಸರಣಿಯನ್ನು ಆಡಲಿದೆ. ಈ ವೇಳೆ ಶುಭಮನ್‌ ಗಿಲ್‌ ಸೀಮಿತ ಓವರ್‌ ಹಾಗೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ತಮ್ಮ ಗುರು ವಿರಾಟ್‌ ಕೊಹ್ಲಿ ಅವರ ಹಲವಾರು ದಾಖಲೆಗಳನ್ನು ಬೆನ್ನತ್ತಿರುವ ಶುಭಮನ್‌ ಗಿಲ್ ಪ್ರವಾಸದಲ್ಲಿ ಮತ್ತೊಂದು ದಾಖಲೆಯ ಮುರಿಯುವ ಗೋಲ್ಡನ್‌ ಚಾನ್ಸ್‌ ಹೊಂದಿದ್ದಾರೆ.

IND vs SA: Gill has golden chance to erase Virat Kohlis record

2023 ರ ವರ್ಷವು ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ಉತ್ತಮ ವರ್ಷವಾಗಿದೆ. ವಿರಾಟ್ ಕೊಹ್ಲಿ ಈ ವರ್ಷ ಒಟ್ಟು 8 ಶತಕಗಳನ್ನು ಗಳಿಸಿದ್ದಾರೆ, ಇದು ಪ್ರಸಕ್ತ ವರ್ಷ ಬ್ಯಾಟ್ಸ್‌ಮನ್ ಒಬ್ಬ ಬಾರಿಸಿದ ಗರಿಷ್ಠ ಶತಕದ ಸಂಖ್ಯೆ. ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಶುಭಮನ್ ಗಿಲ್ (7) ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಮತ್ತು ಶುಭಮನ್ ಗಿಲ್ ನಡುವೆ ಕೇವಲ ಒಂದು ಶತಕದ ಅಂತರವಿದೆ. ಅಂದರೆ, ದಕ್ಷಿಣ ಆಫ್ರಿಕಾ ವಿರುದ್ಧದ 3 ಟಿ20 ಪಂದ್ಯ ಅಥವಾ 3 ಏಕದಿನ ಸರಣಿಯಲ್ಲಿ ಶುಭ್‌ಮನ್ ಗಿಲ್ ಶತಕ ಬಾರಿಸಿದರೆ, ಅವರು ವಿರಾಟ್ ಕೊಹ್ಲಿ ದಾಖಲೆಯ ಸಮಕ್ಕೆ ನಿಲ್ಲುತ್ತಾರೆ. ಈ 6 ಪಂದ್ಯಗಳಲ್ಲಿ ಶುಭ್‌ಮನ್ 2 ಶತಕ ಬಾರಿಸಿದರೆ ವಿರಾಟ್‌ ದಾಖಲೆಯನ್ನು ಅಳಿಸಿ ಹಾಕುತ್ತಾರೆ.

IND vs SA: Gill has golden chance to erase Virat Kohlis record

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಏಕದಿನ ವಿಶ್ವಕಪ್ ಬಳಿಕ ವಿಶ್ರಾಂತಿ ಪಡೆದಿರುವ ವಿರಾಟ್‌ ಕುಟುಂಬದ ಜೊತೆ ಇಂಗ್ಲೆಂಡ್ ಪ್ರವಾಸ ಬೆಳೆಸಿದ್ದಾರೆ. ಈ ಫೋಟೋಗಳು ಸಹ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿವೆ. ವಿರಾಟ್ ಕೊಹ್ಲಿ ನೇರವಾಗಿ ಟೆಸ್ಟ್ ಸರಣಿಗೆ ತಂಡವನ್ನು ಸೇರಿಕೊಳ್ಳುತ್ತಾರೆ. ಅಲ್ಲಿ ಶುಭಮನ್ ಕೂಡ ಜೊತೆಯಾಗಲಿದ್ದಾರೆ. ಅಂದರೆ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿರಾಟ್‌ಗಿಂತ ಶುಭಮನ್ ಗಿಲ್ 6 ಪಂದ್ಯಗಳನ್ನು ಆಡುವ ಎಲ್ಲಾ ಸಾಧ್ಯತೆಗಳಿವೆ.

IND vs SA: Gill has golden chance to erase Virat Kohlis record

ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ನಂತರ, 2023 ರಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ಪಟ್ಟಿಯಲ್ಲಿ ಡ್ಯಾರಿಲ್ ಮಿಚೆಲ್ ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಈ ವರ್ಷ ಎಲ್ಲಾ ಮೂರು ಮಾದರಿಗಳಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಬಾಂಗ್ಲಾದೇಶದ ನಾಯಕ ನಜ್ಮುಲ್ ಹಸನ್ ಶಾಂಟೊ ಮತ್ತು ನ್ಯೂಜಿಲೆಂಡ್‌ನ ಡೆವೊನ್ ಕಾನ್ವೆ ತಲಾ 5 ಶತಕಗಳೊಂದಿಗೆ ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ ತೆಂಡೂಲ್ಕರ್ 1998ರಲ್ಲಿ 12 ಶತಕ ಸಿಡಿಸಿದ್ದರು.

Story first published: Saturday, December 9, 2023, 12:29 [IST]
Other articles published on Dec 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+